Connect with us


      




ರಾಜಕೀಯ

ಕಾಂಗ್ರೆಸ್ ಪಾದಯಾತ್ರೆ; ಮುಖ್ಯಮಂತ್ರಿ ಮಾರ್ಮಿಕ ಮಾತು

Kumara Raitha

Published

on

ಬೆಂಗಳೂರು: ಜನೆವರಿ 06 (ಯು.ಎನ್.ಐ.)  ಕೋವಿಡ್ ಮಾರ್ಗಸೂಚಿ ಬಗ್ಗೆ ಚರ್ಚೆ ಆಗಿದೆ ಹಲವು ಸಂಘ ಸಂಸ್ಥೆಗಳು ಈ ಬಗ್ಗೆ ಅಭಿಪ್ರಾಯ ಹೇಳಿದ್ರು ಆದರೆ ಸೋಂಕಿನ ರೂಪುರೇಷೆ ನೋಡಿ ಬಳಿಕ ತೀರ್ಮಾನ ಮಾಡೋಣ ಎಂದು ಚರ್ಚೆ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ವಿವರಿಸಿದರು.

ಅವರಿಮದು ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಡಿಕೆಶಿ ಬಿಡಿ, ಅವರು ಕೆಪಿಸಿಸಿ ಅಧ್ಯಕ್ಷರು , ನನ್ನ ಸ್ನೇಹಿತರು ಎಂದು ಸೂಕ್ಷ್ಮವಾಗಿ ವ್ಯಂಗ್ಯವಾಡಿದರು. ಇದೇ ಸಂದರ್ಭದಲ್ಲಿ ಆದರೆ ಸಿದ್ದರಾಮಯ್ಯ ಸಿಎಂ ಆಗಿದ್ದವರು. ಅವರು ಹಾಲಿ ವಿಪಕ್ಷ ನಾಯಕ. ಅವರಿಗೆ ಕಾನೂನು ಬಗ್ಗೆ ಗೊತ್ತಿದೆ. ಅವರು ಕಾನೂನಿಗೆ ಗೌರವ ಕೊಡ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.

ಡಿಕೆಶಿ ಅವರು ಹೇಳಿದ ತಾಕತ್ತು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಈ ತಾಕತ್ತು, ಸೂರ್ಯ ಚಂದ್ರ ಇದರ ಬಗ್ಗೆ ಉತ್ತರ ಕೊಡಬೇಕಾಗಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

Share