Connect with us


      




ದೇಶ

ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೇವಲ ಹುದ್ದೆಯಲ್ಲ, ನಂಬಿಕೆ ವ್ಯವಸ್ಥೆ: ರಾಹುಲ್ ಗಾಂಧಿ

Vanitha Jain

Published

on

ನವದೆಹಲಿ: ಸೆಪ್ಟೆಂಬರ್ 22 (ಯು.ಎನ್.ಐ.) ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಕೇವಲ ಹುದ್ದೆಯಲ್ಲ, ಅದೊಂದು ನಂಬಿಕೆಯ ವ್ಯವಸ್ಥೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಭಾರತದ ದೃಷ್ಟಿಕೋನವನ್ನು ಪ್ರತಿನಿಧಿಸುವಂತೆ ಸಲಹೆ ನೀಡಿದ್ದು, ಇದು ಹುದ್ದೆ ಮಾತ್ರವಲ್ಲ, ನಂಬಿಕೆ ವ್ಯವಸ್ಥೆ. ಇದು ಭಾರತದ ದೃಷ್ಟಿಕೋನವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು.

ಬಿಜೆಪಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ರಾಹುಲ್, “ನಾವು ಈ ದೇಶದ ಸಾಂಸ್ಥಿಕ ಚೌಕಟ್ಟನ್ನು ಹಿಡಿದಿಟ್ಟುಕೊಂಡಿರುವ ಯಂತ್ರದೊಂದಿಗೆ ಹೋರಾಡುತ್ತಿದ್ದೇವೆ. ಅದು ಅನಿಯಮಿತ ಹಣ ಮತ್ತು ಜನರನ್ನು ಖರೀದಿಸುವ, ಒತ್ತಡ ಹೇರುವ ಮತ್ತು ಬೆದರಿಕೆ ಹಾಕುವ ಸಾಮರ್ಥ್ಯವನ್ನು ಹೊಂದಿದೆ. ಅದರ ಫಲಿತಾಂಶ ಗೋವಾದಲ್ಲಿ ಏನಾಯಿತು ಎಂದು ನೀವು ನೋಡಿದ್ದೀರಿ ಎಂದು ಹೇಳಿದರು.

ನಡೆಯುತ್ತಿರುವ ‘ಭಾರತ್ ಜೋಡೋ ಯಾತ್ರೆ’ಯು “ಜನರು ಒಗ್ಗೂಡಬೇಕು ಎಂದು ಹೇಳುವ ಗುರಿಯನ್ನು ಹೊಂದಿದೆ” ಎಂದು ಹೇಳಿದರು.ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಚೇರಿಗಳು ಮತ್ತು ಇತರ ಆವರಣಗಳ ಮೇಲೆ ರಾಷ್ಟ್ರವ್ಯಾಪಿ ದಾಳಿ ಬಗ್ಗೆ ಮಾತನಾಡಿ, ಕೋಮುವಾದಎ ಲ್ಲಿಂದ ಬಂದರೂ ಅದನ್ನು ಎದುರಿಸಬೇಕು. ಕೋಮುವಾದದ ಬಗ್ಗೆ ಶೂನ್ಯ ಸಹಿಷ್ಣುತೆ ಇರಬೇಕು ಮತ್ತು ಅದರ ವಿರುದ್ಧ ಹೋರಾಡಬೇಕು ಎಂದು ಹೇಳಿದರು.

Share