Connect with us


      
ದೇಶ

“ಚೀನಾ ಭಾರತದ ನಂಬರ್ 1 ಶತ್ರು” ರಾವತ್ ಹೇಳಿಕೆಗೆ ಬೆಚ್ಚಿಬಿದ್ದಿದ್ದ ಡ್ರ್ಯಾಗನ್!

Iranna Anchatageri

Published

on

ಹೊಸದಿಲ್ಲಿ, ಡಿ 9 (ಯುಎನ್ಐ) ದೃಢ ನಿರ್ಧಾರ.. ಮುಕ್ತ ಹೇಳಿಕೆಗಳಿಂದಾಗಿ ಸಿಡಿಎಸ್ ಬಿಪಿಎನ್ ರಾವತ್ ಹೆಚ್ಚು ಖ್ಯಾತಿ ಗಳಿಸಿದ್ದರು. ಕಳೆದ ತಿಂಗಳು, ಸಿಡಿಎಸ್ ಬಿಪಿನ್ ರಾವತ್ ಹೇಳಿಕೆಯಿಂದ ಚೀನಾ ಬೆಚ್ಚಿಬಿದ್ದಿದ್ದಿತ್ತು. ಬುಧವಾರ, ಹೆಲಿಕಾಪ್ಟರ್ ಅಪಘಾತದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಜನರು ಸಾವಿಗೀಡಾಗಿದ್ದಾರೆ. ಸಿಡಿಎಸ್ ನೇಮಕಗೊಂಡ ಬಳಿಕ, ರಾವತ್ ಅವರ ಕಠಿಣ ಧೋರಣೆಯಿಂದಾಗಿ ಶತ್ರು ದೇಶಗಳು ಸಹ ಸಂಕಷ್ಟಕ್ಕೆ ಸಿಲುಕಿದ್ದವು.

ಅಷ್ಟಕ್ಕೂ ರಾವತ್  ಚೀನಾ ಬಗ್ಗೆ ಹೇಳಿದ್ದೇನು?

13 ನವೆಂಬರ್ 2021 ರಂದು, CDS ಬಿಪಿನ್ ರಾವತ್ ಕಾರ್ಯಕ್ರಮವೊಂದರಲ್ಲಿ ಚೀನಾ ಭಾರತದ ಭದ್ರತೆಗೆ ದೊಡ್ಡ ಬೆದರಿಕೆಯಾಗಿದೆ. ಕಳೆದ ವರ್ಷ, ಚೀನಾದ ಗಡಿ ಪ್ರದೇಶಗಳಲ್ಲಿ ಲಕ್ಷಗಟ್ಟಲೆ ಸೈನಿಕರು ಮತ್ತು ಶಸ್ತ್ರಾಸ್ತ್ರಗಳನ್ನು ನಿಯೋಜಿಸಿದೆ. ಭಾರತ ಮತ್ತು ಚೀನಾ ನಡುವೆ 13 ಸುತ್ತಿನ ಮಾತುಕತೆ ನಡೆದಿದ್ದು, ಪರಸ್ಪರ ನಂಬಿಕೆ ಇಲ್ಲದ ಕಾರಣ ಗಡಿ ವಿವಾದ ಬಗೆಹರಿಯುತ್ತಿಲ್ಲ. ಚೀನಾ ಹಾಗೂ ಪಾಕಿಸ್ತಾನ, ಭಾರತದ ನಂಬರ್ 1 ಶತ್ರು ರಾಷ್ಟ್ರಗಳು ಅಂತಾ ಕರೆದಿದ್ದರು.

ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ವು ಕಿಯಾನ್, ರಾವತ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದರು. ರಾವತ್ ಅವರ ಹೇಳಿಕೆ ಪ್ರಚೋದನಕಾರಿ, ಬೇಜವಾಬ್ದಾರಿ ಮತ್ತು ಅಪಾಯಕಾರಿಯಾಗಿ ಮಾತನಾಡುತ್ತಿದ್ದಾರೆ. ಇಂತಹ ಹೇಳಿಕೆಗಳು ಭೌಗೋಳಿಕ-ರಾಜಕೀಯ ಸಂಘರ್ಷಕ್ಕೆ ಕಾರಣವಾಗಬಹುದು. ಭಾರತೀಯ ಅಧಿಕಾರಿಗಳು ಯಾವುದೇ ಕಾರಣವಿಲ್ಲದೆ ಚೀನಾದ ಬೆದರಿಕೆಯ ಬಗ್ಗೆ ಊಹಾಪೋಹ ಮಾಡುತ್ತಲೇ ಇದ್ದಾರೆ. ಇದು ಎರಡೂ ದೇಶಗಳ ಅಧಿಕೃತ ನೀತಿಗೆ ವಿರುದ್ಧವಾಗಿದೆ ಅಂತಾ ಚೀನಾ ಅದಿಕಾರಿ ಪ್ರತಿಕ್ರಿಯಿಸಿದ್ದರು.

ಸಿಡಿಎಸ್ ಬಿಪಿನ್ ರಾವತ್ ಅವರು ಚೀನಾ ಮತ್ತು ಪಾಕಿಸ್ತಾನದ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದರು. ಈ ಬಗ್ಗೆ ಎರಡೂ ದೇಶಗಳು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದವು.

ಚೀನಾ ಹಾಗೂ ಪಾಕಿಸ್ತಾನದ ವಿರುದ್ಧ ರಾವತ್ ಅವರ 4 ಪ್ರಮುಖ ಹೇಳಿಕೆಗಳು

“ಚೀನಾದ ‘ಮೈ ವೇ ಆರ್ ನೋ ವೇ’ ವಿರುದ್ಧ ಭಾರತ ಪ್ರಬಲವಾಗಿದೆ”

ಏಪ್ರಿಲ್ 15, 2021 ರಂದು, CDS ಬಿಪಿನ್ ರಾವತ್ ರೈಸಿನಾ ಸಂವಾದದಲ್ಲಿ, ಚೀನಾವು ‘ನನ್ನ ದಾರಿ ಅಥವಾ ದಾರಿ ಇಲ್ಲ’ ಎಂದು ಬಯಸುತ್ತದೆ. ಆದ್ರೆ, ಚೀನಾದ ಮುಂದೆ ಭಾರತ ದೃಢವಾಗಿ ನಿಂತಿದೆ. ಯಾವುದೇ ರೀತಿಯ ಒತ್ತಡದಿಂದ ಹಿಂದೆ ಸರಿಯಲು ಸಾಧ್ಯವಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದೇವೆ ಅಂತಾ ತಿಳಿಸಿದ್ದರು.

“ತಂತ್ರಜ್ಞಾನದಲ್ಲಿ ಚೀನಾ ಮುಂದಿದೆ ಹಾಗಾಗಿ ನಾವೇನೂ ಕಡಿಮೆ ಇಲ್ಲ”

8 ಏಪ್ರಿಲ್ 2021 ರಂದು, ವಿವೇಕಾನಂದ ಇಂಟರ್‌ನ್ಯಾಶನಲ್ ಫೌಂಡೇಶನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, “ತಂತ್ರಜ್ಞಾನದ ವಿಷಯದಲ್ಲಿ ಚೀನಾ ಅತ್ಯಂತ ಸಮರ್ಥವಾಗಿದೆ. ಭಾರತದ ಮೇಲೆ ಸೈಬರ್ ದಾಳಿಗಳನ್ನು ಚೀನಾ ಮಾಡುತ್ತಲೆ ಇದೆ. ಚೀನಾದ ಸೈಬರ್ ದಾಳಿಯನ್ನು ಎದುರಿಸಲು ಭಾರತವು ತನ್ನ ಸೈಬರ್ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತಿದೆ” ಅಂತಾ ಹೇಳಿಕೆ ನೀಡಿದ್ದರು.

“ಚೀನಾ ಬಲಿಷ್ಠವಾಗಿದ್ದರೆ ಭಾರತವೂ ದುರ್ಬಲವಾಗಿಲ್ಲ”

ಜನವರಿ 2018 ರಲ್ಲಿ, ಜನರಲ್ ಬಿಪಿನ್ ರಾವತ್ ಅವರು ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾಗ, “ಚೀನಾ ಬಲಿಷ್ಠವಾಗಿದ್ದರೆ, ಭಾರತವೂ ಈಗ ದುರ್ಬಲವಾಗಿಲ್ಲ. ಭಾರತ ತನ್ನ ಗಡಿಯಲ್ಲಿ ಯಾವುದೇ ದೇಶವನ್ನು ಅತಿಕ್ರಮಿಸಲು ಬಿಡುವುದಿಲ್ಲ. ಈಗ ಪರಿಸ್ಥಿತಿ 1962ರಂತಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ ಭಾರತೀಯ ಸೇನೆಯ ಬಲ ಹೆಚ್ಚಿದೆ” ಅಂತಾ ತಿಳಿಸಿದ್ದರು.

ರಾವತ್ ಅವರ ಈ ಹೇಳಿಕೆಗೆ ಚೀನಾ ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಅವರು, “ಈ ವರ್ಷ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳಲ್ಲಿ ಸಾಕಷ್ಟು ಪ್ರಕ್ಷುಬ್ಧತೆ ಉಂಟಾಗಿದೆ. ಇಂತಹ ಹೇಳಿಕೆಗಳು ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಲಿವೆ” ಎಂದು ಚೀನಾ ಪ್ರತಿಕ್ರಿಯೆ ನೀಡಿತ್ತು.

“ಭಾರತ ಎರಡು ರಂಗಗಳಲ್ಲಿ ಯುದ್ಧಕ್ಕೆ ಸಿದ್ಧವಾಗಿದೆ”

ಸೆಪ್ಟೆಂಬರ್ 2017 ರಲ್ಲಿ, ಜನರಲ್ ಬಿಪಿನ್ ರಾವತ್ ಅವರು ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾಗ, “ಭಾರತವು ಚೀನಾ ಮತ್ತು ಪಾಕಿಸ್ತಾನದೊಂದಿಗೆ ಏಕಕಾಲದ ಯುದ್ಧಕ್ಕೆ ಸಿದ್ಧವಾಗಿರಬೇಕು. ಡೋಕ್ಲಾಂ ಬಿಕ್ಕಟ್ಟಿನ ಒಂದು ವಾರದ ನಂತರ ರಾವತ್ ಅವರ ಹೇಳಿಕೆ ಹೊರಬಿದ್ದಿತ್ತು.

ರಾವತ್ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಚೀನಾ, ಇಂತಹ ವಾಕ್ಚಾತುರ್ಯವು ಉಭಯ ದೇಶಗಳ ನಡುವಿನ ಸಂಬಂಧವನ್ನು ಹಾಳುಮಾಡುತ್ತದೆ. ಅವರು ಎರಡು ರಂಗಗಳಲ್ಲಿ ಯುದ್ಧದ ತಯಾರಿ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ಈ ವಿಶ್ವಾಸ ಎಲ್ಲಿಂದ ಬರುತ್ತಿದೆ? ಅಂತಾ ಪ್ರಶ್ನೆ ಮಾಡಿತ್ತು.

Share