Connect with us


      




ರಾಜಕೀಯ

ವಿಧಾನಸಭೆ ಸುಗಮ ಕಲಾಪ; ಸಂಧಾನ ಸಭೆ

Kumara Raitha

Published

on

ಬೆಂಗಳೂರು: ಫೆಬ್ರವರಿ ೧೭ (ಯು.ಎನ್.‌ಐ.) ವಿಧಾನಸಭೆ ಕಲಾಪವನ್ನು ಸುಮವಾಗಿ ನಡೆಸುವ ಹಿನ್ನೆಲೆಯಲ್ಲಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಎಸ್‌. ಬೊಮ್ಮಾಯಿ, ಸಚಿವ ಮಾಧುಸ್ವಾಮಿ ಹಾಗೂ ಸಿದ್ದರಾಮಯ್ಯ ಅವರಿರುವ ಸಭೆ ಚರ್ಚೆ ನಡೆಸುತ್ತಿದೆ.

ರಾಷ್ಟ್ರಧ್ವಜಕ್ಕೆ ಸಚಿವ ಕೆ.ಎಸ್.‌ ಈಶ್ವರಪ್ಪ ಅವರು ಅವಮಾನಿಸಿದ್ದಾರೆಂದು ಕಾಂಗ್ರೆಸ್‌ ಆರೋಪಿಸಿದೆ. ಈ ಸಚಿವರು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸುತ್ತಿದೆ. ನಿನ್ನೆ ಸದನದಲ್ಲಿ ಈ ಬಗ್ಗೆ ಒತ್ತಾಯಿಸಿಲು ಕಾಂಗ್ರೆಸ್‌ ಸದಸ್ಯರು ಸದನದ ಬಾವಿಗೆ ಇಳಿದಿದ್ದರು.

ಈ ಹಿನ್ನೆಲೆಯಲ್ಲಿ ಸದನದ ಕಲಾಪ ಸುಗಮವಾಗಿ ನಡೆಸಲು ಸಹಕಾರ ನೀಡಬೇಕೆಂದು ಮುಖ್ಯಮಂತ್ರಿ ಹಾಗೂ ಮಾಧುಸ್ವಾಮಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮನವೊಲಿಸುತ್ತಿದ್ದಾರೆ.

ಕೆಂಪು ಕೋಟೆ ಮೇಲೆ ಕೇಸರಿ ಹಾರಿಸೋದಾಗಿ ಹೇಳಿಕೆ ನೀಡುವ ಮೂಲಕ ಸಚಿವ ಕೆ.ಎಸ್.‌ ಈಶ್ವರಪ್ಪ ಅವರು ರಾಷ್ಟ್ರಧ್ವಕ್ಕೆ ಅವಮಾನಿಸಿದ್ದಾರೆಂದು ಆರೋಪಿಸಿರುವ ಕಾಂಗ್ರಸ್‌ ಅವರು ರಾಜಿನಾಮೆ ನೀಡಬೇಕು ಇಲ್ಲವೇ ಸಂಪುಟದಿಂದ   ವಜಾಗೊಳಿಸಬೇಕೆಂದು ಆಗ್ರಹಿಸುತ್ತಿದೆ.

Share