Connect with us


      




ದೇಶ

ಸ್ವತಃ ಕಾಂಗ್ರೆಸ್‍ನವರೇ ನವಜೋತ್ ಸಿಂಗ್ ಸಿಧುರನ್ನು ಗಂಭೀರವಾಗಿ ಪರಿಗಣಿಸಿಲ್ಲ: ರಾಘವ್ ಚಡ್ಡಾ ವಾಗ್ದಾಳಿ

Vanitha Jain

Published

on

ನವದೆಹಲಿ: ಜನೆವರಿ 12 (ಯು.ಎನ್.ಐ.) ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ ಪಂಜಾಬ್ ಸಹ ಉಸ್ತುವಾರಿ ರಾಘವ್ ಚಡ್ಡಾ ವಾಗ್ದಾಳಿ ನಡೆಸಿದರು.

ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಮತ್ತು ವಕ್ತಾರ ರಾಘವ್ ಚಡಾ,್ಡ ಭಾನುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನೆಯ ಹೊರಗೆ ನಡೆದಿದ್ದ ಅತಿಥಿ ಶಿಕ್ಷಕರ ಧರಣಿಯಲ್ಲಿ ಸಿಧು ಪಾಲ್ಗೊಂಡಿದ್ದರು. ಆದ ಕಾರಣ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ವಿರುದ್ಧ ವಾಗ್ದಾಳಿ ನಡೆಸಿ ಕಾಂಗ್ರೆಸ್ ನಾಯಕನನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ.

ಕೇಜ್ರಿವಾಲ್ ನಿವಾಸದ ಹೊರಗೆ ಸಿಧು ಧರಣಿ ಕುರಿತು ಕೇಳಿದ ಪ್ರಶ್ನೆಗೆ ಚಡ್ಡಾ, “ಮೊದಲೇ ನಾನು ಸಿಧು ಪಂಜಾಬ್ ರಾಜಕೀಯದ ರಾಖಿ ಸಾವಂತ್ ಎಂದು ಹೇಳಿದ್ದೆ. ಅವರಿಗೆ ನಾಟಕ ಮಾಡುವುದು ಹೇಗೆಂದು ತಿಳಿದಿದೆ. ಅವರ ಬಗ್ಗೆ ಗಂಭೀರ ಚರ್ಚೆಯ ಅಗತ್ಯವಿಲ್ಲ. ಅದರಲ್ಲೂ ಅವರ ಮೇಲೆ ಹೇಳಿಕೆಗಳನ್ನು ನೀಡುವುದು ನಿಷ್ಪ್ರಯೋಜಕ ಮತ್ತು ಸಿಧು ಅವರನ್ನು ಸ್ವತಃ ಅವರ ಕಾಂಗ್ರೆಸ್ ಪಕ್ಷವೇ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.

ಪಂಜಾಬ್ ಮತ್ತು ದೆಹಲಿಯ ಶಿಕ್ಷಣ ವ್ಯವಸ್ಥೆಯ ಸ್ಥಿತಿಯ ಬಗ್ಗೆ ಚರ್ಚೆಗೆ ದೆಹಲಿ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಅವರನ್ನು ಆಹ್ವಾನಿಸಿದಾಗ ಪಂಜಾಬ್ ಶಿಕ್ಷಣ ಸಚಿವರು ಓಡಿಹೋದರು ಎಂದು ಚಡ್ಡಾ ಹೇಳಿದರು.

ಪಂಜಾಬ್ ಕಾಂಗ್ರೆಸ್‍ನ ಆಂತರಿಕ ಸಮಸ್ಯೆಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಪಂಜಾಬ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಚಡ್ಡಾ, ಪಂಜಾಬ್‍ನಲ್ಲಿ ಇಂದು ಪಕ್ಷ ಅಪ್ರಸ್ತುತವಾಗುತ್ತಿದೆ. ಯಾವುದೇ ರಾಜಕೀಯ ಪ್ರಾಬಲ್ಯ ಉಳಿದಿಲ್ಲ. ಅವರು ತಮ್ಮಲ್ಲೇ ಜಗಳವಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕೇಜ್ರಿವಾಲ್ ನಿವಾಸದ ಹೊರಗೆ ಅತಿಥಿ ಶಿಕ್ಷಕರು ನಡೆಸಿದ ಧರಣಿಯಲ್ಲಿ ಸಿಧು ಪಾಲ್ಗೊಂಡ ನಂತರ ಎಎಪಿ ವಕ್ತಾರರು ಈ ಹೇಳಿಕೆ ನೀಡಿದ್ದಾರೆ. ದೆಹಲಿ ಸರ್ಕಾರದ ಅತಿಥಿ ಶಿಕ್ಷಕರು ತಮ್ಮ ಉದ್ಯೋಗಗಳನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು.

ಈ ವೇಳೆ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಸಿಧು, 22,000 ಅತಿಥಿ ಶಿಕ್ಷಕರು ಇಲ್ಲಿ ಬಂಧಿತ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

Share