Connect with us


      




ದೇಶ

ಸಕಲ ಮಿಲಿಟರಿ ಗೌರವದೊಂದಿಗೆ ಬಿಪಿನ್ ರಾವತ್ ಅಂತ್ಯಕ್ರಿಯೆ

Vanitha Jain

Published

on

ನವದೆಹಲಿ, ಡಿಸೆಂಬರ್ 10(ಯು.ಎನ್.ಐ) ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಅಂತ್ಯಸಂಸ್ಕಾರ ಸಕಲ ಮಿಲಿಟರಿ ಗೌರವದೊಂದಿಗೆ ನವದೆಹಲಿಯ ಕಂಟೋನ್ಮೆಂಟ್‍ನ ಬ್ರಾರ್ ಸ್ಕ್ವೇರ್‍ನಲ್ಲಿ ನಡೆಯಿತು.

ಇದೇ ವೇಳೆ ಪತ್ನಿ ಮಧುಲಿಕಾರಿಗೂ ಬಿಪಿನ್ ರಾವತ್ ಸಮಾಧಿ ಪಕ್ಕದಲ್ಲೇ ಅಂತ್ಯಸಂಸ್ಕಾರ ಮಾಡಲಾಯಿತು. ಪುತ್ರಿಯರಾದ ಕೃತಿಕಾ ಮತ್ತು ತಾರಿಣಿ ಅಂತಿಮ ವಿಧಿವಿಧಾನ ನೆರವೇರಿಸಿದರು. ಸಿಡಿಎಸ್ ಅವರಿಗೆ 17 ಗನ್  ಸಲ್ಯೂಟ್ ನೀಡಲಾಯಿತು

ಸುಮಾರು 800 ಸೇವಾ ಸಿಬ್ಬಂದಿಯೊಂದಿಗೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾನೂನು ಸಚಿವ ಕಿರಣ್ ರಿಜಿಜು, ಭಾರತ ಫ್ರಾನ್ಸ್ ರಾಯಭಾರಿ ಇಮ್ಯಾನುಯೆಲ್ ಲೆನೈನ್ ಮತ್ತು ಭಾರತದಲ್ಲಿನ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರು ಬಿಪಿನ್ ರಾವತ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ಭಾರತದ ಮೊದಲ ಸಿಡಿಎಸ್ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಎಲ್ಲಾ ವರ್ಗಗಳ ಜನರು ಭಾಗಿಯಾಗಿದ್ದರು. ಸಿಡಿಎಸ್ ರಾವತ್ ಅಭಿಮಾನಿಗಳು ಅಂತ್ಯಕ್ರಿಯೆಯ ರಸ್ತೆಯ ಉದ್ದಕ್ಕೂ ಉಪಸ್ಥಿತರಿದ್ದರು. ಈ ವೇಳೆ ಎಲ್ಲಿಯವರೆಗೆ ಸೂರ್ಯ, ಚಂದ್ರ ಇರುತ್ತವೋ ಅಲ್ಲಿಯವರೆಗೆ ಬಿಪಿನ್ ರಾವತ್ ಹೆಸರು ಉಳಿಯಲಿದೆ ಎಂದು ಘೋಷಣೆ ಕೂಗಿದರು.

ಶುಕ್ರವಾರ ತಮಿಳುನಾಡಿನ ಕುನೂರಿನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಬಿಪಿನ್ ರಾವತ್, ಪತ್ನಿ ಮಧುಲಿಕಾ ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದರು.

Share