Published
4 months agoon
ಬೆಂಗಳೂರು: ಜನೆವರಿ ೧೭ (ಯು.ಎನ್.ಐ.) ಕೋವಿಡ್ ೧೯ ಸೋಂಕಿಗೆ ಒಳಗಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನಗರದ ಮಣಿಪಾಲ್ ಆಸ್ಪತ್ರೆಗೆ ಪರೀಕ್ಷೆಗಾಗಿ ತೆರಳಲಿದ್ದಾರೆ.
ಇಂದು ಮಧ್ಯಾಹ್ನದ ನಂತರ ಅಸ್ಪತ್ರೆಗೆ ತೆರಳಲಿದ್ದಾರೆ. ಅಲ್ಲಿ ಕೋವಿಡ್ ಸೋಂಕು ನೆಗೆಟಿವ್ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲಿದ್ದಾರೆ. ಈ ಸಂಬಂಧ ಅವರು ನಿನ್ನೆ ರಕ್ತಪರೀಕ್ಷೆಗೆ ಒಳಗಾಗಿದ್ದರು. ಸೋಂಕಿಗೆ ಒಳಗಾಗಿ ಒಂದು ವಾರ ಕಳೆದಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪರೀಕ್ಷೆ ಮಾಡಿಸುತ್ತಿದ್ದಾರೆ.
ಸದ್ಯ ಮುಖ್ಯಮಂತ್ರಿ ಅವರು ಸೋಂಕಿನ ಯಾವುದೇ ಬಾಧೆಯಿಲ್ಲದೇ ಮನೆಯಿಂದಲೇ ದೈನಂದಿನ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಪೋನ್, ವೆಬ್ ಮೂಲಕ ಸಚಿವರು, ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತಿದ್ದಾರೆ. ವರ್ಚುವಲ್ ಆಗಿ ಸಭೆ – ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದಾರೆ.
ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದರೆ ಎಂದಿನಂತೆ ನೇರ ಕರ್ತವ್ಯದಲ್ಲಿ ಭಾಗಿಯಾಗಲಿದ್ದಾರೆ.
ನಗರದಲ್ಲಿ ಎಲ್ಲೆಡೆ ಕಳಪೆ ಕಾಮಗಾರಿ: ಎಚ್.ಡಿ.ಕುಮಾರಸ್ವಾಮಿ
ಪರಿಷತ್ ಟಿಕೆಟ್ ಹಂಚಿಕೆ: ಕಾಂಗ್ರೆಸ್ನಿಂದ ಒಮ್ಮತದ ಅಭ್ಯರ್ಥಿಗಳು ಶಿಫಾರಸು-ಡಿಕೆಶಿ
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ: ಈಶ್ವರಪ್ಪ ಪ್ರತಿಕ್ರಿಯೆ
ಮಳೆ ಅನಾಹುತ: ಸಚಿವರ ನೇತೃತ್ವದಲ್ಲಿ 8 ಕಾರ್ಯಪಡೆ ರಚನೆ
ಎಫ್ಡಿಐ ಹೂಡಿಕೆಯಲ್ಲಿ ರಾಜ್ಯಕ್ಕೆ ಸಿಂಹಪಾಲು: ಸಿಎಂ
ಟ್ರಾನ್ಸಫಾರ್ಮರ್ ನಿರ್ವಹಣಾ ಅಭಿಯಾನ: 2 ಲಕ್ಷ ಟಿಸಿ ದುರಸ್ತಿ!