Connect with us


      




ಕರ್ನಾಟಕ

ಕಾಂಗ್ರೆಸ್ ಉಡಾಫೆ ಪಾದಯಾತ್ರೆ ನಡೆಸುತ್ತಿದೆ: ಸಿಎಂ

UNI Kannada

Published

on

ಬೆಂಗಳೂರು : ಜನೆವರಿ 09 (ಯು.ಎನ್.ಐ.) ಕೋವಿಡ್ ನಿಯಮ ಉಲ್ಲಂಘಿಸಿ ಉಡಾಫೆ ಪಾದಯಾತ್ರೆ ಮಾಡುತ್ತಿದ್ದಾರೆ ಸೂಕ್ತ ಕಾನೂನು ಕ್ರಮಕ್ಕೆ ಸೂಚಿಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

ಬೆಂಗಳೂರಿನ ಆರ್ ಟಿ ನಗರದಲ್ಲಿ ಮಾತನಾಡಿದ ಸಿಎಂ, ಕೋವಿಡ್ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಪಾದಯಾತ್ರೆ ಮಾಡುತ್ತಿರುವುದು ಸರಿಯಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಈಗಾಗಲೇ ನೋಟಿಸ್ ನೀಡಲಾಗಿದೆ. ನಮ್ಮ ಅಧಿಕಾರಿಗಳು ಈ ಬಗ್ಗೆ ಎಚ್ಚರಿಕ್ಕೆ ಸಹ ನೀಡಿದ್ದಾರೆ ಎಂದರು.

ಈ ಹಿಂದೆ 5 ವರ್ಷಗಳು ಅವರ ಅಧಿಕಾರ ಅವಧಿಯಲ್ಲಿ ಡಿಪಿಆರ್ ಸಲ್ಲಿಸಲೇ ಇಲ್ಲ. ಇದು ಸಲ್ಲಿಕೆಯಾಗಿದ್ದೂ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ. ಇವರಿಗೆ ಯಾರಿಗೂ ಬದ್ದತೆ ಇಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಆಗಲು ಇದನ್ನು ಮುಂದುವರೆಸಿಕೊಂಡು ಹೋಗಲಿಲ್ಲ. ಕಳೆದ ಮೂರು ವರ್ಷಗಳಿಂದಲೂ ಮೇಕೆದಾಟು ವಿಚಾರವೂ ಎಲ್ಲಿಯೂ ಚರ್ಚೆಗೆ ಬರಲಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಾದಯಾತ್ರೆ ಮಾಡ್ತಾ ಇದ್ದಾರೆ ಅಷ್ಟೇ ಎಂದರು.

ಈ ಹಿಂದೆ ಅವರ ಸರ್ಕಾರ ಅವಧಿಯಲ್ಲಿ ಈಗಾಗಲೇ ಅಪರಾಧಿ ಮನೋಭಾವದಿಂದ ಕಾಂಗ್ರೆಸ್ ನವರು ಇದಾರೆ. ಇದರಿಂದಾಗಿ ಜನರನ್ನ ಮರಳು ಮಾಡುವ ಸಲುವಾಗಿ ಈ ರೀತಿ ಮಾಡುತ್ತಿದ್ದಾರೆ. ಕಾಂಗ್ರೆಸ್ನವರಿಗೆ ಯಾವುದೇ ಬದ್ದತೆಯಿಲ್ಲ‌. ಎಲ್ಲರನ್ನು ಎಲ್ಲಾ ಸಂದರ್ಭದಲ್ಲಿ ಮೋಸ ಮಾಡೋಕೆ ಆಗೋದಿಲ್ಲ ಎಂದರು ಹೇಳಿದರು.

ಕಾವೇರಿ ವಿಚಾರದಲ್ಲಿ ತಾವು ಮುಖ್ಯಮಂತ್ರಿಯಾದ ಮೇಲೆ ಡಿಪಿಆರ್ ಅಪ್ರೂವಲ್ ಗೆ ಕಾವೇರಿ ಬೋರ್ಡ್ ಗೆ ಹೋಗಿದೆ. ಇದೇ ತಿಂಗಳಲ್ಲಿ ಸಭೆ ಇದೆ. ಅದರಲ್ಲಿ ಮುಂದೆ ಆಗಬೇಕಾದ ಕೆಲಸಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಸುಪ್ರೀಂ ಕೋರ್ಟ್ ನಲ್ಲೂ ಕೂಡ ಇದೇ ತಿಂಗಳಲ್ಲಿ ಪ್ರಕರಣ ಕೈಗೆತ್ತಿಕೊಳ್ಳುಲಿದ್ದಾರೆ. ಎನ್ವಿರಾನ್ಮೆಂಟ್ ಕ್ಲಿಯರೆನ್ಸ್ ಗೂ ಕೂಡ ನಾವು ಮನವಿ ಮಾಡಲಿದ್ದೇವೆ.

ಈ ಹಿಂದೆ ಜವಾಬ್ದಾರಿಯುತವಾದ ಸರ್ಕಾರ ನಡೆಸಿದವರೇ ಆದರೆ ಎಲ್ಲವನ್ನೂ ಅವರೂ ಗಮನಿಸಿದ್ರೆ. ಈ ತರಹ ಪಾದಯಾತ್ರೆ ಬೇಕಾಗಿರಲಿಲ್ಲ. ಕಾವೇರಿ ತೀರ್ಪೇನು? ಸುಪ್ರೀಂ ಕೋರ್ಟ್ ಆದೇಶವೇನು? ಎಲ್ಲವನ್ನೂ ಗಮನಿಸಿದ್ದರೆ ಪಾದಯಾತ್ರೆ ಮಾಡುತ್ತಿರಲಿಲ್ಲ. ಇದೆಲ್ಲ ಅವರಿಗೆ ಬೇಕಾಗಿರಲಿಲ್ಲ ಕೇವಲ ರಾಜಕಾರಣ ಬೇಕಾಗಿದೆಯಷ್ಟೆ ಎಂದರು.

Share