Connect with us


      




ನ್ಯಾಯಾಲಯ

ಜ್ಞಾನವಾಪಿ ಮಸೀದಿ ; ಮೇ ೧೭ರೊಳಗೆ ಸಮೀಕ್ಷೆ ಪೂರ್ಣಗೊಳಿಸಿ: ನ್ಯಾಯಾಲಯ

Kumara Raitha

Published

on

ವಾರಣಾಸಿ: ಮೇ ೧೨ (ಯು.ಎನ್.‌ಐ.) ಇಲ್ಲಿ ಕಾಶಿ ವಿಶ್ವನಾಥ ದೇಗುಲ ಸನಿಹದಲ್ಲಿರುವ ಜ್ಞಾನವಾಪಿ ಮಸೀದಿ ಒಳಗಿನ ಸಮೀಕ್ಷೆಯನ್ನು ಮೇ ೧೭ರೊಳಗೆ ಪೂರ್ಣಗೊಳಿಸಿ ಎಂದು ಯುಪಿ ನ್ಯಾಯಾಲಯ ಸೂಚನೆ ನೀಡಿದೆ.

ಜ್ಞಾನವಾಪಿ ಮಸೀದಿ ಒಳಗೆ ಸಮೀಕ್ಷೆ ನಡೆಸಲು ಆದೇಶ ನೀಡಲು ಕೋರಿ ಹಿಂದೂಪರ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದವು. ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯ ಶೀಘ್ರ ಸಮೀಕ್ಷೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಪ್ರಾಧಿಕಾರಗಳಿಗೆ ಸೂಚನೆ ನೀಡಿದೆ.

ಜ್ಞಾನವಾಪಿ ಮಸೀದಿಯ ಒಳಗಿನ ಸಮೀಕ್ಷೆಯು ಮುಂದುವರಿಯಲಿದ್ದು, ಮೇ ೧೭ರೊಳಗೆ ಸಮೀಕ್ಷೆ ಪೂರ್ಣಗೊಳಿಸಿ ವಾರಣಾಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಾಗಿದೆ. ಸಮೀಕ್ಷಾ ಸಮಿತಿಗೆ ಇಬ್ಬರು ವಕೀಲರನ್ನು ಸೇರ್ಪಡೆಗೊಳಿಸಲಾಗಿದೆ. ಕಳೆದ ಶುಕ್ರವಾರದಂದು ಸಮೀಕ್ಷೆ ಆರಂಭಗೊಂಡಿದ್ದರೂ ಮಸೀದಿಯೊಳಗೆ ವೀಡಿಯೋಗ್ರಫಿ ವಿವಾದದ ಕಾರಣ ಸಂಪೂರ್ಣವಾಗಿ ಪೂರ್ಣಗೊಂಡಿರಲಿಲ್ಲ. ಜ್ಞಾನವಾಪಿ ಮಸೀದಿಯ ಉಸ್ತುವಾರಿ ಸಮಿತಿ ಮತ್ತು ಅದರ ವಕೀಲರು ಮಸೀದಿಯೊಳಗೆ ಯಾವುದೇ ವೀಡಿಯೊಗ್ರಫಿಯನ್ನು ವಿರೋಧಿಸುವುದಾಗಿ ಹೇಳಿದ್ದರು.  ಅರ್ಜಿದಾರರ ಪರ ವಕೀಲರು ವಿಡಿಯೋಗ್ರಫಿ ಮಾಡಲು ನ್ಯಾಯಾಲಯದ ಅನುಮತಿ ಹೊಂದಲಾಗಿದೆ ಎಂದು ಹೇಳಿದ್ದಾರೆ.

ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ಪಶ್ಚಿಮ ಗೋಡೆಯ ಹಿಂಭಾಗದಲ್ಲಿರುವ ಹಿಂದೂ ದೇಗುಲದಲ್ಲಿ ವರ್ಷಪೂರ್ತಿ ಪ್ರಾರ್ಥನೆ ಸಲ್ಲಿಸಲು ಐದು ಹಿಂದೂ ಮಹಿಳೆಯರು ಸಲ್ಲಿಸಿದ ಅರ್ಜಿಗಳ ಮೇಲೆ ನ್ಯಾಯಾಲಯವು ಈ ವರ್ಷದ ಏಪ್ರಿಲ್‌ನಲ್ಲಿ ಪರಿಶೀಲನೆಗೆ ಆದೇಶಿಸಿತ್ತು. ಪ್ರಸ್ತುತ ಈ ತಾಣವನ್ನು ವರ್ಷಕ್ಕೊಮ್ಮೆ ಪ್ರಾರ್ಥನೆಗಾಗಿ ತೆರೆಯಲಾಗಿದೆ. ಮಹಿಳೆಯರು ಹಳೆಯ ದೇವಾಲಯದ ಸಂಕೀರ್ಣದಲ್ಲಿ  ಪ್ರಾರ್ಥಿಸಲು ಅನುಮತಿಯನ್ನು ಬಯಸಿದ್ದಾರೆ. ಈ ಹಿಂದೆ ಮೇ 10ರೊಳಗೆ ವರದಿ ಸಲ್ಲಿಸುವಂತೆ ಸ್ಥಳೀಯ ನ್ಯಾಯಾಲಯ ಅಧಿಕಾರಿಗಳಿಗೆ ಸೂಚಿಸಿತ್ತು.

Share