Connect with us


      
ದೇಶ

‘ಕಾಮಿಡಿ ಶೋಗೆ ರಾಹುಲ್ ಗಾಂಧಿಗೆ ಕರೆ ಮಾಡಿ’ ಗೃಹ ಸಚಿವ ನರೋತ್ತಮ್ ಮಿಶ್ರಾ ತಿರುಗೇಟು

Vanitha Jain

Published

on

ಭೋಪಾಲ್, ಡಿಸೆಂಬರ್ 14(ಯು.ಎನ್.ಐ) ಆಡಳಿತಾರೂಢ ಬಿಜೆಪಿ ಮತ್ತು ಬಲಪಂಥೀಯ ಗುಂಪುಗಳ ಒತ್ತಡದಿಂದಾಗಿ ದೇಶಾದ್ಯಂತ ಕಾಮಿಕ್ ಕಾರ್ಯಕ್ರಮಗಳ ರದ್ದತಿಯನ್ನು ಎದುರಿಸಿದ ಸ್ಟ್ಯಾಂಡ್-ಅಪ್ ಕಾಮಿಕ್ಸ್ ಕುನಾಲ್ ಕಮ್ರಾ ಮತ್ತು ಮುನಾವರ್ ಫರುಕಿಗೆ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಆಹ್ವಾನಿಸಿರುವುದರ ಬಗ್ಗೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ತಿರುಗೇಟು ನೀಡಿದ್ದಾರೆ.

ದಿಗ್ವಿಜಯ ಸಿಂಗ್ ಜೀ ಅವರು ಕಾಮಿಡಿ ಶೋ ನಡೆಸಲು ಬಯಸಿದರೆ, ಅವರು ಸ್ಟ್ಯಾಂಡ್-ಅಪ್ ಕಾಮಿಕ್ಸ್ ಕುನಾಲ್ ಕಮ್ರಾ ಮತ್ತು ಮುನಾವರ್ ಫರುಕಿ ಬದಲು ರಾಹುಲ್ ಗಾಂಧಿಯನ್ನು ಏಕೆ ಕರೆಯುವುದಿಲ್ಲ? ಎಂದು ಪ್ರಶ್ನಿಸಿ ಕಾಮಿಡಿ ಶೋಗೆ ರಾಹುಲ್ ಗಾಂಧಿಗೆ ಕರೆ ಮಾಡಿ ಹೇಳಿದ್ದಾರೆ.

ಸೋಮವಾರ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಸಿಂಗ್, “ನಾನು ಭೋಪಾಲ್‍ನಲ್ಲಿ ಕುನಾಲ್ ಮತ್ತು ಮುನಾವರ್‍ಗಾಗಿ ಪ್ರದರ್ಶನವನ್ನು ಆಯೋಜಿಸುತ್ತೇನೆ. ಎಲ್ಲಾ ಜವಾಬ್ದಾರಿ ನನ್ನದಾಗಿರುತ್ತದೆ.” ಎಂದು ಟ್ವೀಟ್ ಮಾಡಿದ್ದರು.

ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಇತ್ತೀಚಿಗೆ ಕಮ್ರಾ ಮತ್ತು ಫಾರುಕಿ ಅವರು ಒಂದು ವೇಳೆ ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸುವ ಕೃತ್ಯವನ್ನು ನಿರ್ವಹಿಸಿದರೆ ಅವರನ್ನು ಜೈಲಿಗೆ ಹಾಕಲಾಗುವುದು ಎಂದು ಬೆದರಿಕೆ ಒಡ್ಡಿದ್ದರು.

ಯಾರಾದರೂ ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸುವ ಕಾರ್ಯಕ್ರಮವನ್ನು ನಡೆಸಿದರೆ, ಅವರ ಸ್ಥಾನ ಜೈಲು ಮಾತ್ರ, ಯಾವುದೇ ಸಂದರ್ಭದಲ್ಲೂ ಯಾರ ಧಾರ್ಮಿಕ ಭಾವನೆಗಳನ್ನು ಅವಮಾನಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಮಿಶ್ರಾ ಹೇಳಿದರು.

Share