Connect with us


      




ವಿದೇಶ

ಮುಚ್ಚಲಿದೆ ಪೆಗಾಸಸ್ ಕಂಪೆನಿ

UNI Kannada

Published

on

ನವದೆಹಲಿ, ಡಿಸೆಂಬರ್ 14 (ಯು.ಎನ್.ಐ.) ಬೇಹುಗಾರಿಕೆ ಹಗರಣದಿಂದಾಗಿ ಮುನ್ನೆಲೆಗೆ ಬಂದಿದ್ದ ಸಾಫ್ಟ್‌ವೇರ್ ಸಂಸ್ಥೆ (NSO) ಎನ್.ಎಸ್.ಓ “ಪೆಗಾಸಸ್ ” ಅನ್ನು ಮುಚ್ಚಲಿದೆ.
ಎನ್.ಎಸ್.ಓ ಗ್ರೂಪ್ ಲಿಮಿಟೆಡ್ ತನ್ನ ಸಾಲಗಳ ಕಾರಣದಿಂದಾಗಿ ಡೀಫಾಲ್ಟ್ ಅಪಾಯವನ್ನು ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕಂಪನಿಯು ತನ್ನ ವಿವಾದಾತ್ಮಕ ‘ಪೆಗಾಸಸ್’ ಅನ್ನು ಮುಚ್ಚಲು ಮತ್ತು ಮಾರಾಟ ಮಾಡಲು ಯೋಚಿಸುತ್ತಿದೆ ಎನ್ನಲಾಗಿದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಬೇಹುಗಾರಿಕೆ ಆರೋಪದ ಕಾರಣ ಪೆಗಾಸಸ್ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಈ ಸಂಬಂಧ ಅನೇಕ ಹೂಡಿಕೆ ನಿಧಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಇದರಲ್ಲಿ ಕಂಪನಿಗೆ ಸಂಪೂರ್ಣ ಹಣ ನೀಡಿ ಮಾರಾಟ ಮಾಡುವ ಕುರಿತು ಚರ್ಚೆ ನಡೆದಿದೆ. ಆದಾಗ್ಯೂ, ಈ ಸಂಭಾಷಣೆಯು ತುಂಬಾ ಖಾಸಗಿಯಾಗಿದೆ. ಕಂಪನಿಯು ಮೋಯಿಲಿಸ್ ಆಂಡ್ ಕೋ ಅನ್ನು ಖರೀದಿಸಿದ್ದು, ಈ ವಿಚಾರದಲ್ಲಿ ಸಲಹೆಗಾರರಿಂದ ಸಲಹೆಯನ್ನೂ ಪಡೆಯುತ್ತಿದೆ.

ಪೆಗಾಸಸ್‌ನ ಹೊಸ ಮಾಲೀಕರಲ್ಲಿ ಎರಡು ಅಮೆರಿಕನ್ ನಿಧಿಗಳು ಸೇರಿವೆ ಎನ್ನಲಾಗಿದ್ದು, ಕಂಪೆನಿ ನಿಯಂತ್ರಣವನ್ನು ತೆಗೆದುಕೊಂಡು ಪೆಗಾಸಸ್ ಅನ್ನು ಮುಚ್ಚುವ ಬಗ್ಗೆ ಚರ್ಚಿಸಿದ್ದಾರಂತೆ. ಪೆಗಾಸಸ್ ಮಾಹಿತಿಯನ್ನು ಹೆಚ್ಚು ಸೈಬರ್-ಸುರಕ್ಷಿತಗೊಳಿಸಲು ಮತ್ತು ಇಸ್ರೇಲಿ ಕಂಪನಿಯ ಡ್ರೋನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು 200 ಮಿಲಿಯನ್ ಹೂಡಿಕೆಯ ಬಗ್ಗೆಯೂ ಚರ್ಚಿಸಲಾಗಿದೆ. ಆದರೆ ಈ ಬಗ್ಗೆ ಎನ್‌ಎಸ್‌ಒ ವಕ್ತಾರರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ವಿವಾದದಲ್ಲಿ ಪೆಗಾಸಸ್: ಪೆಗಾಸಸ್ ಸಾಫ್ಟ್‌ವೇರ್ ಬಳಕೆದಾರರ ಫೋನ್‌ಗಳನ್ನು ಟ್ರ್ಯಾಕ್ ಮಾಡುತ್ತದೆ. ಇತ್ತೀಚೆಗೆ ಕಂಪನಿಯು ಪ್ರಪಂಚದಾದ್ಯಂತ ಎಲ್ಲ ದೇಶಗಳಲ್ಲಿನ ಬಳಕೆದಾರರ ಡೇಟಾವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಕಂಪನಿಯು ವಿವಿಧ ದೇಶಗಳ ಸರ್ಕಾರಗಳಿಗೆ ಡೇಟಾವನ್ನು ನೀಡಿದೆ ಎಂಬ ಆರೋಪಗಳು ಕೇಳಿಬಂದಿವೆ. ರಾಜಕೀಯ ವಿರೋಧಿಗಳು, ಪತ್ರಕರ್ತರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರ ಮೇಲೆ ಕಣ್ಣಿಡಲು ಬಳಸಲಾಗಿತ್ತು.

ಅಪರಾಧ ಮತ್ತು ಭಯೋತ್ಪಾದನೆಯನ್ನು ತಡೆಗಟ್ಟಲು ಕಾನೂನು ಜಾರಿ ಮತ್ತು ಸರ್ಕಾರಿ ಏಜೆನ್ಸಿಗಳಿಗೆ ತಂತ್ರಜ್ಞಾನವನ್ನು ಮಾರಾಟ, ದುರುಪಯೋಗಪಡಿಸಿಕೊಳ್ಳುವ ಕಂಪನಿಗಳೊಂದಿಗೆ ಒಪ್ಪಂದಗಳನ್ನು ಕೊನೆಗೊಳಿಸಿದೆ.

ಅಮೆರಿಕಾ ಆರೋಪ: ಅಮೆರಿಕದಲ್ಲಿಯೂ ಪೆಗಾಸಸ್ ಮೇಲೆ ಆರೋಪ ಕೇಳಿಬಂದಿತ್ತು. ಇತ್ತೀಚಿಗೆ ಪೆಗಾಸಸ್ 11 ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಅಧಿಕಾರಿಗಳ ಫೋನ್ ಗಳನ್ನು ಹ್ಯಾಕ್ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ನವೆಂಬರ್‌ನಲ್ಲಿ ಯುಎಸ್ ಎನ್ಎಸ್ಒ ಅನ್ನು ಕಪ್ಪುಪಟ್ಟಿಗೆ ಸೇರಿಸಿತು. ಕಂಪನಿಯ ಅಮೆರಿಕನ್ ತಂತ್ರಜ್ಞಾನದ ಬಳಕೆಯನ್ನು ನಿಷೇಧಿಸಿ ಇದಲ್ಲದೆ, ಆಪಲ್ ಕಂಪನಿಯು ಐಫೋನ್ ಅನ್ನು ಹ್ಯಾಕ್ ಮಾಡಿದೆ ಎಂದು ಆರೋಪಿಸಿ ಕಂಪನಿಯ ವಿರುದ್ಧ ಕೇಸ್ ಹಾಕಿತ್ತು.

Share