Connect with us


      
ರಾಜಕೀಯ

ಈಶ್ವರಪ್ಪ ಬಂಧನ ತನಿಖಾಧಿಕಾರಿಗಳ ವಿವೇಚನೆಗೆ ಬಿಟ್ಟಿದೆ: ಸಿಎಂ  ಬೊಮ್ಮಾಯಿ

Kumara Raitha

Published

on

ಗದಗ: ಏಪ್ರಿಲ್‌ ೧೫ (ಯು.ಎನ್.‌ಐ.) ಈಗಾಗಲೇ ಈಶ್ವರಪ್ಪ ಅವರು ಸ್ವಯಂ ಪ್ರೇರಿತವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರನ್ನು ಬಂಧಿಸುವುದನ್ನು ತನಿಖಾಧಿಕಾರಿಗಳು ನಿರ್ಧರಿಸುತ್ತಾರೆ. ಅಲ್ಲಿವರೆಗೆ ಕಾಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ ಪ್ರಕರಣ ತನಿಖೆ ನಡೆಯಬೇಕು. ತನಿಖೆಗೆ ಎಲ್ಲರು ಸಹಕರಿಸಬೇಕು. ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರನ್ನು ಬಂಧಿಸಲಿಲೇ ಇಲ್ಲ. ಕರ್ನಾಟಕ ಪೊಲೀಸರ ತನಿಖೆ ವೇಳೆಯೂ ಬಂಧಿಸಲಿಲ್ಲ. ಬಳಿಕ ಪ್ರಕರಣ ಸಿಬಿಐಗೆ ವರ್ಗಾವಣೆಯಾದಾಗಲೂ ಬಂಧನವಾಗಲಿಲ್ಲ. ಅದು ಪ್ರಕರಣದ ತನಿಖಾಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದು. ಈಶ್ವರಪ್ಪ ಅವರನ್ನು ಬಂಧಿಸಬೇಕು ಎನ್ನಲು ಕಾಂಗ್ರೆಸ್ ಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ, ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ, ಶಾಸಕ ಕಳಜಪ್ಪ ಬಂಡಿ,  .ವಿ.ಸಂಕನೂರ, ಅನಿಲ್ ಮೆಣಸಿನಕಾಯಿ, ನಗರಸಭೆ ಅಧ್ಯಕ್ಷೆ ಉಷಾ ಮಹೇಶ ದಾಸರ ಮತ್ತಿತರರು ಇದ್ದರು.

Share