Connect with us


      




ಸಿನೆಮಾ

‘ಲಕ ಲಕ ಲ್ಯಾಂಬರ್ಗಿನಿ’ ಎನ್ನುತ್ತಿದ್ದಾರೆ ಚಂದನ್ ಶೆಟ್ಟಿ, ರಚಿತಾ ರಾಮ್

Vanitha Jain

Published

on

ಬೆಂಗಳೂರು, ಡಿಸೆಂಬರ್ 13, (ಯು.ಎನ್.ಐ) ಸ್ಯಾಂಡಲ್‍ವುಡ್ ರ್ಯಾಪರ್, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಲಕ ಲಕ ಲ್ಯಾಂಬರ್ಗಿನಿ ಎಂದು ಹಾಡಲು, ಕುಣಿಸಲು ಸಜ್ಜಾಗಿದ್ದಾರೆ.

ಹೌದು ಹೊಸ ವಿಶಿಷ್ಟತೆಗಳೊಂದಿಗೆ ಹೊಸ ವರ್ಷದ ರಂಗನ್ನು ಹೆಚ್ಚಿಸುವ ಚಂದನ್ ಶೆಟ್ಟಿ ಈ ಬಾರಿಯೂ ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಲಿಲ್ಲ. ಇವರ ಹೊಸ ಸಾಂಗ್ ಲಕ ಲಕ ಲ್ಯಾಂಬರ್ಗಿನಿಯನ್ನು ಹೊಸ ವರ್ಷದಲ್ಲಿ ಬಿಡುಗಡೆ ಮಾಡಲು ಚಂದನ್ ಶೆಟ್ಟಿ ತಯಾರಿ ನಡೆಸುತ್ತಿದ್ದು, ಇದರ ಫಸ್ಟ್ ಪೋಸ್ಟರ್ ಅನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಬಿಡುಗಡೆ ಮಾಡಿದ್ದಾರೆ.

ಈ ಬಾರಿ ಚಂದನ್ ಶೆಟ್ಟಿಯ ಲಕ ಲಕ ಲ್ಯಾಂಬರ್ಗಿನಿಯಲ್ಲಿ ಡಿಂಪಲ್ ಕ್ವಿನ್ ರಚಿತಾ ರಾಮ್ ಹೆಜ್ಜೆ ಹಾಕಿರುವುದು ಹಾಡಿನ ತಾಳವನ್ನು ಮತ್ತಷ್ಟು ಹೆಚ್ಚಿಸಿದೆ. ಚಂದನ್ ಶೆಟ್ಟಿ ಬಿಡುಗಡೆಗೊಳಿಸಿರುವ ಪೋಸ್ಟರ್‍ನಲ್ಲಿ ಚಂದನ್ ಫುಲ್ ರಾಕ್ ಆಗಿ ಕಾಣಿಸಿಕೊಂಡರೆ ರಚಿತಾ ರಾಮ್ ಸ್ವಲ್ಪ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ.

ಬಿಂದ್ಯಾ ಮೂವೀಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಲಕ ಲಕ ಲ್ಯಾಂಬರ್ಗಿನಿ ಹಾಡನ್ನು ನಂದ ಕಿಶೋರ್ ನಿರ್ದೇಶಿಸಿದ್ದು, ಆರ್ ಕೇಶವ್ ಬಂಡವಾಳ ಮತ್ತು ಬಿಂದ್ಯಾ ಕೆ ಗೌಡ ಬಂಡವಾಳ ಹೂಡಿದ್ದಾರೆ.

Share