Connect with us


      
ಕ್ರೀಡೆ

ಕೂಚ್ ಬೆಹಾರ್ ಟ್ರೋಫಿ: ಟೂರ್ನಿ ಮುಂದೂಡಿದ ಬಿಸಿಸಿಐ

UNI Kannada

Published

on

ಮುಂಬೈ, ಜ 11(ಯುಎನ್‌ ಐ) ದೇಶಾದ್ಯಂತ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ಕ್ರಿಕೆಟ್ ಟೂರ್ನಿಯನ್ನು ಮುಂದೂಡಲಾಗಿದೆ. ರಣಜಿ ಟ್ರೋಫಿ, ಕರ್ನಲ್ ಸಿ ಕೆ ನಾಯ್ಡು ಟ್ರೋಫಿಗಳನ್ನು ಈಗಾಗಲೇ ಮುಂದೂಡಲಾಗಿದೆ, ಈಗ ಹೊಸದಾಗಿ ಅಂಡರ್ -19 ಕೂಚ್ ಬೆಹಾರ್ ನಾಕೌಟ್ ಪಂದ್ಯಗಳನ್ನು ಮುಂದೂಡಿರುವುದಾಗಿ ಬಿಸಿಸಿಐ ಘೋಷಿಸಿದೆ.

ಪ್ರಸ್ತುತ ಪಂದ್ಯಾವಳಿ ನಡೆಯುತ್ತಿರುವ ಪುಣೆಯಲ್ಲಿ ಕೊರೊನಾ ಪ್ರಕರಣಗಳ ತೀವ್ರ ಏರಿಕೆಯ ಜೊತೆಗೆ ಕೆಲವು ಆಟಗಾರರು ( ಮುಂಬೈ, ಸೌರಾಷ್ಟ್ರ) ಸೇರಿದಂತೆ ಸೋಂಕಿಗೆ ಒಳಗಾಗಿರುವುದರಿಂದ ಪಂದ್ಯಾವಳಿಯನ್ನು ಮುಂದೂಡುತ್ತಿರುವುದಾಗಿ ಬಿಸಿಸಿಐ ಹೇಳಿದೆ ಏತನ್ಮಧ್ಯೆ, ಈ ಟೂರ್ನಿಯಲ್ಲಿ ಮುಂಬೈ, ಛತ್ತೀಸ್‌ಗಢ, ಜಾರ್ಖಂಡ್, ರಾಜಸ್ಥಾನ, ವಿದರ್ಭ, ಬಂಗಾಳ, ಹರಿಯಾಣ ಹಾಗೂ ಮಹಾರಾಷ್ಟ್ರ ತಂಡಗಳು ಈಗಾಗಲೇ ಕ್ವಾರ್ಟರ್‌ಫೈನಲ್ ತಲುಪಿವೆ.

Share