Connect with us


      
ದೇಶ

ಕನಿಷ್ಟ 4 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ : ಸಿಎಂ ಬೊಮ್ಮಾಯಿ

UNI Kannada

Published

on

ಬೆಂಗಳೂರು : ಮಾರ್ಚ್ 10 (ಯು.ಎನ್.ಐ.)ಇಂದು ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ನಾಲ್ಕು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಉತ್ತರ ಪ್ರದೇಶದಲ್ಲಿ ಹೆಚ್ಚು ಸ್ಥಾನ ಪಡೆದಿದೆ ಎಂದು ಹೇಳಿದ ಸಿಎಂ ಬೊಮ್ಮಾಯಿ.

ಇಂದು ಮಾದ್ಯಮದೊಂದಿಗೆ ಮಾತನಾಡಿದ ಅವರು ಪಂಚರಾಜ್ಯಗಳ ಚುನಾವಣೆಯಲ್ಲಿ ಕನಿಷ್ಟ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ‌ಪಕ್ಷ‌ ಅಧಿಕಾರಕ್ಕೆ ಬರಲಿದೆ, ಉತ್ತರಪ್ರದೇಶದಲ್ಲಿ ಯೋಗಿ- ಮೋದಿ ನೇತೃತ್ವದಲ್ಲಿ ಸರ್ಕಾರ ಬಂದಿದೆ. ಡಬಲ್ ಇಂಜಿನ್ ಸರ್ಕಾದ ಕಾರ್ಯಕ್ರಮಗಳಿಂದಾಗಿ ಸರ್ಕಾರ ಬಂದಿದೆ, ಮೋದಿ ನಾಯಕತ್ವ ಮತ್ತು ಕಾರ್ಯಕ್ರಮಗಳನ್ನು ಜನರು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.

ಈ ಫಲಿತಾಂಶದಿಂದಾಗಿ ಮೋದಿ ಮತ್ತು ಯೋಗಿ ವಿರೋಧಿಗಳನ್ನು ಧೂಳಿಪಟ ಮಾಡಿದ್ದಾರೆ ನವ ಭಾರತಕ್ಕಾಗಿ ಕೆಲಸ ಮಾಡಲಾಗುತ್ತಿದೆ
ಬರುವ ನಮ್ಮ ರಾಜ್ಯದಲ್ಲೂ ‌ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಇನ್ನಷ್ಟು ಉತ್ಸಹ ಈ ಚುನಾವಣೆ ನಮಗೆ ಕೊಟ್ಟಿದೆ, ಎಪ್ರಿಲ್ ತಿಂಗಳಲ್ಲಿ ಮೋದಿ ರಾಜ್ಯಕ್ಕೆ ಬರಲಿದ್ದೂ ಒಂದು ವರ್ಷದ ಸಾಧನೆ ಅನಾವರಣ ಮಾಡಲಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

Share