Published
2 weeks agoon
ಬೆಂಗಳೂರು: ಆಗಸ್ಟ್ 04 (ಯು.ಎನ್.ಐ.) ನಮ್ಮ ಪ್ರಧಾನಿ ವಿಜನರಿ ಲೀಡರ್ ಹಾಗೂ ಅಮಿತ್ ಶಾ ಸ್ಟ್ರಾಂಗ್ ಲೀಡರ್ ಆಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ ಷಾ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯ, ಸಿಐಐ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಂಕಲ್ಪದಿಂದ ಸಿದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಒಬ್ಬ ವ್ಯಕ್ತಿಗೆ 75 ವರ್ಷ ಜೀವನದ ಕೊನೆಯ ದಿನಗಳು, ಆದರೆ ಒಂದು ದೇಶಕ್ಕೆ ಇಪ್ಪತೈದು ವರ್ಷದ ಯುವಕನ ಹರೆಯ. ಎಪೈದು ವರ್ಷಗಳಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇವೆ. ನಮ್ಮ ಪ್ರಜಾಪ್ರಭುತ್ವ ಸಂಕಷ್ಟ ಎದುರಿಸಿದೆ. ಈಗ ನಮ್ಮ ದೇಶ ಸೆಲ್ಪ್ ಕಾನ್ಪಡೆನ್ಸ್ ಮೂಡಿಸಿಕೊಂಡಿದೆ. ಅದನ್ನು ನಮ್ಮ ಪ್ರಧಾನಿ ಮೂಡಿಸಿದ್ದಾರೆ. ದೇಶದ ಕಟ್ಟ ಕಡೆಯ ವ್ಯಕ್ತಿಯ ಅಭಿವೃದ್ಧಿಯಲ್ಲಿ ಪಾಲುದಾರನಾದರೆ ಅದು ದೇಶದ ಅಭಿವೃದ್ದಿಯಾದಂತೆ. ಗುರಿ ಮುಟ್ಟಲು ನಾಯಕನ ಅಗತ್ಯ ಇದೆ. ನಮ್ಮ ಪ್ರಧಾನಿ ವಿಜನರಿ ಲಿಡರ್ ಹಾಗೂ ಅಮಿತ್ ಶಾ ಸ್ಟ್ರಾಂಗ್ ಲೀಡರ್ ಆಗಿದ್ದಾರೆ ಎಂದರು.
ಕರ್ನಾಟಕ ಅಭಿವೃದ್ಧಿಯಲ್ಲಿ ಮುಂಚೂಣಿ ರಾಜ್ಯವಾಗಿದೆ. ಮಹಾರಾಜರ ಕಾಲದಿಂದಲೂ ಪ್ರಗತಿಪರ ರಾಜ್ಯವಾಗಿದೆ. ತಂತ್ರಜ್ಞಾನದಲ್ಲಿ ಕರ್ನಾಟಕ ಯಾವಾಗಲು ಮುಂಚೂಣಿ ರಾಜ್ಯವಾಗಿದೆ ಐಟಿ ಬಿಟಿ ತಂತ್ರಜ್ಞಾನದಲ್ಲಿ ಯಾವುದೇ ದೇಶಕ್ಕೂ ಕರ್ನಾಟಕ ಕಡಿಮೆ ಇಲ್ಲ. ರಾಜ್ಯದಲ್ಲಿ ಸುಮಾರು 400 ಆರ್ ಆಂಡ್ ಡಿ ಸಂಸ್ಥೆಗಳಿವೆ. ಬಯೊಟೆಕ್ನಾಲಜಿ, ಐಟಿಯಲ್ಲಿ, ಸ್ಟಾರ್ಟ ಅಪ್ ಗಳಿವೆ ಕೃಷಿ ಕ್ಷೇತ್ರದಲ್ಲಿಯೂ ಕರ್ನಾಟಕದ ಮುಂಚೂಣಿಯಲ್ಲಿದೆ. ಕೃಷಿಯಲ್ಲಿ ಶೆ 1% ರಷ್ಟು ಅಭಿವೃದ್ದಿಯಾದರೆ, ಕೈಗಾರಿಕಾ ರಂಗದಲ್ಲಿ 4% ಅಭಿವೃದ್ಧಿ ಆಗುತ್ತದೆ. ಸೇವಾ ವಲಯದಲ್ಲಿ ಶೇ 10% ರಷ್ಟು ಅಭಿವೃದ್ದಿಯಾಗುತ್ತದೆ. ಕೈಗಾರಿಕೋದ್ಯಮಿಗಳು ಕೃಷಿ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ನೀಡಬೇಕು. ಕೃಷಿಕರ ಆದಾಯ ದ್ವಿಗುಣ ಆದರೆ ದೇಶದ ಅಭಿವೃದ್ಧಿ ವೇಗ ಹೆಚ್ಚುತ್ತದೆ. ಕರ್ನಾಟಕ 1 ಟ್ರಿಲಿಯನ್ ಡಾಲರ್ ಎಕನಾಮಿ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಿತ್ತಿದ್ದೇವೆ. ನಾವು ಆರ್ ಎಂಡ್ ಡಿ ಪಾಲಿಸಿ, ರಿನೊವೇಬಲ್ ಎನರ್ಜಿ ಪಾಲಿಸಿ ಮಾಡಿದ್ದೇವೆ ಎಂದು ತಿಳಿಸಿದರು.
ನಾವು ಅಮೃತ ಮಹೋತ್ಸವವನ್ನು ಅಮೃತ ಕಾಲವಾಗಿ ಮಾರ್ಪಡಿಸಲು ಪ್ರಧಾನಿಯೊಂದಿಗೆ ನಾವೆಲ್ಲಬೇಕು. ನಾವೆಲ್ಲರೂ ಸೇರಿ 2047 ಗೆ ಅಮೃತ ಕಾಲ ಆಚರಿಸೋಣ ಎಂದು ಸಿಎಂ ಹೇಳಿದರು.
ಬಳಿಕ ಮಾತನಾಡಿದ ಕೇಂದ್ರ ಸಂಸ್ಕೃತಿ ಮಂತ್ರಿ ಕಿಶನ್ ರೆಡ್ಡಿ, ಅಮೃತ ಮಹೋತ್ಸವ ವೇಳೆ ನಾವೆಲ್ಲರೂ ಹೊಸ ಸಂಕಲ್ಪ ಮಾಡಬೇಕು. ನಮ್ಮ ದೇಶದ ಎಕಾನಮಿ 3. ಟ್ರಿಲಿಯನ ಡಾಲರ್ ಇದೆ. ಅದನ್ನು 5 ಟ್ರಿಲಿಯನ್ ಡಾಲರ್ ಮಾಡಲು ಸಂಕಲ್ಪ ಮಾಡಬೇಕು. ಕಳೆದ ಎಂಟು ವರ್ಷದಲ್ಲಿ ದೇಶದಲ್ಲಿ ಯಾವುದೇ ಬಾಂಬ್ ಬ್ಲಾಸ್ಟ್ ಆಗಿಲ್ಲ. ಕೊಮು ಗಲಭೆ ಆಗಿಲ್ಲ. ಈಶಾನ್ಯ ರಾಜ್ಯಗಳಲ್ಲಿ ಯಾವುದೇ ಗಲಭೆಗಳು ಆಗದ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಅಭಿವೃದ್ಧಿ ಮಾಡುತ್ತಿದ್ದೇವೆ. 80 ಸಾವಿರ ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಮಾಡಲಾಗಿದೆ. ಆ ಭಾಗದಲ್ಲಿ ಉದ್ಯಮಿಗಳು ಬಂಡವಾಳ ಹೂಡಬೇಕು ಎಂದು ತಿಳಿಸಿದರು.
ಸಿಎಂ ಬೊಮ್ಮಾಯಿಯವರನ್ನು ಭೇಟಿ ಮಾಡಿದ ಡಾ. ರಾಜ್ ಕುಟುಂಬ
ಸ್ವಾತಂತ್ರ್ಯೋತ್ಸವದಲ್ಲಿ ಸಾವರ್ಕರ್ ಫೋಟೋ ವಿವಾದ; ಓರ್ವನಿಗೆ ಚಾಕು ಇರಿತ
ಸಂಗೊಳ್ಳಿ ರಾಯಣ್ಣನ ದೇಶಭಕ್ತಿ, ಧೈರ್ಯ ಎಲ್ಲಾ ಯುವಜನರಿಗೂ ಬರಬೇಕು: ಸಿಎಂ
ಕಾಂಗ್ರೆಸ್ #FreedomMarch: ಇಂದಿನ ಬೃಹತ್ ನಡಿಗೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಹೆಜ್ಜೆ!
ತ್ಯಾಗ ಬಲಿದಾನದ ಫಲ ಸ್ವಾತಂತ್ರ್ಯ : ಸಿದ್ದರಾಮಯ್ಯ
ಕೆಯುಡಬ್ಲ್ಯೂಜೆ ಮನೆಯಂಗಳದಲ್ಲಿ ಗೌರವ ಕಾರ್ಯಕ್ರಮ..