Connect with us


      




ಆರೋಗ್ಯ

ನೈಟ್ ಕರ್ಫ್ಯೂ, ಹೊಸ ವರ್ಷಾಚರಣೆ ಬಗ್ಗೆ ಮುಂದಿನ ವಾರ ನಿರ್ಧಾರ; ಸಿಎಂ ಬೊಮ್ಮಾಯಿ

Iranna Anchatageri

Published

on

ಬೆಂಗಳೂರು, ಡಿ 9 (ಯುಎನ್ಐ) ಕೋವಿಡ್ ಬಗ್ಗೆ ಗಾಬರಿ ಬೇಡ.. ನೈಟ್ ಕರ್ಫ್ಯೂ, ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಬಗ್ಗೆ ಒಂದು ವಾರದವರೆಗಿನ ಬೆಳವಣಿಗೆ ನೋಡಿಕೊಂಡು ನಿರ್ಧರಿಸಲಾಗುವುದು ಅಂತಾ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ನಿಂದ ಗಾಬರಿಯಾಗುವ ಅವಶ್ಯಕತೆ ಇಲ್ಲ. ಈಗಿರುವ ಸೋಂಕಿತರ ಅಂಕಿ ಅಂಶಗಳನ್ನು ಗಮನಿಸಿದಾಗ ಭೀತಿಗೊಳಗಾಗಬೇಕಿಲ್ಲ. ಆದರೆ ಮುಂಜಾಗ್ರತಾಯಲ್ಲಿರುವುದು ಒಳ್ಳೆಯದು ಅಂತಾ ಸಿಎಂ ಬೊಮ್ಮಾಯಿ ತಿಳಿಸಿದರು.

ಎಲ್ಲೆಲ್ಲಿ ಹಾಸ್ಟೆಲ್‌ಗಳು, ಕ್ಲಸ್ಟರ್ ಗಳಿವೆ ಅಲ್ಲಿ ವಿಶೇಷವಾದ ಮಾರ್ಗಸೂಚಿಗಳನ್ನು ನೀಡಲಾಗುತ್ತದೆ. ಹಾಸ್ಟೆಗಳನ್ನು ಯಾವ ರೀತಿ ನಿಭಾಯಿಸಬೇಕು? ಎರಡು ಬಾರಿ ಸ್ಯಾನಿಟೈಸೇಷನ್ ಮಾಡುವುದು, ಏಕಕಾಲಕ್ಕೆ ಎಲ್ಲ ಮಕ್ಕಳು ಒಂದೇ ಬಾರಿ ಊಟ ಮಾಡದಂತೆ ತಡೆಯುವುದು, ಹಾಸ್ಟೆಲ್ ಗಳಿಗೆ ಭೇಟಿ ನೀಡುವವರ ಸಂಖ್ಯೆಯನ್ನು ಕಡಿಮೆ ಮಾಡುವುದು, ಅಡುಗೆ ಸಿಬ್ಬಂದಿಯ ಡಬಲ್ ಡೋಸ್ ಪಡೆಯುವುದು ಕಡ್ಡಾಯ ಹಾಗೂ ಹಾಸ್ಟೆಲ್ ಗಳಲ್ಲಿ ಐಸೋಲೇಷನ್ ರೂಮ್ ನಿರ್ಮಿಸುವುದು ಸೇರಿದಂತೆ ಅನೇಕ ಮುಂಜಾಗ್ರತೆ ಕ್ರಮಗಳನ್ನೊಳಗೊಂಡ ವಿಶೇಷ ಮಾರ್ಗಸೂಚಿಯನ್ನು ಹಾಸ್ಟೆಲ್ ಹಾಗೂ ಕ್ಲಸ್ಟರ್ ಗಳಿಗೆ ಪ್ರಕಟಿಸಲಾಗುವುದು ಅಂತಾ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಇನ್ನು ಸಚಿವ ಸಂಪುಟ ಸಭೆಯಲ್ಲಿ ಸಚಿವರುಗಳು ಅನೇಕ ಸಲಹೆ ನೀಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಮೇ ಹಾಗೂ ಜೂನ್ ನಲ್ಲಿ ನಡೆಸಿದ ಲಸಿಕಾ ವಿಶೇಷ ಅಭಿಯಾನವನ್ನು ರಾಜ್ಯದಲ್ಲಿ ಮತ್ತೊಮ್ಮೆ ಹಮ್ಮಿಕೊಳ್ಳಬೇಕೆಂದು ಸಲಹೆ ಕೊಟ್ಟಿದ್ದಾರೆ. ಅದರಂತೆ ಮುಂದಿನ ದಿನಗಳಲ್ಲಿ ಮತ್ತೆ ರಾಜ್ಯದಲ್ಲಿ ವಿಶೇಷ ಲಸಿಕಾ ಡ್ರೈವ್ ಅನ್ನು ಹಮ್ಮಿಕೊಳ್ಳಲಾಗುತ್ತದೆ ಅಂತಾ ಸಿಎಂ ಬೊಮ್ಮಾಯಿ ತಿಳಿಸಿದರು .

ಗಡಿಬಾಗದಲ್ಲಿರುವ ಕಟ್ಟೆಚ್ಚರ ಮುದುಂವರಿಯುಲಿದೆ. ಕೇರಳ ವಿದ್ಯಾರ್ಥಿಗಳಿಗೆ ಡಬಲ್ ಡೋಸ್ ಹಾಗೂ ಆರ್ ಟಿ ಪಿಸಿಆರ್ ಟೆಸ್ಟ್ ಕಡ್ಡಾಯವಾಗಿ ಮುಂದುವರಿಯುತ್ತದೆ. ಹಾಸ್ಟೆಲ್ ಹಾಗೂ ಕ್ಲಸ್ಟರ್ ಗಳಿಗೆ ಪುನರ್ ವಿಮರ್ಶೆ ಮಾಡಿ ಮಾರ್ಗ ಸೂಚಿಗಳನ್ನು ಆರೋಗ್ಯ ಇಲಾಖೆ ಪ್ರಕಟಿಸಲಿದೆ ಅಂತಾ ಮುಖ್ಯಮಂತ್ರಿಗಳು ಹೇಳಿದರು.

ನೈಟ್ ಕರ್ಫ್ಯೂ, ಕ್ರಿಸಮಸ್ ಹಾಗೂ ಹೊಸ ವರ್ಷಾಚರಣೆಗೆ ಇನ್ನೊಂದು ವಾರದ ಬೆಳವಣಿಗೆಗಳನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ನಿರ್ಥಾರ ಕೈಗೊಳ್ಳಲಾಗುವುದು ಅಂತಾ ಸುದ್ದಿಗಾರರ ಪ್ರಶ್ನೆಗೆ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು.

Share