Connect with us


      
ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್: ವೇಟ್‌ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದ ಲವ್ ಪ್ರೀತ್ : ಒಟ್ಟು 14 ಪದಕ!

Iranna Anchatageri

Published

on

ಬರ್ಮಿಂಗ್ಹ್ಯಾಮ್ : ಆಗಸ್ಟ್ 03 (ಯು.ಎನ್.ಐ.) 2022ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. 109 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಲವ್‌ಪ್ರೀತ್ ಸಿಂಗ್ ಕಂಚಿನ ಪದಕ ಗೆದ್ದಿದ್ದಾರೆ. ಸ್ನಾಚ್ ಸುತ್ತಿನಲ್ಲಿ ಲವ್ ಪ್ರೀತ್ 163 ಕೆಜಿ ಎತ್ತಿದರು. ಇದೇ ವೇಳೆ ಕ್ಲೀನ್ ಅಂಡ್ ಜರ್ಕ್ ನ ಮೊದಲ ಪ್ರಯತ್ನದಲ್ಲಿ 192 ಕೆಜಿ ಎತ್ತುವ ಮೂಲಕ ಪಂದ್ಯದಲ್ಲಿ ಒಟ್ಟು 355 ಕೆಜಿ ಬಾರ ಎತ್ತಿ ಹೊಸ ರಾಷ್ಟ್ರೀಯ ದಾಖಲೆ ಬರೆದರು.


ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಈವರೆಗೆ ಭಾರತ ಒಟ್ಟು 14 ಪದಕಗಳನ್ನು ಗೆದ್ದಿದೆ. ಇದರಲ್ಲಿ ಐದು ಚಿನ್ನ, ಐದು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳು ಸೇರಿವೆ. ಪದಕ ಪಟ್ಟಿಯಲ್ಲಿ ಭಾರತ ಆರನೇ ಸ್ಥಾನದಲ್ಲಿದೆ.

ಭಾರತದ ಪದಕ ವಿಜೇತರು

5 ಚಿನ್ನ: ಮೀರಾಬಾಯಿ ಚಾನು, ಜೆರೆಮಿ ಲಾಲ್ರಿನ್ನುಂಗಾ, ಅಂಚಿತಾ ಶೆಯುಲಿ, ಮಹಿಳೆಯರ ಲಾನ್ ಬಾಲ್ ತಂಡ, ಟೇಬಲ್ ಟೆನಿಸ್ ಪುರುಷರ ತಂಡ

5 ಬೆಳ್ಳಿ : ಸಂಕೇತ್ ಸರ್ಗರಿ, ಬಿಂದಿಯಾರಾಣಿ ದೇವಿ, ಸುಶೀಲಾ ದೇವಿ, ವಿಕಾಸ್ ಠಾಕೂರ್, ಭಾರತೀಯ ಬ್ಯಾಡ್ಮಿಂಟನ್ ತಂಡ

4 ಕಂಚು : ಗುರುರಾಜ್ ಪೂಜಾರಿ,  ವಿಜಯ್ ಕುಮಾರ್ ಯಾದವ್, ಹರ್ಜಿಂದರ್ ಕೌರ್, ಲವ್ಪ್ರೀತ್ ಸಿಂಗ್

Continue Reading
Click to comment

Leave a Reply

Your email address will not be published.

Share