Connect with us


      




ರಾಜಕೀಯ

ಬಿಬಿಎಂಪಿ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ‘ಕೈ’ ಪಕ್ಷ ಮನವಿ

Lakshmi Vijaya

Published

on

ಬೆಂಗಳೂರು: ಮೇ 13 (ಯು.ಎನ್.ಐ.) ಸುಪ್ರೀಂಕೋರ್ಟ್ ದೇಶದ ಎಲ್ಲ ಸ್ಥಳೀಯ ಸಂಸ್ಥೆಗಳು ಚುನಾವಣೆ ನಡೆಸಬೇಕು ತೀರ್ಪು ನೀಡಿದ ಹಿನ್ನಲೆ ಬಿಬಿಎಂಪಿ ಚುನಾವಣೆ ಘೋಷಣೆ ಮಾಡುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ.

ಕೆಪಿಸಿಸ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿರವರು,ಶಾಸಕರಾದ ರಿಜ್ವಾನ್ ಆರ್ಹದ್,  ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸೇರಿದಂತೆ ಹಲವರ ನಿಯೋಗ ಮನವಿ ಸಲ್ಲಿಸಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ ಬೆಂಗಳೂರುನಗರ ವಾರ್ಡ್ ವಿಂಗಡನೆ ಮಾಡಲು ಕಾಂಗ್ರೆಸ್ ಪಕ್ಷ ಸಹಕಾರ ನೀಡಲಾಯಿತು. ಅದರೆ ಬಿಜೆಪಿ ಪಕ್ಷ ತಮಿಷ್ಟದ ತಕ್ಕಂತೆ ವಾರ್ಡ್ ವಿಂಗಡನೆ ಮಾಡಲು ಹೊರಟಿತು. ಬಿ.ಬಿ.ಎಂ.ಪಿ.ಚುನಾವಣೆ ಮೀಸಲಾತಿಯನ್ನ ಕಾಂತ್ ರಾಜ್ ಆಯೋಗ ತೀರ್ಮಾನದಂತೆ ಕೈಗೊಳ್ಳಲಿ. ಹಿಂದುಳಿದ ವರ್ಗದವರಿಗೆ ಮೀಸಲಾತಿಯನ್ನ ಸಚಿವ ಸಂಪುಟದಲ್ಲಿ ತೀರ್ಮಾನಿಸಿ ರಾಜ್ಯ ಸರ್ಕಾರ ಚುನಾವಣೆ ನಡೆಸಲಿ .ಭಕ್ತವತ್ಸಲ ಸಮಿತಿ ವರದಿ ಕಾಯುವುದು ಬೇಡ ಇದರಿಂದ ಚುನಾವಣೆ ವಿಳಂಬವಾಗುತ್ತದೆ ಎಂದು ಹೇಳಿದರು.

Share