Connect with us


      




ಕರ್ನಾಟಕ

ಸಿಎಂ ಬೊಮ್ಮಾಯಿಯವರ ದಾವೋಸ್ ಪ್ರವಾಸ ಅನುಮಾನ

Lakshmi Vijaya

Published

on

ಬೆಂಗಳೂರು: ಮೇ 13 (ಯು.ಎನ್.ಐ.) ಸ್ವಿಟ್ಜರ್ಲೆಂಡ್ ನ ದಾವೋಸ್‌ನಲ್ಲಿ ನಡೆಯುವ ವಿಶ್ವ ಆರ್ಥಿಕ ಸಮ್ಮೇಳನಕ್ಕೆ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿಯವರು ಹೋಗುವುದು ಅನುಮಾನವಾಗಿದೆ.

ಮೇ 21 ರಿಂದ ನಡೆಯುವ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಮೊದಲು ಮೇ 19 ಕ್ಕೆ ಲಂಡನ್‌ಗೆ ತೆರಳಿ ಅಲ್ಲಿ ಇನ್ವೆಸ್ಟ್ ಕರ್ನಾಟಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ರೋಡ್ ಶೋ ನಡೆಸಿ ನಂತರ ಸಟ್ಜರ್ಲೆಂಡ್ ನ ದಾವೋಸ್‌ಗೆ ತೆರಳಲು ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಮುಖ್ಯಮಂತ್ರಿ ಈಗ ಲಂಡನ್ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಆದರೆ  ದಾವೋಸ್‌ಗೆ ಮೇ 21 ರಂದು ತೆರಳುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದ್ದು, ರಾಜ್ಯದಲ್ಲಿನ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದಾವೊಸ್ ಪ್ರವಾಸವೂ ರದ್ದಾಗುವ ಸಾಧ್ಯತೆ ಇದೆ ಮಾತುಗಳು ಕೇಳಿ ಬರುತ್ತಿವೆ.

Share