Published
2 weeks agoon
ಕೊಲ್ಕತ್ತ: ಆಗಸ್ಟ್ 03 ( ಯು.ಎನ್.ಐ.) ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸಂಪುಟ ವಿಸ್ತರಣೆಯಾಗಿದೆ. 2011 ರಲ್ಲಿ ಪಕ್ಷವು ಅಧಿಕಾರಕ್ಕೆ ಬಂದ ನಂತರದ ಅತಿದೊಡ್ಡ ಸಂಪುಟ ಎಂದು ಬಿಂಬಿತವಾಗಿದ್ದು ಕ್ಯಾಬಿನೆಟ್ ಗೆ ಐದು ಹೊಸ ಮುಖಗಳು ಸೇರಿದಂತೆ 9 ಮಂದಿಯನ್ನ ಸೇರಿಸಿಕೊಳ್ಳಲಾಗಿದೆ.
ಹೊಸಬರಲ್ಲಿ ದೊಡ್ಡ ಹೆಸರೆಂದರೆ ಬಾಬುಲ್ ಸುಪ್ರಿಯೊ . ಬಿಜೆಪಿಯ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ, ಕಳೆದ ವರ್ಷ ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಗೊಂಡರು.
ಬಾಬುಲ್ ಸುಪ್ರಿಯೊ ಅವರೊಂದಿಗೆ ಸ್ನೇಹಶಿಶ್ ಚಕ್ರವರ್ತಿ, ಪಾರ್ಥ ಭೌಮಿಕ್, ಉದಯನ್ ಗುಹಾ ಮತ್ತು ಪ್ರದೀಪ್ ಮಜುಂದಾರ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ನಾಲ್ವರು ಕಿರಿಯ ಮಂತ್ರಿಗಳಾಗಿ ಬಿರ್ಬಹಾ ಹನ್ಸ್ದಾ, ಬಿಪ್ಲಬ್ ರಾಯ್ ಚೌಧರಿ, ತಜ್ಮುಲ್ ಹೊಸೈನ್ ಮತ್ತು ಸತ್ಯಜಿತ್ ಬರ್ಮನ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿಯವರ ಆಪ್ತ ಸಹಾಯಕ ಪಾರ್ಥ ಚಟರ್ಜಿ ಅವರನ್ನು ಬಂಧಿಸಿದ ದಿನಗಳ ನಂತರ ಐವರು ಹೊಸ ಸಚಿವರೊಂದಿಗೆ 9 ಮಂದಿ ಇಂದು ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಿದರು.
ಪಾರ್ಥ ಚಟರ್ಜಿ ಬಂಧನದ ನಂತರ ಅವರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯಲಾಯಿತು. ಅವರು ಕೈಗಾರಿಕೆ, ವಾಣಿಜ್ಯ ಮತ್ತು ಉದ್ಯಮಗಳು ಮತ್ತು ಸಂಸದೀಯ ವ್ಯವಹಾರಗಳು ಸೇರಿದಂತೆ ಐದು ಪ್ರಮುಖ ಇಲಾಖೆಗಳ ಉಸ್ತುವಾರಿ ವಹಿಸಿದ್ದರು.
ಸಂಪುಟ ವಿಸ್ತರಣೆ ನಂತರ ಸಚಿವ ಸಂಪುಟ ಪುನಾರಚನೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಕೈ ಬಿಡುವುದಿಲ್ಲವೆಂಬುದಕ್ಕೆ ನಾನೇ ಉದಾಹರಣೆ: ಬಿಎಸ್ ವೈ
ನಿತಿನ್ ಗಡ್ಕರಿ ಔಟ್, ಬಿಎಸ್ ವೈ ಇನ್
ಸೇವೆ ಸಲ್ಲಿಸುವ ಗೌರವಕ್ಕೆ ಆಭಾರಿ: ಮಾಜಿ ಸಿಎಂ ಬಿಎಸ್ ವೈ
ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಮನವಿ ಬಂದಿದೆ. ಆದ್ರೆ…: ಸಚಿವ ಆರ್. ಅಶೋಕ್
ಬಿಜೆಪಿಯ ಅತ್ಯುನ್ನತ ಮಂಡಳಿಯಲ್ಲಿ ಮಾಜಿ ಸಿಎಂ ಬಿಎಸ್ ವೈಗೆ ಸ್ಥಾನ
ಎಲ್ಲವೂ ಸರಿಯಿದೆ, ಏನೂ ತೊಂದರೆಯಿಲ್ಲ: ಸಿಎಂ ಬೊಮ್ಮಾಯಿ