Connect with us


      
ದೇಶ

ಕಾಲ್ನಡಿಗೆಯಲ್ಲಿ ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಿದ ಸಿಎಂ ಪಟ್ನಾಯಕ್

UNI Kannada

Published

on

ಭುವನೇಶ್ವರ್: ಮಾರ್ಚ್ 24 (ಯು.ಎನ್.ಐ.) ಸಾಮಾನ್ಯವಾಗಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಆಡಂಬರ ಜೀವನದಿಂದ ಕೊಂಚ ದೂರ ಉಳಿಯುತ್ತಾರೆ. ಸ್ಥಳೀಯ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಸಮಯದಲ್ಲಿ ಅವರ ಸರಳತೆ ಸುದ್ದಿ ಮಾಡಿದೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಿಎಂ ನವೀನ್ ಪಟ್ನಾಯಕ್ ಮತದಾನದ ಹಕ್ಕು ಚಲಾಯಿಸಿದ್ದಾರೆ.

ವಾರ್ಡ್ 53ರ ಏರೋಡ್ರೋಮ್ ಪ್ರೌಢಶಾಲೆಗೆ ಗುರುವಾರ ಬೆಳಗ್ಗೆ 9.10ಕ್ಕೆ ಸಾಮಾನ್ಯ ಮತದಾರರಂತೆ ಕಾಲ್ನಡಿಗೆಯಲ್ಲಿ ಆಗಮಿಸಿ ಮತಗಟ್ಟೆ ಸಂಖ್ಯೆ 544ರಲ್ಲಿ ಮಹಾನಗರ ಪಾಲಿಕೆ ಮೇಯರ್ ಹಾಗೂ ಕಾರ್ಪೊರೇಟರ್ ಗಳ ಪರ ಮತಯಾಚಿಸಿದರು. ನವೀನ್ ನಿವಾಸ್‌ನಿಂದ ಕೇವಲ 300 ಮೀಟರ್‌ ಅಂತರದಲ್ಲಿ ಮತದಾನ ಕೇಂದ್ರವಿದ್ದ ಕಾರಣ, ಸಾಮಾನ್ಯ ಭದ್ರತಾ ಪಡೆಗಳೊಂದಿಗೆ ಕಾಲ್ನಡಿಗೆಯಲ್ಲಿ ತೆರಳಿ ಸಿಎಂ ಪಟ್ನಾಯಕ್ ಮತ ಚಲಾಯಿಸಿದ್ದಾರೆ.

Share