Connect with us


      




ರಾಜಕೀಯ

ಮರಳಿ ಮನೆಗೆ ಬನ್ನಿ ಡಿಕೆಶಿ ಮುಕ್ತ ಆಹ್ವಾನ   

UNI Kannada

Published

on

ಬೆಂಗಳೂರು  ನ 9 (ಯುಎನ್ಐ) ಪಕ್ಷದ  ತತ್ವ ಮತ್ತು ಸಿದ್ಧಾಂತ ಒಪ್ಪಿ  ಬರುವವರಿಗೆ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ.  ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಬೇರೆ  ಬೇರೆ ಕಾರಣಗಳಿಗಾಗಿ ಹಿಂದೆ ಪಕ್ಷ ತೊರೆದು ಹೋದವರು ಮರಳಿ ಮತ್ತೆ ಮನೆಗೆ ಬರಬಹುದು ಎಂದು ಮುಕ್ತಾ ಆಹ್ವಾನ  ನೀಡಿದ್ದಾರೆ.

ಬಿಜೆಪಿಯಲ್ಲಿ ಸಚಿವ ಸ್ಥಾನದಿಂದ  ಅವಕಾಶ ವಂಚಿತರಾಗಿರುವ ಮಾಜಿ   ಸಚಿವ ಸಿ. ಪಿ . ಯೋಗೇಶ್ವರ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ರಾಜಕೀಯ ವದಂತಿಗಳ ನಡುವೆಯೇ, ಶಿವಕುಮಾರ್ ಈ ರೀತಿ ಪಕ್ಷಕ್ಕೆ ಮರಳಿ ಬನ್ನಿ  ಎಂದು ಆಹ್ವಾನ ನೀಡಿರುವುದು ಹಲವರ ಕಣ್ಣು ಹುಬ್ಬೇರುವಂತೆ ಮಾಡಿದೆ.

ಈ ನಡುವೆ  ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಹೋಗುವುದಿಲ್ಲ, ಬೆರೆ ಪಕ್ಷ  ಸೇರುವುದಿಲ್ಲ ಎಂದು ಯೋಗೇಶ್ವರ್ ಹೇಳಿದ್ದರೂ  ಈ ಸನ್ನಿವೇಶದಲ್ಲಿ  ಶಿವಕುಮಾರ್ ಹೇಳಿಕೆ, ಹಲವು ವ್ಯಾಖ್ಯಾನಗಳಿಗೆ ದಾರಿಮಾಡಿಕೊಟ್ಟಿದೆ. ರಾಜಕೀಯದಲ್ಲಿ  ಯಾರು ಶಾಶ್ವತ ಶತ್ರಗಳಲ್ಲ  ಹಾಗೂ ಶಾಸ್ವತ  ಮಿತ್ರರಲ್ಲ. ಗಾಳಿ ಬಂದಾಗ ತೂರಿಕೊ ಳ್ಳುವುದು ರಾಜಕಾರಣಿಗಳ ಹುಟ್ಟು ಗುಣ ಹೀಗಾಗಿ ಯಾರು,  ಯಾವ ಸಮಯದಲ್ಲಿ ಬೇಕಾದರೂ,  ಯಾರೊಂದಿಗೆ ಬೇಕಾದರೂ ಕೈಜೋಡಿಸಬಹುದು.

Share