Connect with us


      




ಕರ್ನಾಟಕ

ಡಿ.ಕೆ ಶಿವಕುಮಾರದ್ದು ಯಾವ ಅಜೆಂಡಾ? – ಸಿ ಎಂ ಇಬ್ರಾಹಿಂ ಪ್ರಶ್ನೆ

Iranna Anchatageri

Published

on

ಬೆಂಗಳೂರು: ಮಾರ್ಚ್ 12 (ಯು.ಎನ್.ಐ.) ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿದರು. ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಘೋಷಣೆ ಮಾಡಿರುವ ಇಬ್ರಾಹಿಂ, ದೇವೇಗೌಡರ ಜೊತೆ ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂಗ್ರೆಸ್ ಪಕ್ಷದ ವಿರುದ್ಧ ಅಸಮಾಧಾನ ಹೊರ ಹಾಕಿದ ಅವರು, ಚಂದಾ ಹಣದ ಮೇಲೆ ಕಾಂಗ್ರೆಸ್ ನವರು ಬದುಕುತ್ತಿದ್ದಾರೆ. ನಾನು ಯಾರ ಚಂದಾ ಹಣದಲ್ಲಿ ಬದುಕುತ್ತಿಲ್ಲ. ನನಗೆ ಕಾಂಗ್ರೆಸ್ ಏನೂ ಕೊಟ್ಟಿಲ್ಲ. ನನ್ನ ಹಣದಲ್ಲೇ ಕಾಂಗ್ರೆಸ್ ನಲ್ಲಿ ಕೆಲಸ ಮಾಡಿದ್ದೇನೆ. ನನ್ನ ಋಣದಲ್ಲಿ ಕಾಂಗ್ರೆಸ್ ಪಕ್ಷ ಇದೆ. ಅವರ ಋಣವನ್ನ ತೀರಿಸಿ ಹೋಗುತ್ತಿದ್ದೇನೆ. ಜೆಡಿಎಸ್ ಸೇರುವುದರಿಂದ ಕಾಂಗ್ರೆಸ್ ಗೆ ಡ್ಯಾಮೇಜ್ ಆಗಲಿದೆಯೋ ಇಲ್ಲವೋ ಎಂಬುದು ಮುಂದೆ ಗೊತ್ತಾಗಲಿದೆ. ಆದಷ್ಟು ಬೇಗ ಜೆಡಿಎಸ್ ಸೇರುತ್ತಿದ್ದೇನೆ ಎಂದು ತಿಳಿಸಿದರು.

ನನ್ನದೇನೋ ಸೆಲ್ಫ್ ಅಜೆಂಡಾ. ಡಿ.ಕೆ ಶಿವಕುಮಾರದ್ದು ಯಾವ ಅಜೆಂಡಾ ಎಂದು ಪ್ರಶ್ನೆ ಮಾಡಿದ ಅವರು, ನನ್ನ ಸೇರ್ಪಡೆಯಿಂದ ಯಾವುದೇ ಅಸಮಾಧಾನ ಇಲ್ಲ. ನನ್ನನ್ನ ಬರ ಮಾಡಿಕೊಳ್ಳುತ್ತಿರೋದೆ ಜಫ್ರುಲ್ಲಾ ಖಾನ್, ಫಾರೂಕ್. ಇಬ್ಬರೂ ನನ್ನನ್ನ ಪಕ್ಷಕ್ಕೆ ಕರೆಯಲು ಏರ್ ಪೋರ್ಟ್ ಗೆ ಬಂದಿದ್ದರು. ಫಸ್ಟ್ ಗೇರ್ ಕುಮಾರಸ್ವಾಮಿ ಅವರದ್ದೇ… ನನ್ನನ್ನ ಪಕ್ಷಕ್ಕೆ ಕರೆಯುತ್ತಿರೋದೆ ಕುಮಾರಸ್ವಾಮಿ ಎಂದ ಅವರು, ಯಾವಾಗ ಸೇರೋದು ಅನ್ನೋದು ಇನ್ನೂ ತೀರ್ಮಾನ ಆಗಿಲ್ಲ ಎಂದು ಹೇಳಿದರು.

ಬಿಜೆಪಿ ಜೊತೆ ಜೆಡಿಎಸ್ ಹೋಗೋದಿಲ್ಲ. ಈ ಬಗ್ಗೆ ಖುದ್ದು ನಾನೇ ಮಾತನ್ನಾಡಿದ್ದೆ. ಇಷ್ಟೊತ್ತು ಇದನ್ನೇ ಸ್ಪಷ್ಟಪಡಿಸಿಕೊಂಡೇ ಬಂದಿದ್ದೇನೆ ಎಂದು ಹೇಳಿದ ಇಬ್ರಾಹಿಂ, ಬಿಜೆಪಿ ಜೊತೆ ಸಮಾನ ಅಂತರ ಕಾಯ್ದುಕೊಂಡು ಹೋಗುತ್ತೇವೆ ಅಂತಾ ದೇವೇಗೌಡರು ಹೇಳಿದ್ದಾರೆ. ನನಗೆ ಕಿಂಗ್ ಆಗುವ ಆಸೆ ಇದೆ. ಕಿಂಗ್ ಮೇಕರ್ ಆಗುವ ಆಸೆ ಇಲ್ಲ. ನನ್ನಿಂದ ಡ್ಯಾಮೇಜ್ ಆಗೋದಿಲ್ಲ ಅಂತಾ ಸಿದ್ದರಾಮಯ್ಯ ಹೇಳ್ತಿದ್ದಾರೆ. ಸಂತೋಷ ಹೇಳಲಿ.. ಆದರೆ, ನಾನು ನನ್ನ ಮನೆಯನ್ನ ಕಟ್ಟಿಕೊಳ್ಳಲು ಹೊರಟಿದ್ದೇನೆ ಅಷ್ಟೇ. ನನಗೆ ಯಾವ ಸ್ಥಾನಮಾನ ನೀಡಿದರೂ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ನಾಳೆ ನಮ್ಮ ಸಮಾಜದ ಗುರುಗಳ ಜೊತೆ ಚರ್ಚೆ ನಡೆಸುತ್ತೇನೆ. ಬಳಿಕ ಮಠಾಧೀಶರ ಜೊತೆ ಮಾತುಕತೆ ನಡೆಸುತ್ತೇನೆ. ಅದಾದ ಬಳಿಕ ಪಕ್ಷ ಸೇರ್ಪಡೆ ಬಗ್ಗೆ ತೀರ್ಮಾನಿಸಲಾಗುವುದು.
ನಾನು ಯಾವುದೇ ಷರತ್ತಿನೊಂದಿಗೆ ಸೇರ್ಪಡೆಯಾಗುತ್ತಿಲ್ಲ. ಪಕ್ಷದ ದುಡಿಮೆಯಷ್ಟೇ ನನ್ನ ಆದ್ಯತೆ. ಈಗಾಗಲೇ ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟಿದ್ದೇನೆ. ಜೆಡಿಎಸ್ ಏನೂ ಸಣ್ಣ ಪಕ್ಷವಲ್ಲ
ಪ್ರಧಾನಿ, ಸಿಎಂ ಕೊಟ್ಟ ಪಕ್ಷ ಎಂದು ಇಬ್ರಾಹಿಂ ಹೇಳಿದರು.

Share