Connect with us


      
ಸಿನೆಮಾ

ಚಾರ್ಲಿ 777 ಚಿತ್ರ ಬಿಡುಗಡೆ ದಿನಾಂಕ ತಿಳಿಯಲು ಕ್ಷಣಗಣನೆ

Lakshmi Vijaya

Published

on

ಬೆಂಗಳೂರು: ಏಪ್ರಿಲ್ 10 ( ಯು.ಎನ್.ಐ) ಅವನೇ ಶ್ರೀಮನ್ನಾರಾಯಣ ಬಳಿಕ ಚಾರ್ಲಿ 777 ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅವರನ್ನು ನೋಡಲು ಕಾತರರಾಗಿದ್ದ ಸಿಂಪಲ್ ಸ್ಟಾರ್ ಅಭಿಮಾನಿಗಳಿಗೆ ಇಂದು ಶುಭ ಸುದ್ದಿ ಸಿಗಲಿದೆ. ಹೇಗೆಂದರೆ ಇಂದು ಬೆಳಗ್ಗೆ 11 ಗಂಟೆ 04 ನಿಮಿಷಕ್ಕೆ ಚಾರ್ಲಿ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ. ಇಂದು ರಾಮನವಮಿ ಇದ್ದು, ಹಬ್ಬದ ದಿನ ಚಾರ್ಲಿ 777 ಸಿನಿಮಾ ತಂಡ ನಟ ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಉಡುಗೊರೆ ನೀಡಲು ಸಜ್ಜಾಗಿದೆ.

ಇತ್ತೀಚಿಗಷ್ಟೇ ನಟ ರಕ್ಷಿತ್ ಶೆಟ್ಟಿ ಸಿನಿಮಾ ಬಿಡುಗಡೆ ದಿನಾಂಕವನ್ನ ಭಾನುವಾರ ಘೋಷಣೆ ಮಾಡಲಾಗುತ್ತದೆ ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಅಧಿಕೃತವಾಗಿ ಪೋಸ್ಟ್ ಮಾಡಿದ್ದರು.

ಈಗಾಗಲೇ ಸಿನಿಮಾದ ಟೀಸರ್, ಪೋಸ್ಟರ್ ಮತ್ತು ಹಾಡುಗಳು ಭಾರೀ ನಿರೀಕ್ಷೆ ಹುಟ್ಟಿಸಿದ್ದು ಸಿನಿಮಾ ಬಿಡುಗಡೆ ಯಾವಾಗ ಆಗಲಿದೆ ಎಂಬ ತವಕ ಹೆಚ್ಚಾಗಿದೆ. ಈ ಚಿತ್ರದಲ್ಲಿ ನಾಯಿಯೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ರಕ್ಷಿತ್ ಶೆಟ್ಟಿ ಜೊತೆಗೆ ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ, ಡ್ಯಾನಿಶ್ ಸೇಟ್ ಸೇರಿ ಹಲವರು ಅಭಿನಯಿಸಿರೋ ಈ  ಚಿತ್ರವನ್ನ ಕಿರಣ್ ರಾಜ್ ನಿರ್ದೇಶಿಸಿದ್ದಾರೆ.

Share