Published
6 months agoon
By
Vanitha Jainಲಕ್ನೋ, ಜನವರಿ 01(ಯು.ಎನ್.ಐ) ಅರಾಜಕತೆ ಮತ್ತು ಭ್ರಷ್ಟಾಚಾರದ ಮೂಲವಾಗಿರುವ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು ದೇಶದ ಒಂದು ದೊಡ್ಡ ಸಮಸ್ಯೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಭದ್ರಕೋಟೆ ರಾಯ್ ಬರೇಲಿಯಲ್ಲಿ 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ ಆಡಳಿತಾರೂಢ ಬಿಜೆಪಿಯ ‘ಜನ ವಿಶ್ವಾಸ ಯಾತ್ರೆ’ಯ ಅಂಗವಾಗಿ ಏರ್ಪಡಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸಮಾಜವಾದಿ ಪಕ್ಷದ ವಿರುದ್ಧವೂ ವಾಗ್ದಾಳಿ ನಡೆಸಿ, ರಾಜ್ಯದ ಜನತೆಗೆ ಪಕ್ಷದ ಧ್ವಜವಿರುವ ವಾಹನದೊಳಗೆ ಒಬ್ಬ ಗೂಂಡಾ ಕುಳಿತಿದ್ದಾನೆ ಎಂದು ಗೊತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ರಾಯ್ಬರೇಲಿಯ ಕಾಂಗ್ರೆಸ್ಸಿನ ಜನಪ್ರತಿನಿಧಿಗಳು ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ರೀತಿಯಲ್ಲೇ ಬಿಜೆಪಿಯು ರಾಯ್ಬರೇಲಿಯಿಂದ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತೊಗೆಯಲಿದೆ. ಕಾಂಗ್ರೆಸ್ ದೇಶಕ್ಕೆ ಸಮಸ್ಯೆಯಾಗಿ ನಿಂತಿದೆ. ರಾಯಬರೇಲಿಯು ವಿದೇಶಿ ಆಡಳಿತವನ್ನು ಎಂದಿಗೂ ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಭಯೋತ್ಪಾದನೆ, ಅರಾಜಕತೆ ಮತ್ತು ಭ್ರಷ್ಟಾಚಾರದ ಮೂಲವಾಗಿರುವ ಕಾಂಗ್ರೆಸ್, ಜಾತಿವಾದ ಮತ್ತು ಭಾಷಾಭೇದವನ್ನು ಹರಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಎಸ್ಪಿ ಮತ್ತು ಬಹುಜನ ಸಮಾಜ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಆದಿತ್ಯನಾಥ್, ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳೂ ರಾಜ್ಯಕ್ಕೆ ಸಮಸ್ಯೆಯಾಗಿದೆ. ಇಂದು ಎಸ್ಪಿ ಧ್ವಜವಿರುವ ವಾಹನ ಎಂದರೆ ಯಾರೋ ಗೂಂಡಾಗಳು ಒಳಗೆ ಕುಳಿತಿದ್ದಾರೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ.
ನಮ್ಮ ಸರ್ಕಾರ ಜನರಿಗಾಗಿ ಕೆಲಸ ಮಾಡುತ್ತದೆ ಮತ್ತು ನಂಬಿಕೆಯನ್ನು ಗೌರವಿಸುತ್ತದೆ. ಕಾಂಗ್ರೆಸ್, ಎಸ್ಪಿ ಮತ್ತು ಬಿಎಸ್ಪಿ ಬಿಜೆಪಿಯ ರೀತಿಯಲ್ಲಿ ಕೆಲಸ ಮಾಡಬಹುದೇ? ರಾಮ ಮತ್ತು ಕೃಷ್ಣನನ್ನು ಕಾಲ್ಪನಿಕತೆ ಎಂದು ಹೇಳಿದವರು ಮಂದಿರವನ್ನು ಕಟ್ಟಬಹುದೇ? ಭಗವಾನ್ ರಾಮನ ಭಕ್ತರ ಮೇಲೆ ಗುಂಡು ಹಾರಿಸುವವರು ದೇವಾಲಯ ನಿರ್ಮಿಸಬಹುದೇ? ಎಂದು ಪ್ರಶ್ನಿಸಿದರು.
ಒಟ್ಟಿನಲ್ಲಿ ಆದಿತ್ಯನಾಥ್ ಮೂರು ವಿರೋಧ ಪಕ್ಷಗಳನ್ನು “ಭ್ರಷ್ಟಾಚಾರದ ಗುಹೆ” ಎಂದು ಕರೆದಿದ್ದಾರೆ.
‘ಕೈ’ ಹಿಡಿದ ಕೊತ್ತೂರು ಮಂಜುನಾಥ್ ಹಾಗೂ ಎಂ.ಸಿ.ಸುಧಾಕರ್
ಕೋರ್ಟ್ ಸೂಚನೆ ಬೆನ್ನಲ್ಲೇ “ಬಾಳಾಸಾಹೇಬರ ಹಿಂದುತ್ವಕ್ಕೆ ಜಯ” ಎಂದ ಏಕನಾಥ್ ಶಿಂಧೆ
ದ್ರೋಹಿಗಳು ಗೆಲ್ಲುವುದಿಲ್ಲ; ಶಿಂಧೆ ಬಣಕ್ಕೆ ಆದಿತ್ಯ ಠಾಕ್ರೆ ಟಾಂಗ್
ಏಕನಾಥ್ ಶಿಂಧೆ ಬಣಕ್ಕೆ ತಾತ್ಕಾಲಿಕ ರಿಲೀಫ್; ಮುಂದಿನ ವಿಚಾರಕ್ಕೆ ಜು.11ಕ್ಕೆ ಮುಂದೂಡಿದ ಸುಪ್ರೀಂಕೋರ್ಟ್
ರೆಬೆಲ್ ಸಚಿವರ ಖಾತೆ ಕಿತ್ತುಕೊಂಡ ಸಿಎಂ ಉದ್ಧವ್ ಠಾಕ್ರೆ
“ಇಡಿ ಸಮನ್ಸ್ ಗೆ ಸಂಜಯ್ ರಾವತ್ಗೆ ನನ್ನ ಶುಭಾಶಯಗಳು”: ಶಿಂಧೆ ಪುತ್ರನ ವ್ಯಂಗ್ಯ