Connect with us


      
ರಾಜಕೀಯ

ಕಾಂಗ್ರೆಸ್ ವಿರುದ್ಧ ಸಚಿವರ ಟೀಕಾಪ್ರಹಾರ

UNI Kannada

Published

on

BJP V/S CONGRESS
ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆಗೂ ಮುಂದಾಗಿದೆ.ಕಾಂಗ್ರೆಸದ ವಿರುದ್ಧ ಆಡಳಿತಾರೂಢ ಬಿಜೆಪಿ ಪಕ್ಷದ ಸಚಿವರು ಮುಗಿಬಿದ್ದು ಟೀಕಾಪ್ರಹಾರ ನಡೆಸಿದ್ದಾರೆ.ಇದು ರಾಜಕೀಯ ಕಚ್ಚಾಟಕ್ಕೆ ವೇದಿಕೆಯಾಗಿದೆ.

ಬೆಂಗಳೂರು: ಜನೆವರಿ.03 (ಯು.ಎನ್.ಐ) ರಾಮನಗರ ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಎದುರಲ್ಲೇ ಕಾಂಗ್ರೆಸ್ಸಿನ ಸಂಸದರಾದ ಡಿಕೆ ಸುರೇಶ್ ಮತ್ತು ವಿಧಾನಪರಿಷತ್ ಸದಸ್ಯರಾದ ಎಸ್. ರವಿ ಅವರು ಸಚಿವರಾದ ಡಾ.ಅಶ್ವತ್ಥನಾರಾಯಣ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಕ್ಕೆ
ಬಿಜೆಪಿ ಪಕ್ಷದ ಸಚಿವರು ಟೀಕಾಪ್ರಹಾರ ನಡೆಸಿದ್ದಾರೆ. ಕಾಂಗ್ರೆಸ್ ವಿರುದ್ಧ  ಪ್ರತಿಭಟನೆಗೂ ಮುಂದಾಗಿದ್ದಾರೆ.
ಮೈಕ್ ಕಸಿದು, ತಳ್ಳಾಟ ನಡೆಸಿ ಅಮಾನವೀಯವಾಗಿ ವರ್ತಿಸಿದ್ದಲ್ಲದೆ ಅಸಭ್ಯ ಹಾಗೂ ಗೂಂಡಾ ವರ್ತನೆ ತೋರಿದ್ದು ಖಂಡನೀಯ ಎಂದು ಸಚಿವ ಬಿ.ಸಿ.ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದರೆ, ಇತ್ತ ಸಚಿವ ಮುರುಗೇಶ್ ನಿರಾಣಿ, ತಾಯಿಯಂತೆ ಮಗಳು, ನೂಲಿನಂತೆ ಸೀರೆ ಎಂಬ ಗಾದೆ ಮಾತಿನಂತೆ, ಕಾಂಗ್ರೆಸ್ನಂತೆ ಅವರ ನಾಯಕರು ಇದ್ದಾರೆ ಎಂಬುದಕ್ಕೆ, ಇಂದು ರಾಮನಗರದಲ್ಲಿ ನಡೆದ ಘಟನೆಯೇ ಸಾಕ್ಷಿ. ಮುಖ್ಯಮಂತ್ರಿಗಳು ಇರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಗೆ ವರ್ತಿಸಬೇಕು ಎನ್ನುವ ಕನಿಷ್ಠ ಜ್ಞಾನವು ಕೂಡ ಡಿ. ಕೆ. ಸುರೇಶ್ ಅವರಿಗೆ ಇಲ್ಲವಾಗಿದೆ. ಇದು ಕಾಂಗ್ರೆಸ್ ಸಂಸ್ಕೃತಿಗೆ ಸಾಕ್ಷಿ ಎಂದಿದ್ದಾರೆ.

ಇನ್ನು ಕಂದಾಯ ಸಚಿವ ಆರ್.ಅಶೋಕ್,ಕಾಂಗ್ರೆಸ್ ತನ್ನ ಗೂಂಡಾ ಸಂಸ್ಕೃತಿಯನ್ನು ಮತ್ತೊಮ್ಮೆ ರಾಜ್ಯದಲ್ಲಿ ಅನಾವರಣಗೊಳಿಸಿದೆ. ಪ್ರಜಾಪ್ರಭುತ್ವಕ್ಕೆ ಕಾಂಗ್ರೆಸ್ ಮಾರಕ ಎಂದು ಪ್ರತಿಕ್ರಿಯಿಸಿದ್ದಾರೆ .ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಹ ಕಾಂಗ್ರೆಸ್ ಅನ್ನು ಟೀಕಿಸಿದ್ದಾರೆ.
ಮುಖ್ಯಮಂತ್ರಿಗಳು ಮತ್ತು ಸಚಿವರು ಭಾಗವಸಿದ್ದ ಕಾರ್ಯಕ್ರಮ ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ಸಂಬಂದಿಸಿದ್ದು. ಅಭಿವೃದ್ಧಿ ನಮ್ಮ ಸರಕಾರದ ಪ್ರಥಮ ಆದ್ಯತೆ, ಅದು ಕಾಂಗ್ರೆಸ್ ಸಂಸದ ಡಿ.ಕೆ ಸುರೇಶರಿಗೆ ಅಪಥ್ಯವಾದದ್ದು ಸಹಜ. ಅವರ “ರೌಡಿಸಂ ರಿಪಬ್ಲಿಕ್” ನಡೆಸುವ ಮನಸ್ಥಿತಿ ಖಂಡನೀಯ ಎಂದಿದ್ದಾರೆ.