Published
8 months agoon
ಬೀಜಿಂಗ್, ಜನವರಿ 04 (ಯು.ಎನ್.ಐ.) ಲಕ್ಷಣ ರಹಿತ ಮೂರು ಕರೋನಾ ಕೇಸ್ ಗಳು ದಾಖಲಾಗಿದ್ದರಿಂದ ಚೀನಾದ ನಗರವೊಂದನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.
ಚೀನಾದ ಹೆನಾನ್ ಪ್ರಾಂತ್ಯದಲ್ಲಿರುವ ಯುಝೌ ನಗರವು ಸುಮಾರು 12 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಇತ್ತೀಚೆಗೆ ಈ ನಗರದಲ್ಲಿ 3 ಲಕ್ಷಣ ರಹಿತ ಕೋವಿಡ್ ಪ್ರಕರಣಗಳು ಪತ್ತೆಯಾದ ನಂತ್ರ ನಿನ್ನೆ ರಾತ್ರಿಯಿಂದ ಸಂಪೂರ್ಣ ಲಾಕ್ ಡೌನ್ ಹೇರಲಾಗಿದೆ.
ಮಧ್ಯ ಚೀನಾದ ಯುಝೌ ನಗರದಲ್ಲಿ ಸೋಮವಾರ ರಾತ್ರಿಯಿಂದಲೇ ಎಲ್ಲ ನಾಗರಿಕರು ತಮ್ಮ ಮನೆಗಳಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ನಗರದಲ್ಲಿ ಈಗಾಗಲೇ ಬಸ್ ಮತ್ತು ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಶಾಪಿಂಗ್ ಮಾಲ್ಗಳು, ವಸ್ತುಸಂಗ್ರಹಾಲಯಗಳು ಮತ್ತು ಪ್ರವಾಸಿ ಕೇಂದ್ರಗಳನ್ನು ಸಹ ಮುಚ್ಚಲಾಗಿದೆ.
ಚೀನಾದಲ್ಲಿ ಝೀರೋ ಕರೋನಾ ಕೇಸ್ ಗುರಿ
ಕರೋನಾ ಆರಂಭದಿಂದಲೂ ಝೀರೋ ಕೋವಿಡ್ ವಿಧಾನವನ್ನು ಚೀನಾ ಅನುಸರಿಸಿಕೊಂಡಿದೆ. ಆದ್ರೂ ಸಹ ಮಂಗಳವಾರ 175 ಹೊಸ ಕರೋನಾ ಪ್ರಕರಣಗಳು ಕಂಡುಬಂದಿವೆ. ಚೀನಾದಲ್ಲಿ ಇತ್ತೀಚೆಗೆ ಪತ್ತೆಯಾದ ಪ್ರಕರಣಗಳು ಪ್ರಪಂಚದಲ್ಲಿ ಕಂಡುಬಂದ ಪ್ರಕರಣಗಳಿಗಿಂತ ಹಲವು ಪಟ್ಟು ಕಡಿಮೆ ಇದೆ. ಆದ್ರೂ ಸಹ ಮಾರ್ಚ್ 2020 ರಿಂದ ಮೊದಲ ಬಾರಿಗೆ ಚೀನಾದಲ್ಲಿ ಇಷ್ಟೊಂದು ಪ್ರಕರಣಗಳು ಕಾಣಿಸಿಕೊಂಡಿವೆ.
ಡ್ರ್ಯಾಗನ್ ರಾಷ್ಟ್ರದಲ್ಲಿ ಮೊದಲ ಬಾರಿಗೆ ಕರೋನಾ ವೈರಸ್ ಪತ್ತೆಯಾದ ನಂತರ ಶೂನ್ಯ ಕೋವಿಡ್ ವಿಧಾನವನ್ನು ಅನುಸರಿಸಲಾಗುತ್ತಿದೆ. ಇತ್ತೀಚೆಗೆ ಪತ್ತೆಯಾಗುತ್ತಿರುವ ಕರೋನಾ ಕೇಸ್ ಗಳಿಂದ ಬೆಚ್ಚಿಬಿದ್ದಿರುವ ಚೀನಿ ಸರ್ಕಾರ, ಗಡಿಗಳನ್ನು ಮುಚ್ಚಿದೆ ಮತ್ತು ದೇಶದ ಹಲವು ಭಾಗಗಳಲ್ಲಿ ಲಾಕ್ಡೌನ್ ವಿಧಿಸಿದೆ. 1.3 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಶಾಂಕ್ಸಿ ನಗರವು ಸುಮಾರು ಎರಡು ವಾರಗಳ ಕಾಲ ಲಾಕ್ಡೌನ್ನಲ್ಲಿಡಲಾಗಿದೆ.
ಮುಂದಿನ ತಿಂಗಳು ಫೆಬ್ರವರಿ 4 ಶುಕ್ರವಾರದಿಂದ ಚೀನಾದಲ್ಲಿ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟಗಳು ಆರಂಭಗೊಂಡು ಫೆಬ್ರವರಿ 20ರವರೆಗೆ ನಡೆಯಲಿವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಚೀನಾ ಸರ್ಕಾರ, ಕೇವಲ 3 ಕೇಸ್ ಗಳು ಬೆಳಕಿಗೆ ಬಂದ ಬಳಿಕ ಯುಝೌ ನಗರದಲ್ಲಿ ಸಂಪೂರ್ಣ ಲಾಕ್ ಡೌನ್ ಹೇರಿದೆ.
“ಚೀನಾ ಒನ್ ಪಾಲಿಸಿಗೆ ಬಾಂಗ್ಲಾದೇಶ ಬದ್ಧವಾಗಿರುತ್ತದೆ”: ಚೀನಾ
ತೈವಾನ್ದಿಂದ ದಕ್ಷಿಣ ಕೊರಿಯಾಕ್ಕೆ ತೆರಳಿದ ನ್ಯಾನ್ಸಿ ಪೆಲೋಸಿ
ತೈವಾನ್ ತಳಮಳ: ಸೆಮಿಕಂಡಕ್ಟರ್ ದ್ವೀಪ ಸುತ್ತುವರಿದ ಡ್ರ್ಯಾಗನ್! ಅಮೆರಿಕದ ವಿರುದ್ಧ ಪಾಕ್ ಹೇಳಿಕೆ!!
ಶಾಂಘೈ ಸಹಕಾರ ಸಂಘಟನೆ ಸೇರಲು ಇಚ್ಚಿಸಿದ ಬೆಲಾರಸ್!
ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು: ಗಿಲ್ಗಿಟ್-ಬಾಲ್ಟಿಸ್ತಾನ್ ಚೀನಾಕ್ಕೆ ಹಸ್ತಾಂತರ!?
ಡ್ರ್ಯಾಗನ್ ರಾಷ್ಟ್ರದಲ್ಲಿ ಪುರುಷ v/s ಮಹಿಳೆ: ಕಂಗಾಲಾದ ಚೀನಾ ಸರಕಾರ!