Connect with us


      




ರಾಜಕೀಯ

ನೀರಿಗಾಗಿ ನಡಿಗೆ ನಿಲ್ಲುವುದಿಲ್ಲ: ನಾಯಕರ ಪುನರುಚ್ಛಾರ

Kumara Raitha

Published

on

ಬೆಂಗಳೂರು: ಜನೆವರಿ 05 (ಯು.ಎನ್.ಐ.) ಮೇಕೆದ಻ಟು ಯೋಜನೆ ಜಾರಿಗಾಗಿ ಒತ್ತಾಯಿಸಿ ಕಾಂಗ್ರೆಸ್  ನಡೆಸುತ್ತಿರುವ ಪಾದಯಾತ್ರೆ ನಿಲ್ಲುವ ಪ್ರಶ್ನೆಯೇ ಇಲ್ಲವೆಂದು ಪಕ್ಷದ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿದರು. ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಪ್ರತಿಬಂಧಕಾಜ್ಞೆಗಳ ಹಿನ್ನೆಲೆಯಲ್ಲಿ ಮೇಕೆದಾಟು ಪಾದಯಾತ್ರೆ ನಿಲ್ಲುತ್ತದೆಯೇ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ನಾವು ಪಾದಯಾತ್ರೆ ಮಾಡಿಯೇ ಮಾಡ್ತೇವೆ. ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸಲ್ಲ ನಾವು ಜನರನ್ನು ಉಳಿಸುವ ಕೆಲಸವನ್ನೂ‌ ಮಾಡ್ತೇವೆ. ಪಾದಯಾತ್ರೆಯಿಂದ ಯಾರಿಗೂ ತೊಂದರೆಯಾಗಲ್ಲ ಎಂದರು.

ಪಾದಯಾತ್ರೆಗೆ ನಿಲ್ಲಿಸಲು ಟಫ್ ರೂಲ್ಸ್ ತಂದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅದೆಲ್ಲ ನನಗೆ ಗೊತ್ತಿಲ್ಲ, ಆದರೆ ಪಾದಯಾತ್ರೆ ಮಾಡಿಯೇ ಮಾಡ್ತೇವೆ ಎಂದು ಪುನರುಚ್ಛರಿಸಿದರು.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ ಇದು ಕೋವಿಡ್ ಲಾಕ್ ಡೌನ್ ಅಲ್ಲ ಇದು ಬಿಜೆಪಿ ಲಾಕ್ ಡೌನ್ ಇದು. ಯಾವ  ಕರ್ಫ್ಯೂ  ಇಲ್ಲ , ರಾಜಕೀಯ ಟಫ್ ರೂಲ್ಸ್ ತರ್ತಿದ್ದಾರೆ . ಅದನ್ನು  ಅವರು ಅಧಿಕಾರಿಗಳ ಕೈಯಲ್ಲಿ ಬರೆಸಿದ್ದಾರೆ.  ನಾವು ರ್ಯಾಲಿ ಮಾಡುತ್ತಿರುವುದು ಕುಡಿಯುವ ನೀರಿಗಾಗಿ . ರ್ಯಾಲಿಯಲ್ಲಿ ಭಾಗವಹಿಸಿ ಎಂದು ಬೆಂಗಳೂರಿನ ಜನರಿಗೆ , ರೈತರಿಗೆ ಪ್ರಾರ್ಥನೆ ಮಾಡುತ್ತಿದ್ದೇವೆ ಎಂದರು.

ಕೋವಿಡ್ ಪಾಸಿಟಿವ್ ಯಾರ್ ಯಾರಿಗೆ ಆಯ್ತು ಅಂತ ತಿಳಿಸಿದ್ರೆ ನಾವು ಆ ಪೇಶೆಂಟ್ ಮೀಟ್ ಮಾಡುತ್ತೇವೆ. ಅನಗತ್ಯ ಪ್ರತಿಬಂಧಕಗಳನ್ನು ತಂದು ವರ್ತಕರು,  ಡ್ರೈವರ್,  ಬೀದಿ ವ್ಯಾಪಾರ ಮಾಡುವವರ ಕೊಲೆ ಮಾಡುತ್ತಿದ್ದಾರೆ .  ನನ್ನ ಮೇಲೆ , ಸಿಎಲ್ ಪಿ ನಾಯಕರ ಮೇಲೆ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಕೇಸ್ ಹಾಕಿದ್ದಾರೆ  ಇವರಿಗೆ ಬೇರೆ ರೂಲ್ಸ್, ನಮಗೆ ಬೇರೆ ರೂಲ್ಸ್ , ಮೋದಿ ಅವರು ರ್ಯಾಲಿ ಮಾಡಿದ್ರು ಅದಕ್ಕೇನು ಕಾನೂನು ಇಲ್ವ ಎಂದು ಪ್ರಶ್ನಿಸಿದರು.

ನಮ್ಮ ಶಾಸಕಾಂಗ ಪಕ್ಷದ ನಾಯಕರು, ಬೆಂಗಳೂರು ಶಾಸಕರ ಜೊತೆಗೆ ಮಾತಾಡುತ್ತೇನೆ. ನಾವು ರ್ಯಾಲಿ ಮಾಡುವುದಿಲ್ಲ, ಧರಣ ಮಾಡುವುಸದಿಲ್ಲ. ನೀರಿಗಾಗಿ ನಡಿಗೆ ಮಾಡುತ್ತೇವೆ ಅಷ್ಟೇ.  ಪಾದಯಾತ್ರೆ ಅಂತ ಯಾಕೆ ಎನ್ನುತ್ತೀರಾ ನೀರಿಗಾಗಿ ನಡಿಗೆ;  ಮೇಕೆದಾಟು ಪಾದಯಾತ್ರೆ ಹೆಸರು ಬದಲಾವಣೆ ಮಾಡಿಕೊಂಡು ನೀರಿಗಾಗಿ ನಡಿಗೆ ಮಾಡುತ್ತೇವೆ ಎಂದು ಹೇಳಿದರು.

Share