Published
2 weeks agoon
ಬೆಂಗಳೂರು, ಜೂನ್ 22: ಐಕಿಯಾ ಪೀಠೋಪಕರಣ ಮಳಿಗೆಯಿಂದಾಗಿ ಸ್ಥಳೀಯರಿಗೆ ಅತಿ ಹೆಚ್ಚು ಉದ್ಯೋಗಾವಕಾಶ ದೊರೆಯಲಿದೆ. ಶೇ 75 ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆಯನ್ನು ಸಂಸ್ಥೆಯ ಮುಖ್ಯಸ್ಥರು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಇಂದು ಸ್ವೀಡನ್ ಮೂಲದ ಗೃಹ ಪೀಠೋಪಕರಣಗಳ ಮಾರಾಟ ಕಂಪನಿ ‘ಐಕಿಯಾ’ ದ ಅತಿದೊಡ್ಡ ಮಳಿಗೆಯನ್ನು ನಗರದ ನಾಗಸಂದ್ರದಲ್ಲಿ ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ದಾವೋಸ್ ನಲ್ಲಿ ಅಂತಾರಾಷ್ಟ್ರೀಯ ಐಕಿಯಾ ಮುಖ್ಯಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಗಿತ್ತು. ಸುಮಾರು 3000 ಕೋಟಿ ಹೂಡಿಕೆ ಮಾಡಲು ತೀರ್ಮಾನ ಮಾಡಿದ್ದಾರೆ ಎಂದರು.
– CM of Karnataka (@CMOKarnataka) 22 June 2022
ಕುಶಲಕರ್ಮಿಗಳಿಗೆ ಅವಕಾಶ
ಮಳಿಗೆ ಪ್ರಾರಂಭವಾದುದರಿಂದ ಸ್ಥಳೀಯ ಕುಶಲಕರ್ಮಿಗಳಾದ, ಬಡಗಿಗಳು, ಶಿಲ್ಪಕಾರರು, ಉತ್ಪಾದಕರಿಗೆ ಅವಕಾಶ ದೊರೆಯುತ್ತದೆ. ಶೇ 27 ರಷ್ಟು ಅವಕಾಶ ನೀಡುವುದಾಗಿ ಹೇಳಿದ್ದಾರೆ. ಅದನ್ನು ಹೆಚ್ಚಿಗೆ ಮಾಡುವಂತೆ ಮನವಿ ಮಾಡಲಾಗಿದೆ. ಇನ್ನಷ್ಟು ಮಳಿಗೆಗಳನ್ನು ತೆಗೆಯಬೇಕು. ಒಂದು ಮಳಿಗೆಯಲ್ಲಿ ಒಂದು ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆಯುತ್ತದೆ. ಬೆಂಗಳೂರಿಗೆ ಆ ಸಾಮರ್ಥ್ಯವಿದೆ. ಬೆಂಗಳೂರು ದಕ್ಷಿಣದಲ್ಲಿ ಮಳಿಗೆ ತೆರೆಯಲು ತಿಳಿಸಲಾಗಿದೆ ಎಂದರು. ಬೆಂಗಳೂರಿನಲ್ಲಿಯೇ ಮೊದಲ ಮಳಿಗೆ ಪ್ರಾರಂಭಿಸಬೇಕೆಂಬ ಉದ್ದೇಶ ಐಕಿಯಾ ಸಂಸ್ಥೆಗೆ ಇತ್ತು. ಆದರೆ ಸಹಕಾರ ದೊರೆಯಲಿಲ್ಲ. ನಂತರ ಬಹಳ ಕಷ್ಟಪಟ್ಟು ಸ್ಥಳ ಪಡೆದಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮಧ್ಯಮವರ್ಗದವರ ಕನಸು ನನಸಾಗಿಸಲು ಸಹಕಾರಿ
ಐಕಿಯಾದಲ್ಲಿ ಉತ್ತಮ ಗುಣಮಟ್ಟದ, ಬಾಳಿಕೆ ಬರುವ ಹಾಗೂ ಕೈಗೆಟುಕುವ ಬೆಲೆಯ ಪೀಠೋಪಕರಣಗಳಿವೆ. ಸಾಮಾನ್ಯ ಜನರಿಗೆ, ಮಧ್ಯಮವರ್ಗದವರ ಕನಸು ನನಸಾಗಿಸಲು ಇದು ಸಹಕಾರಿಯಾಗಿದೆ. ಉದ್ಯಮ ಬೆಳೆಯಬೇಕು ಹಾಗೂ ಉದ್ಯೋಗಾವಕಾಶಗಳು ಹೆಚ್ಚಬೇಕು ಎಂಬ ಕಾರಣಕ್ಕಾಗಿ ನಾವು ಇಂತಹ ಉದ್ಯಮಗಳಿಗೆ ಪ್ರೋತ್ಸಾಹ ನೀಡಲೇಬೇಕು ಎಂದರು.
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಸ್ವೀಡನ್ ರಾಯಭಾರಿ ಕ್ಲಾಸ್ ಮೊಲಿನ್, ಐಕಿಯಾ ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂಸನ್ ಪುಲ್ವೇಲರ್, ಐಕಿಯಾ ಕರ್ನಾಟಕದ ಮಾರುಕಟ್ಟೆ ವ್ಯವಸ್ಥಾಪಕರಾದ ಆಂಜೆ ಹಿಮ್, ಮೊದಲಾದವರು ಉಪಸ್ಥಿತರಿದ್ದರು…
“ಡಿಕೆಶಿ ಮಾತಾಡಲು ಅವಕಾಶ ಕೊಟ್ಟಿಲ್ಲ” – ಶಿಸ್ತು ಸಮಿತಿ ನೋಟಿಸ್ಗೆ ಲಕ್ಷ್ಮೀನಾರಾಯಣ ಟೀಕಾಪ್ರಹಾರ
ರಾಜ್ಯದಲ್ಲಿ ಮಳೆ ಆರ್ಭಟ: ನಾಳೆ ಸಭೆ ಕರೆದ ಮುಖ್ಯಮಂತ್ರಿ ಬೊಮ್ಮಾಯಿ
“ಕೂಡಲ ಸಂಗಮವು ಜನಾಕರ್ಷಣೆಯ ತಾಣವಾಗಬೇಕು” – ಸಿಎಂ ಬೊಮ್ಮಾಯಿ
45.56 ಕೋಟಿ ರೂ. ವೆಚ್ಚದಲ್ಲಿ ಕಿತ್ತೂರು ಅರಮನೆ, ಕೋಟೆ ಸಂರಕ್ಷಣೆ, ಜೀರ್ಣೋದ್ಧಾರ
ವಿದ್ಯುತ್ ಬಿಲ್ ಪಾವತಿಗೆ 6 ತಿಂಗಳ ಕಾಲಾವಕಾಶ ಇಲ್ಲ : ಬೆಸ್ಕಾಂ ಸ್ಪಷ್ಟನೆ
‘ವೀರೇಂದ್ರ ಹೆಗ್ಗಡೆಯವರ ಅನುಭವ ಇಡೀ ದೇಶಕ್ಕೆ ಲಾಭ ತಂದುಕೊಡಲಿದೆ’