Published
6 months agoon
By
Vanitha Jainಬೆಂಗಳೂರು: ಜನೆವರಿ 05 (ಯು.ಎನ್.ಐ.) ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಧಾನಿ ಹುದ್ದೆ ಸಂವಿಧಾನಾತ್ಮಕವಾಗಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಏಕ ಕಾಲದಲ್ಲಿ ಕೇಂದ್ರ ಮತ್ತು ರಾಜ್ಯಗಳಲ್ಲಿ ಏಕ ಚಕ್ರಾಧಿಪತ್ಯ ಇರಲು ಹೆಚ್ಚಿನ ಸಂದರ್ಭಗಳಲ್ಲಿ ಸಾಧ್ಯವಿರುವುದಿಲ್ಲ. ಪ್ರಧಾನಿ ದೇಶಕ್ಕೆ ಪ್ರಧಾನಿ. ಮತ್ತು ಆ ಹುದ್ದೆಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಅಲಂಕರಿಸಿರುವ ಪ್ರಧಾನಿ ದೇಶದಾದ್ಯಂತ ಎಲ್ಲಿ ಸಂಚರಿಸಿದರೂ ಈ ಹಿಂದಿನ ಕಾಂಗ್ರೆಸ್ ಸರ್ಕಾರಗಳೂ ನಿರ್ಣಯಿಸಿ ಅನುಸರಿಸಿದ ಅಭೇದ್ಯ ರಕ್ಷಣಾ ವ್ಯವಸ್ಥೆ ಇಂದಿನ ಅನಿವಾರ್ಯತೆ ಎಂದು ರಾಜ್ಯ ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.
ಪೂರ್ವನಿಗದಿತ ಕಾರ್ಯಕ್ರಮದಂತೆ ಮಾನ್ಯ ಪ್ರಧಾನ ಮಂತ್ರಿಗಳ ಭೇಟಿಯ ಕುರಿತು ಸಾಕಷ್ಟು ಪೂರ್ವಭಾವಿ ಮಾಹಿತಿ ಹಾಗೂ ಸಾಕಷ್ಟು ಪೂರ್ವ ತಯಾರಿ ನಡೆದಿದ್ದರೂ, ಪಂಜಾಬಿನಲ್ಲಿ ಆಡಳಿತ ನಡೆಸುತ್ತಿರುವ ಅಲ್ಲಿನ ಕಾಂಗ್ರೆಸ್ ಸರಕಾರ ನಡೆದುಕೊಂಡಿರುವ ಅಸಭ್ಯ ರೀತಿ ಸರ್ವಥಾ ಖಂಡನೀಯ. ಮಾನ್ಯ ಪ್ರಧಾನ ಮಂತ್ರಿಗಳು ನಡು ರಸ್ತೆಯಲ್ಲಿ 20 ನಿಮಿಷಗಳ ಕಾಲ ಕಾಯುವಂತೆ ಮಾಡಿರುವುದು ಬಹುದೊಡ್ಡ ಅಕ್ಷಮ್ಯ ರಕ್ಷಣಾ ಲೋಪ. ದೇಶದ ಜನತೆ ಈ ರೀತಿಯ ಅಸಹನೆಯ ಮತ್ತು ಬೇಜಾವ್ದಾರಿಯ ವರ್ತನೆಯನ್ನು ಯಾವತ್ತೂ ಕ್ಷಮಿಸುವುದಿಲ್ಲ ಎಂದು ತಿಳಿಸಿದ್ದಾರೆ.
ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆಗಳನ್ನು ಸ್ವೀಕರಿಸಿ ಒಗ್ಗಿಕೊಳ್ಳುವ ಮನಸ್ಸಿಲ್ಲದ ಕಾಂಗ್ರೆಸ್ ತನ್ನ ರಾಜಕೀಯ ಅಸಹನೆಯ ಮತ್ತು ದ್ವೇಷದ ನೀಚ ವರ್ತನೆಯನ್ನು ಜಗಜ್ಜಾಹೀರಾಗುವಂತೆ ಮಾಡಿದೆ ಎಂದು ತಿಳಿಸಿದ್ದಾರೆ.
ಶತಮಾನಗಳ ಇತಿಹಾಸವಿರುವ, ಈ ದೇಶವನ್ನು ಮಾತು ಈ ದೇಶದ ಹೆಚ್ಚಿನ ರಾಜ್ಯಗಳನ್ನು ಆನೇಕ ದಶಕಗಳ ಕಾಲ ಆಳಿದ ಅನುಭವ ಇರುವ ಹಾಗೂ ದೇಶದ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ ಹೋರಾಟ ತಮ್ಮ ಪಿತ್ರಾರ್ಜಿತ ಆಸ್ತಿ ಎಂದು ಘೋಷಿಸಿಕೊಂಡಿರುವ ಕಾಂಗ್ರೆಸ್ ಪಕ್ಷದ ಈ ಬೇಜವಾಬ್ದಾರಿವರ್ತನೆ ಆ ಪಕ್ಷದ ನಾಯಕರ ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನವಿರೋಧಿ, ಜನವಿರೋಧಿ ಮತ್ತು ರಾಜಕೀಯ ಅಸಹನೆಯ ಮಾನಸಿಕತೆಯನ್ನು ಪ್ರತಿನಿಧಿಸುತ್ತಿದೆ. ಈ ಕಾಂಗ್ರೆಸ್ ಮಾನಸಿಕತೆಯಿಂದ ಮುಕ್ತವಾದ ಭಾರತದನಿರ್ಮಾಣವೇ ಇಂದಿನಅನಿವಾರ್ಯತೆ. ಇನ್ನಾದರೂ ತಿದ್ದಿಕೊಳ್ಳದಿದ್ದಲ್ಲಿ ದೇಶವನ್ನು ಆಳಿದ ಪಕ್ಷ ಅಳಿದ ಪಕ್ಷವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ನೀಚ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತಾ ದೇಶದ ಜನತೆಯ ಕ್ಷಮೆ ಕೋರುವಂತೆ ಆಗ್ರಹಿಸುತ್ತೇನೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ತಿಳಿಸಿದ್ದಾರೆ.
“ಡಿಕೆಶಿ ಮಾತಾಡಲು ಅವಕಾಶ ಕೊಟ್ಟಿಲ್ಲ” – ಶಿಸ್ತು ಸಮಿತಿ ನೋಟಿಸ್ಗೆ ಲಕ್ಷ್ಮೀನಾರಾಯಣ ಟೀಕಾಪ್ರಹಾರ
ರಾಜ್ಯದಲ್ಲಿ ಮಳೆ ಆರ್ಭಟ: ನಾಳೆ ಸಭೆ ಕರೆದ ಮುಖ್ಯಮಂತ್ರಿ ಬೊಮ್ಮಾಯಿ
“ಕೂಡಲ ಸಂಗಮವು ಜನಾಕರ್ಷಣೆಯ ತಾಣವಾಗಬೇಕು” – ಸಿಎಂ ಬೊಮ್ಮಾಯಿ
45.56 ಕೋಟಿ ರೂ. ವೆಚ್ಚದಲ್ಲಿ ಕಿತ್ತೂರು ಅರಮನೆ, ಕೋಟೆ ಸಂರಕ್ಷಣೆ, ಜೀರ್ಣೋದ್ಧಾರ
ವಿದ್ಯುತ್ ಬಿಲ್ ಪಾವತಿಗೆ 6 ತಿಂಗಳ ಕಾಲಾವಕಾಶ ಇಲ್ಲ : ಬೆಸ್ಕಾಂ ಸ್ಪಷ್ಟನೆ
‘ವೀರೇಂದ್ರ ಹೆಗ್ಗಡೆಯವರ ಅನುಭವ ಇಡೀ ದೇಶಕ್ಕೆ ಲಾಭ ತಂದುಕೊಡಲಿದೆ’