Connect with us


      




ಕ್ರೀಡೆ

ಐಪಿಎಲ್ ಸೀಸನ್ 15ನಲ್ಲಿ ಭಾಗವಹಿಸದಿರಲು ಕಾರಣ ಕೊಟ್ಟ ಕ್ರಿಸ್ ಗೇಲ್

Lakshmi Vijaya

Published

on

ನವದೆಹಲಿ: ಮೇ 08 (ಯು.ಎನ್.ಐ.) ಐಪಿಎಲ್ ಸೀಸನ್ 2022 ರಲ್ಲಿ ಅತಿ ದೊಡ್ಡ ಆಟಗಾರ ಮಿಸ್ ಆಗಿದ್ದಾರೆ ಅಂದ್ರೆ ಅದು ಕ್ರಿಸ್ ಗೇಲ್. ಚುಟುಕು ಪಂದ್ಯವಾದ ಐಪಿಎಲ್ ನಲ್ಲಿ ಅಬ್ಬರದ ಆಟವಾಡುತ್ತಾ ಕ್ರಿಕೆಟ್ ಪ್ರೇಮಿಗಳಿಗೆ ಫೇವರಿಟ್ ಆಗಿದ್ದ ಈ ಕ್ರಿಕೆಟಿಗನನ್ನ ಸೀಸಸ್ 15 ನಲ್ಲಿ ಅಭಿಮಾನಿಗಳು ಮಿಸ್ ಮಾಡಿಕೊಳ್ತಿದ್ದಾರೆ.

ವರ್ಷದಿಂದ ವರ್ಷಕ್ಕೆ ಬೌಲರ್‌ಗಳನ್ನು ಭಯಭೀತಗೊಳಿಸಿದ ಗೇಲ್, ಐಪಿಎಲ್ ಪಂದ್ಯಾವಳಿಯ ಇತಿಹಾಸದ ಅತಿರಥ- ಮಹಾರಥರ ಪೈಕಿ ಒಬ್ಬರು. ಆದಾಗ್ಯೂ, ಅವರು ಈ ವರ್ಷದ ಐಪಿಎಲ್ ಆವೃತ್ತಿಯ ಮೊದಲು ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿರಲಿಲ್ಲ.  ಅವರು ಈಗ ಐಪಿಎಲ್ 2022 ಅನ್ನು ಏಕೆ ಆಡದಿರಲು ನಿರ್ಧರಿಸಿದರು ಎಂಬುದರ ಕುರಿತು ಮನದಾಳನ್ನ ಮಾತನ್ನ ಹಂಚಿಕೊಂಡಿದ್ದಾರೆ. ಗೇಲ್ ಅವರು ಐಪಿಎಲ್‌ನ ಕೊನೆಯ ಕೆಲವು ಸೀಸನ್‌ಗಳಲ್ಲಿ ತನಗೆ ಸರಿಯಾದ ಗೌರವ ಸಿಗಲಿಲ್ಲ. ನನ್ನನ್ನು ಪರಿಗಣಿಸಲ್ಪಟ್ಟ ರೀತಿಗೆ ಸಮಾಧಾನವಿರಲಿಲ್ಲ ಎಂದು ಹೇಳಿದ್ದಾರೆ.

“ಕ್ರೀಡೆಗಾಗಿ ಮತ್ತು ಐಪಿಎಲ್‌ಗಾಗಿ ತುಂಬಾ ಮಾಡಿದ ನಂತರವೂ ನನಗೆ ಅರ್ಹವಾದ ಗೌರವ ಸಿಗಲಿಲ್ಲ ಎಂದು ನಾನು ಭಾವಿಸಿದೆ. ಹಾಗಾಗಿ ನಾನು ಸರಿ, ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಹಾಗೇ ಬಿಟ್ಟುಬಿಡೋಣ ಎಂದು ನಿರ್ಧರಿಸಿದೆ ಎಂದು ಯುಕೆಯ ಮಿರರ್ ಪತ್ರಿಕೆಗೆ ಹೇಳಿದ್ದಾರೆ.

ಆದಾಗ್ಯೂ, ಮುಂದಿನ ಋತುವಿನಲ್ಲಿ ಐಪಿಎಲ್ ಲೀಗ್‌ಗೆ ಮರಳುವುದನ್ನು ಅವರು ತಳ್ಳಿಹಾಕಲಿಲ್ಲ.ಮುಂದಿನ ವರ್ಷ ನಾನು ಹಿಂತಿರುಗುತ್ತೇನೆ, ಅವರಿಗೆ ನಾನು ಬೇಕು ಎಂದು ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಇತ್ತೀಚೆಗೆ ಪಂಜಾಬ್ ಕಿಂಗ್ಸ್ ಪರ ಆಡಿರುವ ವೆಸ್ಟ್ ಇಂಡೀಸ್ ಐಕಾನ್ ಕ್ರಿಸ್ ಗೇಲ್ ಹೇಳಿದರು.

ಕ್ರಿಸ್ ಗೇಲ್ ಐಪಿಎಲ್‌ನಲ್ಲಿ 142 ಪಂದ್ಯಗಳನ್ನು ಆಡಿದ್ದಾರೆ ಮತ್ತು ದಾಖಲೆಯ ಆರು ಶತಕಗಳು ಸೇರಿದಂತೆ 4965 ರನ್ ಗಳಿಸಿದ್ದಾರೆ. ಅವರು 148.96 ಸ್ಟ್ರೈಕ್ ರೇಟ್‌ನೊಂದಿಗೆ 39.72 ಸರಾಸರಿ ಹೊಂದಿದ್ದಾರೆ.

ಅವರು ಐಪಿಎಲ್‌ನಲ್ಲಿ ದಾಖಲೆಯ ಆರು ಶತಕಗಳನ್ನು ಹೊಂದಿದ್ದಾರೆ ಮತ್ತು 2013 ರಲ್ಲಿ ಆರ್ ಸಿಬಿ ಗಾಗಿ ಪುಣೆ ವಾರಿಯರ್ಸ್ ವಿರುದ್ಧ 175* ರನ್ ಗಳಿಸಿರುವ ದಾಖಲೆಯನ್ನ ಇದುವರೆಗೂ ಯಾರೂ ಐಪಿಎಲ್ ನಲ್ಲಿ ಸರಿಗಟ್ಟಲು ಸಾಧ್ಯವಾಗಿಲ್ಲ.

Share