Published
5 months agoon
ಬೆಳಗಾವಿ (ಸುವರ್ಣ ವಿಧಾನಸೌಧ) ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ವಾರಣಾಸಿಯಲ್ಲಿ ಆಯೋಜಿತವಾಗಿದೆ. ಅದರಲ್ಲಿ ಭಾಗವಹಿಸಿ ಹಿಂದಿರುಗುವುದಾಗಿ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ತಿಳಿಸಿದರು.
ಅವರಿಂದು ವಿಶೇಷ ವಿಮಾನದಲ್ಲಿ ವಾರಣಾಸಿಗೆ ತೆರಳುವ ಮುನ್ನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು. ಕೇಂದ್ರ ಮತ್ತು ರಾಜ್ಯದ ಯೋಜನೆಗಳ ಬಗ್ಗೆ ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಚರ್ಚೆ ನಡೆಯಲಿದೆ. ಹಲವಾರು ಯೋಜನೆಗಳನ್ನ ಪರಿಣಾಮಕಾರಿಯಾಗಿ ಹೇಗೆ ತೆಗೆದುಕೊಂಡು ಹೋಗಬೇಕು ಎಂಬುವುದು ಚರ್ಚೆಯಾಗಲಿದೆ ಎಂದು ಹೇಳಿದರು.
ಈ ಸಭೆಯಲ್ಲಿ ಭಾಗವಹಿಸಿ ಕರ್ನಾಟಕದ ವಿಷಯಗಳನ್ನು ತಿಳಿಸಿದ ನಂತರ ನಾಳೆ ಸಂಜೆ ಬೆಳಗಾವಿಗೆ ಹಿಂದಿರುಗಿ ಅಧಿವೇಶನದಲ್ಲಿ ಪಾಲ್ಗೊಳ್ಳುವುದಾಗಿ ಅವರು ತಿಳಿಸಿದರು. ಅವರಿಂದು ಸುವರ್ಣಸೌಧದಲ್ಲಿ ಆಯೋಜಿತವಾಗಿರುವ ವಿಧಾನಮಂಡಲ ಕಲಾಪದಲ್ಲಿ ಭಾಗಿಯಾಗಿದ್ದರು.
ಬಿಡಿಎ ಬಡಾವಣೆ ಮನೆಗಳ ಸಕ್ರಮಕ್ಕೆ ನಿರ್ಧಾರ: ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್
ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಪ್ರತಾಪ್ ರೆಡ್ಡಿ ನೇಮಕ
ಡೆಂಘೀ ಪ್ರಕರಣಗಳು ಹೆಚ್ಚಾಗದಂತೆ ಮುಂಜಾಗ್ರತಾ ಕ್ರಮಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರ ಸೂಚನೆ
ಶಾಲಾ ಮಕ್ಕಳೊಂದಿಗೆ ಸಿಎಂ ಸಂವಾದ; ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದ ಬೊಮ್ಮಾಯಿ
ಎಂಬಿಎ ಪದವೀಧರೆಯಾಗಿದ್ರೂ ಕೆಲಸ ಸಿಗದೆ ಉಡುಪಿಯ ಸಹನಾ ಸಾವು; ಡಿಕೆಶಿ ಸಂತಾಪ
ರಾಷ್ಟ್ರಗೀತೆ ಹಾಡೋದನ್ನು ಮುತಾಲಿಕ್ ಹೇಳಿ ಕೊಡಬೇಕಾ? – ಜಮೀರ್