Published
7 months agoon
ಛತ್ತಿಸಗಢ,ನ.5(ಯುಎನ್ಐ)ಛತ್ತಿಸಗಢ್ನ ಸಿಎಂ ಛಡಿಯೇಟು ತಿಂದಿದ್ದಾರೆ. ಅರೆ ಇದೇನು ಮುಖ್ಯಮಂತ್ರಿಯಾದವರು ಛಡಿಯೇಟು ತಿನ್ನೋದಾ?ಸಿಎಂ ಯಾಕಾದರೂ ಛಡಿಯೇಟು ತಿಂದಿಬಹುದು?ಕಾರಣ ಏನು?ಅನ್ನೋ ಹತ್ತಾರು ಪ್ರಶ್ನೆಗಳು ತಲೇಲಿ ಮೂಡುತ್ತವೆ. ಅದಕ್ಕೂ ಉತ್ತರ ಇದೆ.ಈ ಕುತೂಹಲ ತಣಿಸೋಕೆ ಇರೋ ಕಾರಣ ಅಂದರೆ ಅದು ಗೌರ-ಗೌರಿ.
ಹೌದು,ಛತ್ತಿಸಗಢ್ನಲ್ಲಿ ಅನೇಕ ವರ್ಷಗಳಿಂದ ಗೌರ-ಗೌರಿ ಅನ್ನೋ ಪೂಜೆಯನ್ನ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರಲಾಗ್ತಿದೆ.ಈ ಗೌರ-ಗೌರಿ ಅನ್ನೋ ಪೂಜೆಯನ್ನ ಗೋವರ್ಧನನಿಗೋಸ್ಕರ ಇಲ್ಲಿ ಮಾಡ್ತಾರೆ.ಗೋವರ್ಧನನಿಗೆ ಸಲ್ಲಿಸೋ ಗೌರ-ಗೌರಿ ಪೂಜೆಯಲ್ಲಿ ಕೈಗೆ “ಬೈಗಾ” ಅನ್ನೋ ಜಾತಿಗೆ ಸೇರಿದ ವ್ಯಕ್ತಿ ಛಡಿಯೇಟು ನೀಡುತ್ತಾನೆ.ಈ ಛಡಿಯೇಟು ತಿನ್ನೋದಕ್ಕೆ ಛತ್ತಿಸ್ಗಢ್ನಲ್ಲಿ ಸಟಕಾ ಅಂತ ಕರೆಯಲಾಗುತ್ತೆ.ಹೀಗೆ ಗೋವರ್ಧನನ್ನು ಧ್ಯಾನಿಸಿ ಛಡಿಯೇಟು ತಿಂದರೆ ಎಲ್ಲಾ ದೋಷಗಳು, ಶತೃಗಳು ನಾಶವಾಗ್ತಾರೆ ಅನ್ನೋ ನಂಬಿಕೆ ಇಲ್ಲಿದೆ.
ಇದೇ ನಂಬಿಕೆಯನ್ನು ಹೊತ್ತಿರುವ ಛತ್ತೀಸ್ಗಢ್ ಸಿಎಂ ಭೂಪೇಶ್ ಬಘೇಲ್ ಇಲ್ಲಿನ ದುರ್ಗ್ ಜಿಲ್ಲೆಯ ಜಂಜಗಿರಿಯಲ್ಲಿ ಗೋವರ್ಧನ್ ಪೂಜೆ ಸಂದರ್ಭದಲ್ಲಿ ತಮ್ಮ ಎರಡೂ ಕೈಗಳ ಮೇಲೆ ಬೈಗಾ ಸಮುದಾಯದ ವ್ಯಕ್ತಿಯಿಂದ ಬರೋಬ್ಬರಿ 8 ಛಡಿಯೇಟು (ಸಟ್ಕಾ)ತಿಂದಿದ್ದಾರೆ.ಈ ದೃಶ್ಯವನ್ನ ನೋಡೋಕೆ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿ ಸಿಎಂ ಛಡಿಯೇಟು ತಿನ್ನೋದಕ್ಕೆ ಸಾಕ್ಷಿಯಾದರು.ರಾಜ್ಯದ ಮಂಗಳಕ್ಕಾಗಿ ತಮ್ಮ ರಾಜಕೀಯ ಬದುಕಿನಲ್ಲಿ ಶುಭತರಲೆಂದು ಪ್ರಾರ್ಥಿಸಿದರು.ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಭೂಪೇಶ್ ಬಾಘೆಲ್ ಪರಂಪರೆ ನಿಭಾಯಿಸಿ ವಿಘ್ನಗಳ ನಿವಾರಣೆಗೆ ಪ್ರಾರ್ಥಿಸಿರೋದಾಗಿ ಬರೆದುಕೊಂಡಿದ್ದಾರೆ.
ಬಹಿರಂಗ ಕ್ಷಮೆಯಾಚಿಸುವಂತೆ ದೆಹಲಿ ಪೊಲೀಸರಿಗೆ ನೋಟಿಸ್ ಕಳುಹಿಸಿದ ಎಎಪಿ ಶಾಸಕ
ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಇಳಿಸಿದ ಮಹಾರಾಷ್ಟ್ರ ಸರ್ಕಾರ
ಅಜಯ್ ದೇವಗನ್ ರಂತೆ ಸ್ಟಂಟ್ ಪ್ರದರ್ಶನ; ಖಾಕಿ ಅತಿಥಿಯಾದ ಯುವಕ
ಬೆಚ್ಚಿಬೀಳಿಸುವ ಪ್ಲಾನ್!; ಮನೆಯನ್ನೇ ಗ್ಯಾಸ್ ಚೇಂಬರ್ ಮಾಡಿಕೊಂಡು ಮೂವರ ಆತ್ಮಹತ್ಯೆ!
ಥಾಮಸ್ ಕಪ್ ವಿಜೇತ ಲಕ್ಷ್ಯಸೇನ್ ಬಳಿ ‘ಆ ಸ್ವೀಟ್’ ತರಲು ಹೇಳಿದ್ದರಂತೆ ಪ್ರಧಾನಿ ಮೋದಿ
ರಾಂಬನ್-ಬನಿಹಾಲ್ ಸುರಂಗ ಕುಸಿತ: ತನಿಖೆಗೆ ಕೇಂದ್ರದಿಂದ ಸಮಿತಿ ರಚನೆ