Connect with us


      
ರಾಜಕೀಯ

ಟೆರರಿಸ್ಟ್ ಗಳ ಹುಟ್ಟು ಹಾಕಿದ್ದೇ ಕಾಂಗ್ರೆಸ್: ಆರಗ ಜ್ಞಾನೇಂದ್ರ

Vanitha Jain

Published

on

ಬೆಂಗಳೂರು: ಸೆಪ್ಟೆಂಬರ್ 22 (ಯು.ಎನ್.ಐ.) ಪಿಎಫ್ ಐ ಹಾಗು ಎಸ್ ಡಿಪಿಐ ಮೇಲೆ ಎನ್‌ಐಎ ಹಾಗೂ ಪೊಲೀಸರು ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ್ದಾರೆ. ಏಕತೆ‌, ಸಮಗ್ರತೆ ಹಾಳು ಮಾಡೋ, ಜೀವಹಾನಿ ಮಾಡುವ ಸಂಘಟನೆಗಳು ಹಲವು ಕೃತ್ಯಗಳ ಹಿಂದೆ ಇದ್ದು, ಇದಕ್ಕೆ ಸಂಬಂಧಿಸಿದವರ ಬಂಧಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು

ಶಿವಮೊಗ್ಗ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಅವರು, ಶಿವಮೊಗ್ಗ ಪ್ರಕರಣದಲ್ಲಿ ಬಾಂಬ್ ತಯಾರು ಮಾಡಲಾಗಿತ್ತು. ಅದನ್ನು ಟ್ರಯಲ್ ಕೂಡ ಮಾಡಿದ್ದಾರೆ. ಅವರ ಬಂಧನದಿಂದ ರಕ್ತಹಾನಿ ಜೀವಹಾನಿ ತಡೆಗಟ್ಟಲಾಗಿದೆ ಎಂದು ಹೇಳಿದರು.

ಪಿಎಫ್ಐ ಕಾರ್ಯಕರ್ತರ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಂತಹ ಸಂದರ್ಭದಲ್ಲಿ ಪ್ರತಿಭಟನೆ ಮಾಡೋದು ಸರಿಯಲ್ಲ. ದೇಶದಲ್ಲಿ ಎಲ್ಲರೂ ಕಾನೂನು ಪಾಲಿಸಬೇಕು. ತಪ್ಪಿತಸ್ಥರು ಅಲ್ಪಸಂಖ್ಯಾತರಾ, ಅಲ್ವಾ ಅಂತ ಪೊಲೀಸರು ನೋಡಿ ಕೆಲಸ‌ ಮಾಡೋದಕ್ಕೆ ಆಗಲ್ಲ ಎಂದು ಹೇಳಿದರು.

ಮುಂದುವರೆದು ಟೆರರಿಸ್ಟ್ ಗಳನ್ನು ಹುಟ್ಟು ಹಾಕಿದ್ದು, ಟೆರರಿಸ್ಟ್‌ಗಳನ್ನು ತಪ್ಪಿಸಿಕೊಳ್ಳಲು ಅವಕಾಶ ಕೊಟ್ಟಿದ್ದೇ ಕಾಂಗ್ರೆಸ್. ಅವರು ದೇಶದ ದೃಷ್ಟಿಯಿಂದ ಯೋಚನೆ ಮಾಡಬೇಕು. ಸಂಘಟನೆ ಬ್ಯಾನ್ ಆದ್ರೆ ವ್ಯಕ್ತಿಗಳ ರಾಕ್ಷಸ ಮನೋಭಾವ ಬದಲಾಗೋದಿಲ್ಲ ಎಂದು ಹೇಳಿದರು.

Share