Connect with us


      




ಆರೋಗ್ಯ

ಕೋವಿಡ್ ವಿರುದ್ಧ  ಆಯುಷ್, ಆರೋಗ್ಯ ಸಚಿವಾಲಯ ಸಂಯುಕ್ತ ಹೋರಾಟ

Kumara Raitha

Published

on

ಕೇಂದ್ರ ಸರ್ಕಾರದ ಆಯುಷ್ ಇಲಾಖೆ ಕೋವಿಡ್ ವಿರುದ್ಧ ದೇಹ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಸಹಾಯಕವಾಗುವ ಆಯುರ್ವೇದ ಕಿಟ್ ಅನ್ನು ಪ್ರಾರಂಭಿಸಿದೆ

ಗುವಾಹಟಿ: ಜನೆವರಿ 10 (ಯು.ಎನ್.ಐ.)ವೇಗವಾಗಿ ಹರಡುತ್ತಿರುವ ಒಮೈಕ್ರಾನ್ ರೂಪಾಂತರದ ಸಾಂಕ್ರಾಮಿಕ ರೋಗದ ಮೂರನೇ ಅಲೆಯ ವಿರುದ್ಧ ರಾಷ್ಟ್ರ ಹೋರಾಡುತ್ತಿದೆ. ಕೇಂದ್ರ ಸರಕಾರ, ಕೋವಿಡ್ -19  ವಿರುದ್ಧದ ಸಮರದಲ್ಲಿ ಅಗತ್ಯವಿರುವ ಸಂಪನ್ಮೂಲಗಳೊಂದಿಗೆ ಸಜ್ಜಾಗುವಂತೆ ಆಯುಷ್ ಸಚಿವಾಲಯವನ್ನು ಸಂಯೋಜಿಸಲು ಆರೋಗ್ಯ ಸಚಿವಾಲಯವನ್ನು ಕೇಳಿದೆ ಎಂದು ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್  ಹೇಳಿದ್ದಾರೆ.

ಈ ದಿಶೆಯಲ್ಲಿ ಆಯುಷ್ ಇಲಾಖೆಯು ಆಯುರ್ವೇದ ಕಿಟ್ ಅನ್ನು ಪ್ರಾರಂಭಿಸಿದೆ – ಆಯುರಾಕ್ಷಾ ಕಿಟ್ – ಚ್ಯವನಪ್ರಾಶ್, ಸಂಶ್ಮಣಿ ವತಿ, ಆಯುಷ್ ಕಧಾಗಳನ್ನು ಹೊಂದಿದೆ. ಇದು ಜನತೆಯ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಮತ್ತು ಅವರನ್ನು ಆರೋಗ್ಯವಾಗಿಡಲು ಸಹಾಯಕವಾಗುತ್ತದೆ ಎಂದಿದ್ದಾರೆ.

ರಾಷ್ಟ್ರವು ಮತ್ತೊಂದು  ಕೋವಿಡ್ 19 ಸೋಂಕು ಉಲ್ಬಣಕ್ಕೆ ಸಾಕ್ಷಿಯಾಗುತ್ತಿದೆ. ಇಂಥ  ಆರೋಗ್ಯ ವ್ಯವಸ್ಥೆಯು ಸವಾಲನ್ನು ನಿಭಾಯಿಸಲು  ಸಿದ್ಧವಾಗಿದ್ದೇವೆ. ಆಯುಷ್ ಸಚಿವಾಲಯವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೆ ನಿಕಟ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಪರಸ್ಪರ ಪೂರಕವಾಗಿ ಔಷಧಿಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಆಯುಷ್ ಸಚಿವಾಲಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಸಂಬಂಧಿತ ಮಾರ್ಗಸೂಚಿಗಳನ್ನು ನೀಡುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಆಯುಷ್ ವ್ಯವಸ್ಥೆಗಳು ಕೋವಿಡ್ 19  ನಿಯಂತ್ರಣ ಮತ್ತು ಚಿಕಿತ್ಸೆಯಲ್ಲಿ ಸಹಾಯವಾಗುತ್ತದೆ ಎಂಬುದು  ಅನೇಕ ಪುರಾವೆ ಆಧಾರಿತವಾಗಿ ಸಾಬೀತಾಗಿದೆ ಎಂದ ಅವರು ಜತೆ ನಿಯಮಿತವಾಗಿ ಯೋಗ ಮಾಡಲು ಮತ್ತು ಆರೋಗ್ಯಕರ ಆಯುಷ್ ಆಹಾರ್ ಸೇವಿಸಲು ಸಲಹೆ ನೀಡಿದ್ದಾರೆ.

Share