Connect with us


      
ದೇಶ

ನಮ್ಮ ನೆಲದಲ್ಲಿ ಚೀನಾ ಧ್ವಜ ಹಾರಿಸಿಲ್ಲ: ಭಾರತೀಯ ಸೇನೆಯ ಸ್ಪಷ್ಟನೆ

Iranna Anchatageri

Published

on

ಹೊಸದಿಲ್ಲಿ, ಜನವರಿ 03 (ಯು.ಎನ್.ಐ.) ಹೊಸ ವರ್ಷದ ಸಂದರ್ಭದಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನಾ ಧ್ವಜ ಹಾರಾಟ ನಡೆಸಿದೆ ಎಂಬ ವಿಚಾರ ಕಾಂಗ್ರೆಸ್ ಹಾಗೂ ಕೇಂದ್ರ ಸರ್ಕಾರದ ಮಧ್ಯೆ ಜಟಾಪಟಿಗೆ ಕಾರಣವಾಗಿತ್ತು. ಆದರೆ, ಭಾರತೀಯ ಸೇನಾ ಮೂಲಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಚೀನಾ ಧ್ವಜ ಹಾರಾಡಿದ್ದು, ಅವರ ಪ್ರದೇಶದಲ್ಲಿ ಎಂದು ತಿಳಿಸಿದೆ.

ಸೇನಾ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪ್ರಕಾರ, ಸಾಮಾಜಿಕ ಮಾಧ್ಯಮದಲ್ಲಿ ಚೀನಾದ ಧ್ವಜವನ್ನು ಹಾರಿಸಿದ ಪ್ರದೇಶದ ಬಗ್ಗೆ ಯಾವುದೇ ವಿವಾದವಿಲ್ಲ. ಮೊದಲಿನಿಂದಲೂ ಆ ಪ್ರದೇಶ ಚೀನಾದ ಹಿಡಿತದಲ್ಲಿದೆ. ಅಂದರೆ, ಚೀನಾ ತನ್ನದೇ ಪ್ರದೇಶದಲ್ಲಿ ಧ್ವಜಾರೋಹಣ ಮಾಡಿದೆ. ಭಾರತ-ಚೀನಾ ಗಡಿ ವಿವಾದ ನಡೆಯುತ್ತಿರುವ ಗಾಲ್ವಾನ್ ನದಿ ಪ್ರದೇಶದಲ್ಲಿ ಅವರು ಧ್ವಜಾರೋಹಣ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಗಾಲ್ವಾನ್ ವ್ಯಾಲಿಯಲ್ಲಿ ಚೀನಿ ಧ್ವಜ ಹಾರಾಡಿರುವ ಬಗ್ಗೆ ವಿಡಿಯೋ ಬಿಡುಗಡೆಯಾದ ಬಳಿಕ ವಿವಾದ ಪ್ರಾರಂಭವಾಗಿತ್ತು. ಈ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದರು. “ನಮ್ಮ ತ್ರಿವರ್ಣ ಧ್ವಜವು ಗಾಲ್ವಾನ್‌ನಲ್ಲಿ ಚೆನ್ನಾಗಿ ಕಾಣುತ್ತದೆ. ಚೀನಾ ಉತ್ತರ ನೀಡಬೇಕಾಗಿದೆ. ಮೋದಿಜಿ ಮೌನ ಮುರಿಯಿರಿ ಎಂದು ಟ್ವೀಟ್ ಮಾಡಿ ಸಿಟ್ಟು ವ್ಯಕ್ತಪಡಿಸಿದ್ದರು.

Share