Connect with us


      
ದೇಶ

ಪಂಜಾಬ್ ಶಾಸಕ ಫತೇಜಾಂಗ್ ಸಿಂಗ್ ಬಾಜ್ವಾಗೆ ವೈ+ ಭದ್ರತೆ

Vanitha Jain

Published

on

ನವದೆಹಲಿ: ಜನೆವರಿ 08 (ಯು.ಎನ್.ಐ.) ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಪಂಜಾಬ್ ಶಾಸಕ ಫತೇಜಾಂಗ್ ಸಿಂಗ್ ಬಾಜ್ವಾ ಅವರಿಗೆ ಕೇಂದ್ರ ಸರಕಾರ ವೈ+ ವರ್ಗದ ವಿಐಪಿ ಭದ್ರತೆಯನ್ನು ಒದಗಿಸಿದೆ.

63 ವರ್ಷದ ಅವರು ರಾಜ್ಯದ ಖಾಡಿಯನ್ ವಿಧಾನಸಭಾ ಕ್ಷೇತ್ರದ ಶಾಸಕ. ಇವರು ಡಿಸೆಂಬರ್ 28 ರಂದು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಫತೇಜಾಂಗ್ ಸಿಂಗ್ ಬಾಜ್ವಾ ಅವರು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಪರತಾಪ್ ಸಿಂಗ್ ಬಾಜ್ವಾ ಅವರ ಕಿರಿಯ ಸಹೋದರ.

ಫತೇಜಾಂಗ್ ಸಿಂಗ್ ಬಜ್ವಾ ಪಂಜಾಬ್‍ನಲ್ಲಿ ಅವರ ಚಲನೆಗೆ ವೈ+ ಭದ್ರತೆಯನ್ನು ಒದಗಿಸಲಾಗಿದೆ ಎಂದು ಭದ್ರತಾ ಸಂಸ್ಥೆಯ ಮೂಲಗಳು ತಿಳಿಸಿವೆ.
ಭದ್ರತಾ ಕಾರ್ಯವನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (ಸಿಆರ್‍ಪಿಎಫ್) ನೀಡಲಾಗಿದೆ ಮತ್ತು ಈ ಭದ್ರತಾ ವರ್ಗೀಕರಣದ ಭಾಗವಾಗಿ, ಬಾಜ್ವಾ ಅವರು

ರಾಜ್ಯದಲ್ಲಿ ಪ್ರಯಾಣಿಸುವಾಗಲೆಲ್ಲಾ 3-4 ಸಶಸ್ತ್ರ ಕಮಾಂಡೋಗಳ ತಂಡವನ್ನು ಹೊಂದಿರುತ್ತಾರೆ ಎಂದು ಹೇಳಿದೆ. ಇತ್ತೀಚೆಗೆ, ಕೇಂದ್ರ ಸರ್ಕಾರವು ಡಿಸೆಂಬರ್‍ನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಪಂಜಾಬ್ ರಾಜಕಾರಣಿ ರಾಣಾ ಗುರ್ಮಿತ್ ಸಿಂಗ್ ಸೋಧಿಗೆ ಹೆಚ್ಚಿನ ಜೆಡ್- ವರ್ಗದ ವಿಐಪಿ ಭದ್ರತೆಯನ್ನು ನೀಡಿತ್ತು.

ಮಾಜಿ ಶಿರೋಮಣಿ ಅಕಾಲಿ ದಳದ ನಾಯಕ ಮತ್ತು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಮುಖ್ಯಸ್ಥ ಮಂಜಿಂದರ್ ಸಿಂಗ್ ಸಿರ್ಸಾ ಭದ್ರತೆಯನ್ನು ಕೇಂದ್ರವು ವೈ ವರ್ಗದಿಂದ ಜೆಡ್‍ಗೆ ಅಪ್‍ಗ್ರೇಡ್ ಮಾಡಿದೆ. ಕಳೆದ ತಿಂಗಳು ಡಿಸೆಂಬರ್‍ನಲ್ಲಿ ಬಿಜೆಪಿ ಸೇರಿದ್ದರು.

Share