Connect with us


      




ವಿದೇಶ

ಚೀನಾ ಅಧ್ಯಕ್ಷನ ಹೊಸ ವರ್ಷದ ಭಾಷಣ!

Iranna Anchatageri

Published

on

ಬೀಜಿಂಗ್, ಜನವರಿ 01 (ಯು.ಎನ್.ಐ.) ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಮ್ಮ ಹೊಸ ವರ್ಷದ ಭಾಷಣದಲ್ಲಿ ತೈವಾನ್ ಮತ್ತು ಮೇನ್‌ಲ್ಯಾಂಡ್ ಚೀನಾದ ಏಕೀಕರಣಕ್ಕಾಗಿ ತಮ್ಮ ‘ಆಕಾಂಕ್ಷೆ’ಯನ್ನು ವ್ಯಕ್ತಪಡಿಸಿದ್ದಾರೆ. ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ (CCP) ಸಾಧನೆಗಳನ್ನು ಶ್ಲಾಘಿಸಿದ ಚೀನಾ ಅಧ್ಯಕ್ಷ, ಇತ್ತೀಚೆಗೆ ನಡೆದ ಪ್ರಮುಖರ ಸಭೆಯನ್ನು ಉಲ್ಲೇಖಿಸಿದ ಅವರು, ಅಭೂತಪೂರ್ವ ಮೂರನೇ ಅವಧಿಯ ಅಧಿಕಾರಕ್ಕೆ ದಾರಿ ಮಾಡಿಕೊಟ್ಟಿರುವ ಬಗ್ಗೆ ಹೇಳಿದರು. 1.4 ಬಿಲಿಯನ್ ಜನರನ್ನು ಹೊಂದಿರುವ ಚೀನಾವನ್ನು ಉದ್ದೇಶಿಸಿ ಕ್ಸಿ ಮಾಡಿದ ಭಾಷಣವನ್ನು ಚೀನಿ ಸರ್ಕಾರಿ ಟಿವಿ ಚಾನೆಲ್ ಪ್ರಸಾರ ಮಾಡಿತು.

ಕ್ಸಿ ಭಾಷಣದಲ್ಲಿ, “’ಚೀನಾದ ಸಂಪೂರ್ಣ ಏಕೀಕರಣದ ಆಶಯವು ತೈವಾನ್ ಜಲಸಂಧಿಯ ಎರಡೂ ಬದಿಯ ಜನರದ್ದಾಗಿದೆ” ಎಂದರು. ತೈವಾನ್ ವಿಚಾರದಲ್ಲಿ ಯುಎಸ್, ಯುರೋಪಿಯನ್ ಯೂನಿಯನ್ ಮತ್ತು ಇತರ ಪಾಶ್ಚಿಮಾತ್ಯ ದೇಶಗಳ ಒತ್ತಡದ ಸಂದರ್ಭದಲ್ಲಿ ಕ್ಸಿ ಜಿನ್ ಪಿಂಗ್ ಅವರ ತೈವಾನ್ ಉಲ್ಲೇಖ ಅತ್ಯಂತ ಮಹತ್ವಾಗಿತ್ತು.

ತೈವಾನ್ ದೇಶವನ್ನು ಚೀನಾದ ಒಂದು ಭೂಭಾಗ ಎಂದು ಮೇನ್ ಲ್ಯಾಂಡ್ ಚೀನಾ ವಾದಿಸುತ್ತಿದೆ. ಈ ವಿಚಾರವನ್ನೇ ಇಟ್ಟುಕೊಂಡು ಅಮೆರಿಕದೊಂದಿಗೆ ಸಂಘರ್ಷಕ್ಕೂ ಇಳಿಯುವ ಹಾದಿಯಲ್ಲಿ ಚೀನಾ ಇದೆ. ಅಲ್ಲದೆ, ಇತ್ತೀಚೆಗೆ ತೈವಾನ್ ವಾಯು ಪ್ರದೇಶದಲ್ಲಿ ಚೀನಾದ ಮಿಲ್ಟ್ರಿ ವಿಮಾನಗಳು ನುಗ್ಗಿದ್ದವು. ಇದರಿಂದ ಎರಡೂ ರಾಷ್ಟ್ರಗಳ ಮಧ್ಯೆ ಉದ್ವಿಗ್ನತೆ ಹೆಚ್ಚಾಗಿತ್ತು. ಈ ಘಟನೆ ಬಳಿಕ, ತೈವಾನ್ ತನ್ನ ಶಸ್ತ್ರಾಸ್ತ್ರಗಳನ್ನು ಹೆಚ್ಚಳ ಮಾಡಿಕೊಳ್ಳುತ್ತಿದೆ.

ಪಿಎಲ್‌ಎ ಮತ್ತು ಮಿಲಿಟರಿ ಪೊಲೀಸರನ್ನು ಶ್ಲಾಘಿಸಿದ ಕ್ಸಿ

ಚೀನಾ ಅಧ್ಯಕ್ಷನ ಹತ್ತು ನಿಮಿಷಗಳ ಭಾಷಣದ ಬಹುಪಾಲು ಆಡಳಿತ ಪಕ್ಷದ (ಚೀನಾ CCP ಪಾರ್ಟಿ) 100 ವರ್ಷಗಳ ಪೂರೈಸಿರುವ ಹಾಗೂ ಕಳೆದ ತಿಂಗಳು ನಡೆದ ಪ್ರಮುಖರ ಸಭೆಗೆ ಸಂಬಂಧಿಸಿದ್ದಾಗಿತ್ತು. ಕ್ಸಿ ಜಿನ್ ಪಿಂಗ್ ತನ್ನ ಅಧಿಕಾರದ ಗದ್ದುಗೆಯನ್ನು ಮುಂದುವರಿಸುವೆಕೆಗಾಗಿ ಈ ಸಭೆ ದಾರಿ ಮಾಡಿಕೊಟ್ಟಿದೆ. ಅಲ್ಲದೆ, ಚೀನಾದ ಸೇನೆ ಪೀಪಲ್ಸ್ ಲಿಬರೇಶನ್ ಆರ್ಮಿ ಮತ್ತು ಮಿಲಿಟರಿ ಪೋಲೀಸ್ ಅನ್ನು ಹೆಚ್ಚು ಶಕ್ತಿಶಾಲಿ ಮಾಡುವುದು ಹಾಗೂ ದೇಶದ ರಕ್ಷಣೆಯಲ್ಲಿ ಅದರ ಕಾರ್ಯವನ್ನು ಕ್ಸಿ ಶ್ಲಾಘಿಸಿದರು. ಇಡೀ ವಿಶ್ವವೇ ಕೊರೊನಾ ವೈರಸ್‌ನಿಂದ ಕಂಗೆಟ್ಟಿರುವ ಸಂದರ್ಭದಲ್ಲಿ ಕ್ಸಿ ಜಿನ್‌ಪಿಂಗ್ ಹೊಸ ವರ್ಷವನ್ನು ಉದ್ದೇಶಿಸಿ ಮಾತನಾಡಿರುವುದು ತೀವ್ರ ಗಮನಸೆಳೆದಿದೆ. ಈ ಮಧ್ಯೆ ಡ್ರ್ಯಾಗನ್ ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಕೋವಿಡ್ ಬಗ್ಗೆ ಹೆಚ್ಚಿನ ನಿಗಾವಹಿಸಿರುವ ಚೀನಿ ಸರ್ಕಾರ, ಹೊಸ ವರ್ಷಕ್ಕೆ ಹುವಾಂಗ್ಪು ನದಿಯಲ್ಲಿನ ಬೆಳಕಿನ ಪ್ರದರ್ಶನ ಹಾಗೂ ಬೀಜಿಂಗ್ ನ ಸಾರ್ವಜನಿಕ ಆಚರಣೆಯನ್ನು ರದ್ದುಗೊಳಿಸಲಾಗಿತ್ತು.

Share