Connect with us


      




ಕರ್ನಾಟಕ

ಜಿಎಂ ಗ್ರೂಪ್ ಮತ್ತು ಅದ್ವಿತೀಯ ಸಂಸ್ಥೆಗಳಿಂದ 10 ಸಾವಿರ ಉದ್ಯೋಗ ಸೃಷ್ಠಿ : ಸಿಎಂ

UNI Kannada

Published

on

ಬೆಂಗಳೂರು : ಜನವರಿ 05 (ಯು.ಎನ್.ಐ.) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಜಿಎಂ ಗ್ರೂಪ್ ಮತ್ತು ಅದ್ವಿತೀಯ ಸಂಸ್ಥೆಗಳ ಜಂಟಿ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ನಿರ್ಮಾಣವಾಗಲಿರುವ ಫೈವ್ ಬಿಸಿನೆಸ್  ವಾಣಿಜ್ಯ ಸಮುಚ್ಛಯ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು.

ಬೆಂಗೂರಿನಲ್ಲಿ ವಾಣಿಜ್ಯ ಸಮುಚ್ಚಯ ಕಟ್ಟಡಕ್ಕೆ ಶಂಕು ಸ್ಥಾಪನೆ ನೇರವೇರಿಸಿ ಮಾತನಾಡಿದ ಅವರು. ಐಟಿ ಇಂಡಂಸ್ಷ್ರಿಯನ್ನ ಅತ್ಯಂತ ಯಶಸ್ವಿಯಾಗಿ ನಡೆಸಲು ನಿರ್ಧರಿಸಿದ್ದಾರೆ. ಇದರಿಂದಾಗಿ ಸುಮಾರು 10 ಸಾವಿರ ಜನರಿಗೆ ಉದ್ಯೋಗವಕಾಶಗಳು ಸೃಷ್ಟಿಯಾಗುವ ಸಾಧ್ಯತೆಯಿದೆ, ಅಮೇರಿಕಾದಲ್ಲಿರುವ ಸಿಲಿಕಾನ್ ವ್ಯಾಲಿಯಂತೆ ಇದು  ನಮ್ಮ ನಾಡಿನಲ್ಲಿ ಕಾರ್ಯ ನಿರ್ವಹಿಸಲಿದ. ಬೆಂಗಳೂರಿನ ನಾಲ್ಕೂ ದಿಕ್ಕಿನಲ್ಲಿ  ಐಟಿ ಉದ್ಯಮ ವಿಸ್ತರಿಸಿದೆ . ಬೆಂಗಳೂರಿನಲ್ಲಿ  ಐಟಿ ಉದ್ಯೋಮಕ್ಕೆ ನಮ್ಮ ಸರ್ಕಾರ ಹಿಂದಿನಿಂದಲೂ ಮಹತ್ವ ನೀಡಿದೆ ಈಗಲೂ ಸಹಕಾರ ನೀಡಲಿದೆ. ಇಂದಿನ ದಿನಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಸಿಗುತಿದೆ ಎಂದರೆ ಅದು ಐಟಿ ಉದ್ಯಮದಲ್ಲಿ ಮಾತ್ರ ಎಂದರು.

ಕೇವಲ  ಬಂಡವಾಳ ಹೂಡಿಕೆಯಿಂದ ದೊಡ್ಡ ದೇಶ ಆಗೋದಿಲ್ಲ, ಜನರ ಕೈಲಿ ಉದ್ಯೋಗ ಇದ್ದಾಗ ಮಾತ್ರ ವೃದ್ದಿಯಾಗಲು  ಸಾಧ್ಯ, ಇದರಿಂದ ದೇಶಕ್ಕೆ, ಸರ್ಕಾರಕ್ಕೆ, ಆರ್ಥಿಕತೆ ವೃದ್ದಿಯಾಗಲು  ಸಾಧ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ. ದೇಶದ ಒಟ್ಟು ಐಟಿ ಎಕ್ಸ್ ಪೋರ್ಟ್ ನಲ್ಲಿ ಶೇಖಡ 40 ರಷ್ಟು ನಮ್ಮ ಬೆಂಗಳೂರಿನಿಂದ ಆಗುತ್ತಿದೆ. ಬೆಂಗಳೂರು ಇಡೀ ದೇಶದ ಆರ್ಥಿಕತೆಯ ಪ್ರಮುಖ ಕೇಂದ್ರ. ಯೋಜನಾ ಬದ್ದವಾದ ಬೆಳವಣಿಗೆ ಮತ್ತು ಸಮಗ್ರ ಅಭಿವೃದ್ದಿ  ಹಾಗೂ ಎಲ್ಲಾ ವರ್ಗದ ಜನರಿಗೆ ಸೌಲಭ್ಯಗಳನ್ನ, ಸೇವೆಗಳನ್ನು ನಮ್ಮ ಸರ್ಕಾರ ರೂಪಿಸುತ್ತಿದ್ದೇವೆ ಎಂದರು.

ಯಡಿಯೂರಪ್ಪನವರು  ಮುಖ್ಯಮಂತ್ರಿಗಳಾಗಿದ್ದಾಗ  ಬೆಂಗಳೂರಿಗೆ ವಿಷನ್ 2020 ಯೋಜನೆಗಳನ್ನ ರೂಪಿಸಿದ್ದರು ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ತ್ವರಿತ ಗತಿಯಲ್ಲಿ ಅನಿಷ್ಠಾನಗೊಳಿಸಲು  ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ. ಇದಕ್ಕೆ ಬೇಕಾದ ವಿಶೇಷ ಅನುದಾನಗಳನ್ನ ಮುಂದಿನ ದಿನಗಳಲ್ಲಿ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಒಂದು ಕಡೆ ಮೆಟ್ರೋ ಮತ್ತೊಂದು ಕಡೆ ಬನ್ನೇರುಘಟ್ಟ ಹೈವೆ ಇದೆ ಪ್ರಮುಖ ಸ್ಟ್ರಾಟೆಜಿಕ್ ಸ್ಥಳದಲ್ಲಿ ಐಟಿ ಉದ್ಯಮಕ್ಕೆ ಒಳ್ಳೆಯ  ಜಾಗ ಸಿಗುವುದು ಇವತ್ತಿನ ಕಾಲದಲ್ಲಿ ಬಹಳ ಕಷ್ಟವಿವಿದೆ. ಇದನ್ನು ಸದುಪಯೋಗ ಪಡೆದುಕೊಳ್ಳುವಂತೆ ಜಿಎಂ ಗ್ರೋಪ್ ಗೆ ಶುಭ ಸಿಎಂ ಶುಭ ಹಾರೈಸಿದರು

Share