Connect with us


      




ಕರ್ನಾಟಕ

ಬಿಬಿಎಂಪಿ ಮೀಸಲಾತಿ ಪಟ್ಟಿಗೆ ‘ಕೈ’ ಕೆಂಡ; ರೌಡಿಸಂ ಮಾಡ್ತಿದ್ದಾರೆಂದ ಸಿಎಂ ಬೊಮ್ಮಾಯಿ

Lakshmi Vijaya

Published

on

ಬೆಂಗಳೂರು: ಆಗಸ್ಟ್ 05 (ಯು.ಎನ್.ಐ.) ಬಿಬಿಎಂಪಿ ಚುನಾವಣೆಗೆ ಮೀಸಲಾತಿ ಪಟ್ಟಿ ಹೊರಡಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಇಂದು ವಿಕಾಸಸೌಧಕ್ಕೆ ಮುತ್ತಿಗೆ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿಕಾರಿರುವ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಮೀಸಲಾತಿಯನ್ನ 2015 ರ ಹೈಕೋರ್ಟ್ ಜಡ್ಜ್ ಮೆಂಟ್ ಪ್ರಕಾರ ಮಾಡಿದ್ದೇವೆ. ನಮ್ಮ ಶಾಸಕರ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನವರು ಏನ್ ಮಾಡಿದ್ರು ಅನ್ನೋದು ನಮಗೆ ಗೊತ್ತಿದೆ. ಆಕ್ಷೇಪ ಸಲ್ಲಿಸುವುದಕ್ಕೆ ಅವರಿಗೆ ಸಮಯವಿದೆ. ಆದ್ರೆ ಇವರು ರೌಡಿಸಂ ಮಾಡಿದ್ದಾರೆ. ವಿಕಾಸಸೌಧಕ್ಕೆ  ನುಗ್ಗಿದ್ದಾರೆ. ಇದು ಕಾಂಗ್ರೆಸ್ ಸಂಸ್ಕೃತಿ ತೋರಿಸುತ್ತದೆ. ಇದು ಎಷ್ಟರಮಟ್ಟಿಗೆ ಸರಿ ಎಂಬುದನ್ನ ಜನ ಗಮನಿಸುತ್ತಿದ್ದಾರೆ ಎಂದರು.

ದೆಹಲಿಯಿಂದ ವಾಪಸ್ಸಾದ ಬಳಿಕ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ಕೊಡುತ್ತೇನೆ ಎಂದರು.`

Share