Connect with us


      
ರಾಜಕೀಯ

ಕಾಂಗ್ರೆಸ್ ನಾಯಕರು ಬೀದಿನಾಟಕ ಮಾಡುತ್ತಿದ್ದಾರೆ: ಸಚಿವ ಸುಧಾಕರ್

Kumara Raitha

Published

on

ಬೆಂಗಳೂರು:ಜನೆವರಿ 09 (ಯು.ಎನ್.ಐ.) ರಾಜ್ಯ ಕಾಂಗ್ರೆಸ್ ನಾಯಕರು ಯಾವುದೇ ಬದ್ಧತೆಯಿಲ್ಲದೇ ಪಾಯಾತ್ರೆ ಹೆಸರಿನಲ್ಲಿ ಬೀದಿನಾಟಕ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಆರೋಪಿಸಿದರು.

ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸಿನವರು ಚುನಾವಣೆಗೋಸ್ಕರ ಕಾಂಗ್ರೆಸ್ ಬೀದಿ ನಾಟಕ ಮಾಡ್ತಿದ್ದಾರೆ. ಇದನ್ನು ನಾನು ಖಂಡಿಸ್ತಿವಿ ರಾಜ್ಯದಲ್ಲಿ ಕೊರೊನಾ ತುರ್ತು ಪರಿಸ್ಥಿತಿ ಇದೆ. ಈಗ ಪಾದಯಾತ್ರೆ ಮಾಡಿದ್ರೆ ಕೊರೊನಾ ಜಾಸ್ತಿ ಆಗುತ್ತದೆ. ಬಿಬಿಎಂಪಿ ಚುನಾವಣೆ ಗುರಿಯಾಗಿಟ್ಟುಕೊಂಡು ಇದು ಕಾಂಗ್ರೆಸ್ ನವರು ಕಾವೇರಿಗೆ ಮಾಡುತ್ತಿರುವ ಅಪಮಾನ ಎಂದು ಹೇಳಿದರು.ಇದು ನನಗೆ ಖೇದ ಉಂಟುಮಾಡಿದೆ. ಇದಕ್ಕೆ ನನ್ನ ದಿಕ್ಕಾರವಿದೆ. ಐದು ವರ್ಷ ಅಧಿಕಾರದಲ್ಲಿದ್ದಾಗ ಏನು ಮಾಡಿದ್ರು ಎಂದು ಪ್ರಶ್ನಿಸಿದರು. ಮೇಕೆದಾಟುಗೆ ಏನೆ ಒಳ್ಳೆ ಕೆಲಸ ಆಗಬೇಕು ಅಂದ್ರೆ ಬಿಜೆಪಿಯಿಂದ ಅದರಲ್ಲೂ ಬೊಮ್ಮಾಯಿ ಸರ್ಕಾರದಿಂದ ಮಾತ್ರ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಉಂಟಾಗುತ್ತಿದೆ ಎಂದು ಹೇಳಲಾಗುತ್ತಿರುವ  ಕೋವಿಡ್ ಕೇಸ್  ಕುರಿತು ಸುಳ್ಳು ಹೇಳ್ತಿದ್ದೀರಾ  ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಮಹಾರಾಷ್ಟ್ರದಲ್ಲಿ ಅಷ್ಟೊಂದು ಕೇಸ್ ಗಳು ಬರುತ್ತಿದ್ಯಾಲ್ಲಾ ಹಾಗಾದರೆ ಅದು ಸುಳ್ಳಾ..? ನಾವೇನಾದರೂ ಕೇಸ್ ಜಾಸ್ತಿ ಮಾಡಿ ಅಂದ್ವಾ..? ಅಲ್ಲಿರೋದು ನಿಮ್ಮದೇ ಸರ್ಕಾರ ಎಂದು ಡಿಕೆಶಿಗೆ ಟಾಂಗ್ ನೀಡಿದರು.

Share