Connect with us


      




ಕರ್ನಾಟಕ

ಅಂಗವೈಕಲ್ಯದ ನೆಪ ಮತಹಾಕಿಸಲು ಓಲೈಕೆ: ಬಿಜೆಪಿಯಿಂದ ದೂರು

Bindushree Hosuru

Published

on

ಬೆಂಗಳೂರು: ಡಿ. 09 (ಯು.ಎನ್.ಐ) ಅಂಗವೈಕಲ್ಯದ ನೆಪದಲ್ಲಿ ವಾಮಮಾರ್ಗದ ಮೂಲಕ ಮತಹಾಕಿಸುತ್ತಿದ್ದಾರೆ. ಇದಕ್ಕೆ ತರಬೇತಿಯೂ ನೀಡಲಾಗುತ್ತಿದೆ. ಹೀಗೆ ಅನಕ್ಷರಸ್ಥತೆಯ ನೆಪ, ವಿದ್ಯೆಯಿಲ್ಲ, ಬುದ್ಧಿಯಿಲ್ಲ, ಕೈಕಾಲು ನೆಟ್ಟಗಿಲ್ಲ ಸೇರಿದಂತೆ ಹೊಸ-ಹೊಸ ವಾಮಮಾರ್ಗಗಳನ್ನು ಕಾಂಗ್ರೆಸ್ ಅನುಸರಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಅಮಾಯಕರಂತೆ ನಟಿಸುವವರಿಂದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತ ಹಾಕಿಸಲಾಗುತ್ತಿದೆಯೆಂದು ರಾಜ್ಯ ಬಿಜೆಪಿ ಬೆಂಗಳೂರಿನಲ್ಲಿ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದೆ.

ಬಿಜಾಪುರ, ಬಾಗಲಕೋಟೆ ನಿಜವಾದ ಮತದಾರನ ಪರವಾಗಿ ಅವನಂತೆ ಹೋಲುವ ಬೇರೆ ನಕಲಿ ಜನರಿಂದ ಮತ ಹಾಕಿಸುವ ಸಾಧ್ಯತೆಯಿದೆ. ಮತಪತ್ರದ ಮೇಲೆ ತನಗೆ ಮತ ಹಾಕಿದ್ದರ ಬಗ್ಗೆ ಸಂಕೇತ ಚಿಹ್ನೆ ಹಾಕಲಿಕ್ಕೆ ಹೇಳುವುದು. ತಮಗೆ ಮತ ಹಾಕದೆ ಇರುವ ಮತದಾರರನ್ನು ಗುರುತಿಸಿ, ಅಂತಹವರು ಸಮಯಕ್ಕೆ ಸರಿಯಾಗಿ ಬಂದು ಮತ ಹಾಕಲು ಸಾಧ್ಯವಾಗದಂತೆ ಮಾಡುವುದು, ಮಹಿಳಾ ಮತದಾರರೊಟ್ಟಿಗೆ ಅವರಿಗೆ ತಿಳಿಯುವುದಿಲ್ಲ ಎಂಬ ನೆಪವೊಡ್ಡಿ ಅವರ ಗಂಡ ಮತ ಕೇಂದ್ರದೊಳಗೆ ಹೋಗುವ ಸಾಧ್ಯತೆ ಇದೆ ಎಂದು ಬಿಜೆಪಿ ದೂರಿದೆ.

ಬೇರೆಬೇರೆ ವಾಮಮಾರ್ಗಗಳ ಮೂಲಕ ಸುಮಾರು 900ಕ್ಕೂ ಹೆಚ್ಚು ಮತಗಳನ್ನು ಹಾಕಿಸುವ ಪ್ರಯತ್ನ ಮಡುತ್ತಿದ್ದಾರೆಂದು ಖಚಿತವಾಗಿ ತಿಳಿದು ಬಂದಿದೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್​​ನ​​ ಸುನೀಲ್​​ಗೌಡ ಎಂಬಾತ ಈ ಬಗ್ಗೆ ತರಬೇತಿ ಕೊಡುತ್ತಿರುವ ಮಾಹಿತಿ ಲಭ್ಯವಾಗಿದೆ. ಅನಕ್ಷರಸ್ಥರಂತೆ ನಟಿಸಿ ನಮಗೆ ವಿದ್ಯೆಯಿಲ್ಲ. ಹಾಗಾಗಿ ನಮಗೆ ಮತ ಹಾಕಲು ಸಹಾಯಕರನ್ನು ಕಳುಹಿಸಿ ಎಂದು ಕೇಳುವುದು, ಅವರ ಜೊತೆಗೆ ಒಳಗೆ ಹೋಗಿ ಅಂಥವರಿಂದ ತಮಗೆ ಬೇಕಾದ ಅಭ್ಯರ್ಥಿಗೆ ಮತ ಹಾಕಿಸುವುದು, ಅಂಗವಿಕಲರು, ಇವರಿಗೆ ಓಡಾಡಲು ಆಗುವುದಿಲ್ಲ, ಕೈಗಳು ನಡುಗುತ್ತವೆ, ಮತ ಹಾಕಲು ಸಾಧ್ಯವಿಲ್ಲ ಹಾಗಾಗಿ ಇವರಿಗೆ ಮತ ಹಾಕಲು ಸಹಾಯಕರನ್ನು ಕೊಡಬೇಕು ಎಂದು ಹೇಳಿ ಅಂತಹವರಿಂದ ತಮ್ಮ ಅಭ್ಯರ್ಥಿಗೆ ಮತ ಹಾಕಿಸುತ್ತಿದ್ದಾರೆ. ಈ ಕುರಿತು ಮಾಹಿತಿಗಳು ಬರುತ್ತಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Share