Published
6 months agoon
ಕೂನೂರು: ಡಿ, 8 (ಯುಎನ್ಐ) ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಅವರಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ತಮಿಳುನಾಡಿನ ಕೂನೂರಿನಲ್ಲಿ ಬುಧವಾರ ಪತನಗೊಂಡಿದೆ.
ಈವರೆಗೆ ಮೂವರನ್ನು ರಕ್ಷಿಸಲಾಗಿದ್ದು, ಉಳಿದವರಿಗಾಗಿ ಶೋಧ ನಡೆಯುತ್ತಿದೆ. ಮೂಲಗಳ ಪ್ರಕಾರ, ಹೆಲಿಕಾಪ್ಟರ್ನಲ್ಲಿ ಹದಿನಾಲ್ಕು ಮಂದಿ ಇದ್ದರು ಎಂದು ಹೇಳಲಾಗ್ತಿದೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಿಡಿಎಸ್ ಅವರಿಗೆ ಏನು ಆಗದಿರಲಿ ಎಂದು ಪ್ರಾರ್ಥಿಸಿದ್ದಾರೆ.
Received the news of an Army helicopter crash carrying CDS General Shri Bipin Rawat Ji and other senior Army officials in Tamilnadu. I am praying for their well-being and good health.
— Shivraj Singh Chouhan (@ChouhanShivraj) December 8, 2021
ನಮ್ಮ ಸಿಡಿಎಸ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನವಾಗಿರುವ ಸುದ್ದಿ ತಿಳಿದು ತೀವ್ರ ದುಃಖವಾಗಿದೆ ಎಂದು ಎಎಪಿ ಶಾಸಕ ರಾಘವ್ ಚಡ್ಡಾ ಟ್ವೀಟ್ ಮಾಡಿದ್ದಾರೆ.
Deeply saddened to learn about the crash of chopper ferrying our CDS Bipin Rawat and his wife. Praying for everyone’s safety.
— Raghav Chadha (@raghav_chadha) December 8, 2021
ಘಟನೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಆಘಾತ ವ್ಯಕ್ತಪಡಿಸಿದ್ದಾರೆ.
Shocked to hear about the tragic crash of helicopter with CoDS Shri Bipin Rawat ji on board.
I pray for everyone’s safety, wellbeing.— Nitin Gadkari (@nitin_gadkari) December 8, 2021
ಘಟನೆಯ ಕುರಿತು ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ ಆಗ್ರಹಿಸಿದ್ದಾರೆ.