Published
4 months agoon
ಬೀಜಿಂಗ್ : ಜನೆವರಿ 17 (ಯು.ಎನ್.ಐ.) ಡ್ರ್ಯಾಗನ್ ರಾಷ್ಟ್ರ ಚೀನಾದಿಂದ ಶಾಕಿಂಗ್ ಸುದ್ದಿಯೊಂದು ಬೆಳಕಿಗೆ ಬಂದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಜನನ ಪ್ರಮಾಣವು ದಾಖಲೆ ಮಟ್ಟದಲ್ಲಿ ಕುಸಿತ ಕಂಡಿದೆ ಎಂದು ಅಧಿಕೃತ ಮಾಹಿತಿ ಹೊರಬಿದ್ದಿದೆ. ಒಂದೆಡೆ ವಯಸ್ಸಾದವರ ಸಂಖ್ಯೆ ಹೆಚ್ಚಳದಿಂದ ಚೀನಾದ ಆರ್ಥಿಕ ಬೆಳವಣಿಗೆ ಮೇಲೆ ಭಾರಿ ಪ್ರಮಾಣದಲ್ಲಿ ಪರಿಣಾಮ ಬೀರಿದೆ. ಇನ್ನೊಂದೆಡೆ ಜನನ ಪ್ರಮಾಣದಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತ ಆಗಿರುವುದು ಚೀನಾದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ನಿಧಾನಗತಿಯ ಆರ್ಥಿಕತೆ ಮತ್ತು ದಶಕಗಳಲ್ಲೇ ದೇಶದ ದುರ್ಬಲ ಜನಸಂಖ್ಯೆಯ ಬೆಳವಣಿಗೆಯ ಮಧ್ಯೆ ಬೀಜಿಂಗ್ ಜನಸಂಖ್ಯಾ ಬಿಕ್ಕಟ್ಟನ್ನು ಎದುರಿಸುತ್ತಿದೆ. ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಡೇಟಾ ಪ್ರಕಾರ, ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಚೀನಾದ ಜನನ ಪ್ರಮಾಣವು 1,000 ಜನರಿಗೆ 7.52ಕ್ಕೆ ಇಳಿದಿದೆ. 2020 ರಲ್ಲಿ 8.52ರಷ್ಟು ಜನನ ಪ್ರಮಾಣ ಹೊಂದಿದ್ದ ಚೀನಾ, 7.52ರಷ್ಟು ಮಕ್ಕಳ ಹುಟ್ಟುವಿಕೆ ರೇಟ್ ಕುಸಿತಗೊಂಡಿರುವುದರಿಂದ ಬಿಕ್ಕಟ್ಟು ಎದುರಿಸುವಂತಾಗಿದೆ.
ದೇಶದ ವಾರ್ಷಿಕ ಅಂಕಿ-ಅಂಶಗಳ ಪ್ರಕಾರ 1978ರ ಬಳಿಕ ಇಂಥದ್ದೊಂದು ಕುಸಿತವನ್ನು ಚೀನಾ ಕಂಡಿರಲಿಲ್ಲ. ಅಲ್ಲದೆ, 1949ರಲ್ಲಿ ಚೀನಾದಲ್ಲಿ ಕಮ್ಯುನಿಸ್ಟ್ ಸರ್ಕಾರ ಸ್ಥಾಪನೆ ಆದ ಬಳಿಕ ಇದು ಅತ್ಯಂತ ಕಡಿಮೆ ಜನನ ಪ್ರಮಾಣ ಆಗಿದೆ. 2016ರಲ್ಲಿ ಅಧಿಕಾರಿಗಳು ಚೀನಾದ “ಒಂದು ಮಗುವಿನ ನೀತಿ” ಯನ್ನು ಸಡಿಲಗೊಳಿಸಿ ದಂಪತಿಗಳು ಎರಡು ಮಕ್ಕಳನ್ನು ಹೊಂದಲು ಅವಕಾಶ ಮಾಡಿಕೊಟ್ಟಿತ್ತು. ವಿಶ್ವದಲ್ಲೇ ಅತ್ಯಂತ ಕಠಿಣ ಕುಟುಂಬ ಯೋಜನೆ ಹೊಂದಿರುವ ಚೀನಾದಲ್ಲಿ ಈ ಸಡಿಲಿಕೆ ಕೈಗೊಂಡ್ರೂ ಯಾವುದೇ ಬದಲಾವಣೆ ಆಗದೇ ಇರುವುದು ಚೀನಾಕ್ಕೆ ಹಿನ್ನೆಡೆಯಾಗಿದೆ.
ಚೀನಾದಲ್ಲಿ ವಿಮಾನ ಅಪಘಾತ: 122 ಪ್ರಯಾಣಿಕರು ಸೇಫ್
ಚೀನಾದಲ್ಲಿ ಬಲವಂತವಾಗಿ ಮಹಿಳೆಗೆ ಕೋವಿಡ್ ಪರೀಕ್ಷೆ; ಬೆಚ್ಚಿಬೀಳಿಸುತ್ತೆ ವಿಡಿಯೋ
ಚೀನಾದ ಹುನಾನ್ನಲ್ಲಿ 6 ಅಂತಸ್ಥಿನ ಕಟ್ಟಡ ಕುಸಿತ
ನೆಹರು ಪ್ರಮಾದ ಮಾಡಿದರೆಂದು ಭಾವಿಸುವುದು ತಪ್ಪು; ಟಿಬೆಟ್ ಅಧ್ಯಕ್ಷ
ಚೀನಾದಲ್ಲಿ ಕೊರೊನಾ ಮಧ್ಯೆ ಹಕ್ಕಿಜ್ವರದ ಕಾಟ; ಇದೇ ಮೊದಲ ಬಾರಿಗೆ ಮಾನವರಲ್ಲಿ ಪತ್ತೆ!
ಬೀಜಿಂಗ್ ನಲ್ಲಿ ಲಾಕ್ ಡೌನ್ ಭೀತಿ; ಅಗತ್ಯವಸ್ತುಗಳ ಖರೀದಿಗೆ ಕ್ಯೂ ನಿಂತ ಜನ