Connect with us


      
ದೇಶ

ಚಿದಂಬರಂಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿದ ಸಿಬಿಐ

Vanitha Jain

Published

on

ನವದೆಹಲಿ: ಮೇ 17 (ಯು.ಎನ್.ಐ.) ಅಕ್ರಮವಾಗಿ ಚೀನಾದ ಪ್ರಜೆಗಳಿಗೆ ವೀಸಾ ನೀಡಿದ ಹೊಸ ಪ್ರಕರಣ ಹಿನ್ನೆಲೆ ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸಿತು.

ಚಿದಂಬರಂಗೆ ಸಂಬಂಧಿಸಿದ ಹಲವಾರು ರಾಜ್ಯಗಳ ಒಂಬತ್ತು ಸ್ಥಳಗಳಲ್ಲಿ ಕೇಂದ್ರ ಸಂಸ್ಥೆ ಮಂಗಳವಾರ ಬೆಳಗ್ಗೆಯಿಂದ ಶೋಧ ನಡೆಸುತ್ತಿದೆ. ಬೆಳಗ್ಗೆ 8 ಗಂಟೆಗೆ ಸಿಬಿಐ ಶೋಧ ಕಾರ್ಯ ಆರಂಭವಾಗಿದ್ದು, ಮುಂದುವರಿದಿದೆ. ಚಿದಂಬರಂ ಮನೆಯಲ್ಲಿ ಇರುವವರ ಹೇಳಿಕೆಯನ್ನೂ ಸಿಬಿಐ ದಾಖಲಿಸಿಕೊಳ್ಳುತ್ತಿದೆ.

ದೆಹಲಿ, ಮುಂಬೈ, ಚೆನ್ನೈ ಮತ್ತು ತಮಿಳುನಾಡಿನ ಶಿವಗಂಗೈ ಸೇರಿದಂತೆ ವಿವಿಧೆಡೆ ಸಿಬಿಐ ಶೋಧ ನಡೆಸುತ್ತಿದೆ. ಮೂಲಗಳ ಪ್ರಕಾರ, ಕಾರ್ತಿ ಚಿದಂಬರಂ ವಿರುದ್ಧ ತನಿಖಾ ಸಂಸ್ಥೆಯು 2010-14ರ ನಡುವೆ ನಡೆದ ವಿದೇಶಿ ಹಣ ರವಾನೆ ಆರೋಪದ ಮೇಲೆ ಹೊಸ ಪ್ರಕರಣವನ್ನು ದಾಖಲಿಸಿದೆ.

ತಂದೆ ಚಿದಂಬರಂ, ಮಗ ಕಾರ್ತಿ ಚಿದಂಬರಂ ಇಬ್ಬರೂ ನಿಯಮಗಳನ್ನು ಉಲ್ಲಂಘಿಸಿ ಚೀನಾದ ಪ್ರಜೆಗಳಿಗೆ ವೀಸಾ ಪಡೆಯಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪಂಜಾಬ್‌ನಲ್ಲಿ ಒಂದು ಯೋಜನೆಯ ಕಾರಣಕ್ಕಾಗಿ ಚಿದಂಬರಂ ಅವರಿಗೆ ವೀಸಾ ಪಡೆಯಲು ಸಹಾಯ ಮಾಡಿದರು ಎಂದು ಆರೋಪಿಸಲಾಗಿದೆ.

Share