Connect with us


      
ಕರ್ನಾಟಕ

ದೇವದಾಸಿ ಕುಟುಂಬಗಳಿಗೆ ಸಮಗ್ರ ಕಾನೂನು ಜಾರಿಗೆ ಆಗ್ರಹ

UNI Kannada

Published

on

ದೇವದಾಸಿ ಕುಟುಂಬಗಳ ಸಾಂದರ್ಭಿಕ ಚಿತ್ರ

ಬೆಂಗಳೂರು: ಜನವರಿ 11(ಯು.ಎನ್.ಐ)ರಾಜ್ಯದಲ್ಲಿ ದೇವದಾಸಿ ಪದ್ಧತಿ ಇನ್ನೂ ಜೀವಂತವಾಗಿದ್ದು , ಈ ಶೋಷಣೆಯನ್ನು ತಡೆಯಲು ಸರಕಾರ ಕೂಡಲೇ ಗಮನಹರಿಸಬೇಕು , ತಾರತಮ್ಯ ಮತ್ತು ಬಹಿಷ್ಕಾರಕ್ಕೆ ಒಳಗಾಗುತ್ತಿರುವ ಕುಟುಂಬಗಳು ಮತ್ತು ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಮಗ್ರ ಕಾನೂನನ್ನು ಜಾರಿಗೊಳಿಸಬೇಕೆಂಬ ಆಗ್ರಹ ಕೇಳಿಬಂದಿತು.

ನಗರದ ಖಾಸಗಿ ಹೊಟೇಲ್‌ವೊಂದರಲ್ಲಿ ದೇವದಾಸಿ ತಾಯಂದಿರ ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿ ಮತ್ತು ಉದ್ದೇಶಿತ ಕರ್ನಾಟಕ ದೇವದಾಸಿ ಪದ್ಧತಿ ( ತಡೆ , ನಿಷೇಧ , ಪರಿಹಾರ ಮತ್ತು ಮರ್ನವಸತಿ ) ಮಸೂದೆ ಕುರಿತು ಚರ್ಚಿಸಲು ರಾಜ್ಯ ಮಟ್ಟದ ಸಮಾಲೋಚನೆ ಸಭೆ ನಡೆಯಿತು.

ಈಗ ಅಸ್ತಿತ್ವದಲ್ಲಿರುವ ಕರ್ನಾಟಕ ದೇವದಾಸಿ ( ಸಮರ್ಪಣಾ ನಿಷೇಧ ಕಾಯಿದೆ 1982 ಅನ್ನು ಮನರ್ಮಶೆ್ರ ಮಾಡಿ ಪರಿಣಾಮಕಾರಿಯಾಗಿ ದೇವದಾಸಿ ಸಮರ್ಪಣೆ ತಡೆಗಟ್ಟಲು ರಕ್ಷಣೆ , ನಿಷೇಧ , ಪರಿಹಾರ ಮತ್ತು ಪುನರ್ವಸತಿ ಕಾಯಿದೆ , ಪ್ರಕ್ರಿಯೆಗಳಿಗಾಗಿ ಸರ್ಕಾರವನ್ನು ಒತ್ತಾಯಿಸಲು ಉತ್ತರದ ಕರ್ನಾಟಕದ ಜಿಲ್ಲೆಗಳಿಂದ ನಿಷೇಧಿತ ದೇವದಾಸಿ ಪದ್ಧತಿಯಿಂದ ಪೀಡಿತರಾದ ಮಕ್ಕಳು ಮತ್ತು ಮಹಿಳೆಯರ ಗುಂಪು ಹೀಗೆ ಹಲವು ಬಾರಿ ಸಭೆ ನಡೆಸಿ ಸಮಾಲೋಚಿಸುತ್ತಲೇಯಿದೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ( ಕೆ.ಎಸ್.ಎಲ್.ಎಸ್.ಎ ) ಮತ್ತು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಸಹಯೋಗದೊಂಬಿಗೆ ಗುಡ್ / GOOD – ದೇವದಾಸಿ ಪದ್ಧತಿಯಿಂದ ಹೊರಬರಲು ಕಿಶೋರಿಯರ ಕಾರ್ಯಕ್ರಮ, ಚಿಲ್ಡನ್ ಆಫ್ ಇಂಡಿಯಾ ಫೌಂಡೇಶನ್, ಸಬಿ ಟ್ರಸ್ಟ್, ಸಿ.ಆರ್.ಟಿ ಟೆಂಡೆಸ್ ಹೋಮ್ಸ್ – ಎನ್‌ಎಲ್‌ ಮತ್ತಿತರ ಸಂಸ್ಥೆಗಳ ಒಡಗೂಡಿ ಈ ಸಭೆಯನ್ನು ಸಹ ಆಯೋಜಿಸಿವೆ. ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ ಜಿಲ್ಲೆಗಳಲ್ಲಿ 2018 ರಿಂದ ಕಾರ್ಯನಿರ್ವಹಿಸುತ್ತಿರುವ ಗುಡ್ ಯೋಜನೆಯು ದೇವದಾಸಿ ಪದ್ಧತಿಯಿಂದ ಪೀಡಿತರಾದ 6000 ಕ್ಕೂ ಹೆಚ್ಚು ಕುಟುಂಬಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಈ ಕಾರ್ಯಕ್ರಮವು ನಿಷೇಧಿತ ದೇವದಾಸಿಯರಾಗಿ ಯಾವುದೇ ಮಕ್ಕಳು ಸಮರ್ಪಣೆಯಾಗದಂತೆ ಮತ್ತು ಈ ಕುಟುಂಬಗಳಲ್ಲಿನ ಮಕ್ಕಳು ಯಾವುದೇ ರೀತಿಯ ಲೈಂಗಿಕ ಶೋಷಣೆಗೆ ಗುರಿಯಾಗದಂತೆ ತಡೆಗಟ್ಟುವ ಗುರಿಯನ್ನು ಹೊಂದಿದೆ . ಗುಡ್ / GOOD ಯೋಜನೆಯು ಕಿಶೋಧಿ ಗುಂಪುಗಳನ್ನು ಸಂಘಟಿಸಿದೆ. ಇದು ಹುಡುಗಿಯರಿಗೆ ಜೊತೆಯಾಗಲು ಮತ್ತು ತಮ್ಮ ಹಕ್ಕುಗಳನ್ನು ಕುರಿತು ಸಮಾಲೋಚಿಸಲು ಮತ್ತು ಜೀವನ ಕೌಶಲ್ಯಗಳು ಮತ್ತು ಶಿಕ್ಷಣದ ಪ್ರಾಮುಖ್ಯತೆಯನ್ನು ಕುರಿತು ಅರಿಯಲು ಹಾಗೂ ಜೀವನದಲ್ಲಿ ಧನಾತ್ಮಕ ಮಾದರಿಗಳ ಬಗ್ಗೆ ಕೇಂದ್ರೀಕರಿಸಲು ವೇದಿಕೆಯನ್ನು ಒದಗಿಸುತ್ತಿದೆ.

ದೇವದಾಸಿ ಪದ್ಧತಿ ಇನ್ನೂ ಜೀವಂತವಾಗಿದ್ದು , ಈ ಶೋಷಣೆಯನ್ನು ತಡೆಯಲು ಸರಕಾರ ಕೂಡಲೇ ಗಮನಹರಿಸಬೇಕು , ತಾರತಮ್ಯ ಮತ್ತು ಬಹಿಷ್ಕಾರಕ್ಕೆ ಒಳಗಾಗುತ್ತಿರುವ ಕುಟುಂಬಗಳು ಮತ್ತು ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸರ್ಕಾರ ರಾಜ್ಯಮಟ್ಟದ ಸಮಾಲೋಚನೆ ನಡೆಸಬೇಕು ಎಂದು ಸಭೆಯಲ್ಲಿ ಹಲವರು ಒತ್ತಾಯಿಸಿದರು .

ಕೊಪ್ಪಳದ ಕಿಶೋರಿ ನಾಯಕಿಯೊರೊಬ್ಬರು ಮಾತನಾಡಿ, “ಕೆಲವು ತಲೆಮಾರುಗಳಿಂದ ದೇವದಾಸಿ ಪದ್ಧತಿಯಲ್ಲಿ ಬಿದ್ದಿರುವ ಹೆಣ್ಣು ಮಗುವಾದ ನಾನು ಅದನ್ನು ವಿರೋಧಿಸಿ ವಿದ್ಯಾಭ್ಯಾಸಕ್ಕೆ ಅವಕಾಶಗಳನ್ನು ಪಡೆದುಕೊಂಡಿದ್ದೇನೆ ‘ ಎಂದು ಸಂಕಟವನ್ನು ತೋಡಿಕೊಂಡು,ಎಲ್ಲೆಡೆ ಯಾವುದೇ ಸೇವೆ ಅಥವಾ ಪ್ರವೇಶದ ಅರ್ಜಿಗಳಲ್ಲಿ ತಂದೆಯ ಹೆಸರನ್ನು ಭರ್ತಿ ಮಾಡಲೇಬೇಕೆಂದು ಒತ್ತಾಯಿಸುತ್ತಾರೆ . ಇದು ತೀರಾ ಮುಜುಗರ ಉಂಟು ಮಾಡುವ ಪರಿಸ್ಥಿತಿಯಾಗಿದ್ದು ಇದರಿಂದ ಯಾವುದೇ ಸೌಲಭ್ಯ ಪಡೆಯಲು ಅತ್ಯಂತ ಅನುಕೂಲಕರ ಸ್ಥಿತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸರಕಾರ ನಡೆಸಿದ ದೇವದಾಸಿ ಸಮೀಕ್ಷೆಯಲ್ಲಿ ಹೆಸರು ಇಲ್ಲದೇ ಇರುವುದರಿಂದ ಪಿಂಚಣಿ ಮಾಸಾಶನ ಸಿಗದೆ ಮಕ್ಕಳನ್ನು ನೋಡಿಕೊಳ್ಳಲು ಸಾರ್ವಜನಿಕ ಸ್ಥಳಗಳಲ್ಲಿ ಚಿಂದಿ ಅಯುವಂತಾಗಿದೆ ಎಂದು ದಾವಣಗೆರೆಯ ತಾಯಿಯೊಬ್ಬರು ಅಳಲು ತೋಡಿಕೊಂಡರು .

ಕರ್ನಾಟಕದ ಒಂಬತ್ತು ಜಿಲ್ಲೆಗಳಿಂದ ಬೆಳಗಾವಿ , ಬಾಗಲಕೋಟೆ , ವಿಜಯಪುರ , ರಾಯಚೂರು , ಕೊಪ್ಪಳ , ಬಳ್ಳಾರಿ , ವಿಜಯಪುರ , ದಾವಣಗೆರೆ ಮತ್ತು ವಿಜಯನಗರ ಬಂದಿದ್ದ ದೇವದಾಸಿಯರು ಮತ್ತು ಅವರ ಮಕ್ಕಳು ಇದೇ ರೀತಿಯ ಅನೇಕ ಕಷ್ಟಕರ ಮತ್ತು ದುಃಖದ ಕಥೆಗಳನ್ನು ಹಂಚಿಕೊಂಡು ತಮ್ಮ ಮಕ್ಕಳ ಹಕ್ಕುಗಳನ್ನು ದಕ್ಷಿಸಲು ಕೆಲವು ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕೆಂದೂ ಹಾಗೂ ವಸತಿ , ಪಿಂಚಣಿ ಮತ್ತು ಗುರುತಿನ ಪ್ರಮಾಣಪತ್ರಗಳನ್ನು ಒದಗಿಸಲು ಸಮಾಜ ಕಲ್ಯಾಣ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ , ಪೊಲೀಸ್ , ಆರ್‌ಡಿಪಿಆ‌ , ಶಿಕ್ಷಣ ಮತ್ತು ಕಂದಾಯ ಇಲಾಖೆಗಳು ದೀರ್ಘಾವಧಿಯಲ್ಲಿ ಪರಿಹಾರೋಪಾಯಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಈ ಹಿನ್ನೆಲೆಯಲ್ಲಿ ಅಸ್ತಿತ್ವದಲ್ಲಿರುವ ಕರ್ನಾಟಕ ದೇವದಾಸಿ ( ಸಮರ್ಪಣೆ ನಿಷೇಧ ) ಕಾಯಿದೆ 1982 ಅನ್ನು ಪುನಾರಚಿಸಬೇಕು . ಮತ್ತು ದೇವದಾಸಿ ಪದ್ಧತಿಗೆ ಮಕ್ಕಳು ಮತ್ತು ಯುವತಿಯರನ್ನು ದೂಡುವುದನ್ನ ತಡೆಗಟ್ಟಲು , ರಕ್ತಿಸಲು , ನಿಷೇಧಿಸಲು , ಪುನರ್ವಸತಿ ಮತ್ತು ಪರಿಹಾರ ನೀಡಲು ಸಮಗ್ರ ಕಾನೂನನ್ನು ತರಬೇಕು ಎಂದು ದೇವದಾಸಿ ಕುಟುಂಬಗಳ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು.

ಈ ಹೇಯ ಪದ್ಧತಿಯನ್ನು ವ್ಯವಸ್ಥಿತವಾಗಿ ಕೊನೆಗಾಣಿಸಲು ಸರಕಾರ ನಿಗದಿತ ಹಣಕಾಸಿನೊಂದಿಗೆ ಬಜೆಟ್ ಪ್ರತ್ಯೇಕ ದೇವದಾಸಿ ಪುನರ್ವಸತಿ ಮಂಡಳಿಯನ್ನು ರಚಿಸಬೇಕು ಎಂದು ಕಿಶೋರಿಗಳ ಗುಂಪು ಕಾರ್ಯಕ್ರಮದಲ್ಲಿ ಒತ್ತಾಯಿಸಿತು. ದೇವದಾಸಿ ಕುಟುಂಬಗಳು ಮತ್ತು ಮಕ್ಕಳ ಸಮಸ್ಯೆಗಳು ಮತ್ತು ಬೇಡಿಕೆಗಳಿಗೆ ಪ್ರತಿಕ್ರಿಯಿಸಿದ ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಪ್ರೊ . ಎಸ್ . ಜಾಫೆಟ್, 1982 ಕ್ಕಿಂತ ಮೊದಲು ತಮ್ಮೊಂದಿಗೆ ತಂಡವೊಂದು ದೇವದಾಸಿ ಪದ್ಧತಿಯ ಅಸ್ತಿತ್ವದ ಬಗ್ಗೆ ಅಧ್ಯಯನ ನಡೆಸಿ ಸರ್ಕಾರದ ಮೇಲೆ ಪ್ರಭಾವ ಬೀರಿದ ಪರಿಣಾಮ ದೇವದಾಸಿ ನಿಷೇಧ ಕಾಯಿದೆಯ ವಿಕಾಸವಾಯಿತು ಎಂದು ಹಂಚಿಕೊಂಡರು.

ಈಗ ಹಳೆಯ ಕಾಯಿದೆಯನ್ನು ಆದಷ್ಟು ಬೇಗ ಮರುಪರಿಶೀಲಿಸುವ ಸಮಯ ಬಂದಿದೆ. ಯಾವುದೇ ಹೊಸ ದೇವದಾಸಿಗಳನ್ನಾಗಿ ಸರರ್ಪಣೆ ಆಗದಂತೆ ಮತ್ತು ಮಕ್ಕಳು ಮತ್ತು ಕುಟುಂಬಗಳಿಗೆ ವಿಶೇಷ ವರ್ಗದ ಮಿಸಲಾತಿ ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸಬೇಕೆಂದರು . ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶ ಎಚ್‌.ಶಶಿಧರ ಸಭೆಯಲ್ಲಿ ಕಾಯ್ದೆ ಅನುಷ್ಠಾನದಲ್ಲಿನ ಲೋಪದೋಷಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಮಕ್ಕಳು ಮತ್ತು ಕುಟುಂಬಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ತಾಲ್ಲೂಕು , ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿರುವ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಬಹುದು. ಸಮುದಾಯಗಳ ಮನಸ್ಥಿತಿ ಬದಲಾವಣೆಗೆ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಮನವಿ ಪತ್ರ ಸಲ್ಲಿಸುವಂತೆ ಸಲಹೆ ನೀಡಿದರು . ಇಲ್ಲಿಂದ ಮುಂದೆ ಅಗತ್ಯವಿದ್ದಲ್ಲಿ ಸೂಕ್ತ ನಿರ್ದೇಶನ ಪಡೆಯಲು ಹೈಕೋರ್ಟ್ ಮೊರೆ ಹೋಗುವುದು ಅನಿವಾರ್ಯವಾದರೆ ಅದರತ್ತಲೂ ಹೆಜ್ಜೆ ಹಾಕಬೇಕೆಂದು ಸೂಚಿಸಿದರು.

ಕರ್ನಾಟಕ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕಿ ಇಂದಿರಾಸಭೆ ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ, ದೇವದಾಸಿಯರಿಗೆ ನೀಡುತ್ತಿರುವ ಪಿಂಚಣಿಯಲ್ಲಿರುವ ತೊಡಕುಗಳನ್ನು ಬಗೆಹರಿಸಲು ತಕ್ಷಣ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಸಲಹೆ ನೀಡುವುದಾಗಿ ಭರವಸೆ ನೀಡಿದರು . ದೇವದಾಸಿಯರ ಮರು ನಮೀಕ್ಷೆ ಪ್ರಕ್ರಿಯೆಗೆ ಚಾಲನೆ ನೀಡಲು ಸರ್ಕಾರ ಸಿದ್ಧವಾಗಿದೆ.ಸಂತ್ರಸ್ತ ಕುಟುಂಬಗಳು ಎತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಿಸಿದ ಎಲ್ಲರೊಂದಿಗೆ ದುಂಡು ಮೇಜಿನ ಸಭೆಗೆ ಶೀಘ್ರವಾಗಿ ಕರೆ ನೀಡುವುದಾಗಿ ಭರವಸೆ ನೀಡಿದರು.

Share