Connect with us


      
ಕರ್ನಾಟಕ

ಕಾಂಗ್ರೆಸ್ #FreedomMarch: ಇಂದಿನ ಬೃಹತ್ ನಡಿಗೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಹೆಜ್ಜೆ!

Vanitha Jain

Published

on

ಬೆಂಗಳೂರು: ಆಗಸ್ಟ್ 15 (ಯು.ಎನ್.ಐ.) ಸ್ವತಂತ್ರ ಭಾರತದ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಕರ್ನಾಟಕ ಕಾಂಗ್ರೆಸ್ ವತಿಯಿಂದ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಸ್ವಾತಂತ್ರ್ಯ ನಡಿಗೆಗೆ ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಮಂದಿ ನೋಂದಾಯಿಸಿಕೊಂಡಿದ್ದಾರೆ.

ಆಗಸ್ಟ್‌ 15 ರಂದು ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನಲ್ಲಿ ನಡೆಯುವ ಸ್ವಾತಂತ್ರ್ಯ ನಡಿಗೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಜನರು ದೇಶಕ್ಕಾಗಿ ಹೆಜ್ಜೆ ಹಾಕಲಿದ್ದಾರೆ. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾಗಲಿದ್ದು, ನಂತರ ಕೆ.ಆರ್ ವೃತ್ತ, ಟೌನ್ ಹಾಲ್, ಮಿನರ್ವ ವೃತ್ತದ ಮೂಲಕ ಸಾಗಿ ನ್ಯಾಷನಲ್ ಕಾಲೇಜಿನ ವರೆಗೂ ಸಾಗಲಿದೆ.

Koo App

ಇಂದು ಬೆಂಗಳೂರಿನಲ್ಲಿ ನಾವೆಲ್ಲರೂ ಸೇರಿ ಹೊಸ ಇತಿಹಾಸ ಸೃಷ್ಟಿಸುತ್ತಿದ್ದೇವೆ. ನೀವೂ ಬನ್ನಿ. ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಈ ಮಹತ್ವದ ನಡಿಗೆಯಲ್ಲಿ ಭಾಗವಹಿಸಿ. ಒಂದಾಗಿ ಹೆಜ್ಜೆ ಹಾಕೋಣ. ಸ್ವಾತಂತ್ರ್ಯವನ್ನು ಸಂಭ್ರಮಿಸೋಣ. ಇಂದು ಮಧ್ಯಾಹ್ನ 2 ಗಂಟೆಗೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭ. #FreedomMarch

ಕರ್ನಾಟಕ ಕಾಂಗ್ರೆಸ್ (@inckarnataka) 15 Aug 2022

‘ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೊಂದು ಅತಿ ದೊಡ್ಡ ಯಾತ್ರೆಯಾಗಲಿದೆ. ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಹಾಗೂ ಸುಭದ್ರ ಭವಿಷ್ಯದ ಬುನಾದಿ ಹಾಕಿದ ಸ್ವಾತಂತ್ರ್ಯ ವೀರರನ್ನು ಗೌರವಿಸಲು ಇದೊಂದು ಪ್ರಮುಖ ವೇದಿಕೆಯಾಗಿದೆ’ ಎಂದು ಕಾಂಗ್ರೆಸ್ ಹೇಳಿದೆ.

‘ಐತಿಹಾಸಿಕ ನಡಿಗೆಯಲ್ಲಿ ನಮ್ಮೊಂದಿಗೆ ಕೈಜೋಡಿಸಿ, ಸ್ವಾತಂತ್ರ್ಯ ನಡಿಗೆಯ ಭಾಗವಾಗಿ. ಸ್ವಾತಂತ್ರ್ಯ ನಡಿಗೆಯಲ್ಲಿ ಭಾಗವಹಿಸಲು ನೋಂದಾಯಿಸಿಕೊಳ್ಳಿ. ಫ್ರೀಡಂ ಮಾರ್ಚ್‌ನಲ್ಲಿ ಭಾಗವಹಿಸುವವರ ಮನೆ ಬಾಗಿಲಿಗೆ ಅತ್ಯಾಕರ್ಷಕ ವೆಲ್ ಕಂ ಕಿಟ್‌ ಬರಲಿದೆ’ ಎಂದು ಪಕ್ಷ ಮನವಿ ಮಾಡಿತ್ತು.

Share