Connect with us


      
ಸಿನೆಮಾ

“ನನಗೂ ಕೊರೊನಾ ಬಂದಿದೆ, ಒಂಟಿಯಾಗಿರುವುದು ತುಂಬಾ ಕಷ್ಟ” – ಖುಷ್ಬು

UNI Kannada

Published

on

ಜನೆವರಿ 10 (ಯು.ಎನ್.ಐ.) ಚಿತ್ರರಂಗದಲ್ಲಿ ಕೊರೊನಾ ಸದ್ದು ಮಾಡುತ್ತಿದೆ. ಚಿತ್ರರಂಗದ ಸೆಲೆಬ್ರಿಟಿಗಳು, ಟಾಪ್ ಹೀರೋಯಿನ್‌ಗಳು ಸಾಲು ಸಾಲಾಗಿ ಕೊರೊನಾದಿಂದ ಬಳಲುತ್ತಿದ್ದಾರೆ. ಈಗಾಗಲೇ ಟಾಲಿವುಡ್ ನ ಸ್ಟಾರ್ ಹೀರೋಗಳೆಂದರೆ ಮಹೇಶ್ ಬಾಬು, ಲಕ್ಷ್ಮಿ ಮಂಚು ಮತ್ತು ಮನೋಜ್ ಮಂಚು ಮತ್ತು  ಹಿರಿಯ ನಟ ರಾಜೇಂದ್ರ ಪ್ರಸಾದ್ ಸಹ ಸಾಂಕ್ರಾಮಿಕ ರೋಗಕ್ಕೆ ಗುರಿಯಾಗಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕಕ್ಕೆ ತೆರಳಿದ್ದ ತಮಿಳು ಸ್ಟಾರ್ ಹೀರೋ ಕಮಲ್ ಹಾಸನ್ ಗೂ ಕೂಡ ಕೊರೊನಾ ಕಾಣಿಸಿಕೊಂಡಿದ್ದು, ಇಂದು ಹಿರಿಯ ನಟಿ ಶೋಭನಾಗೂ ಕೂಡ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟಿದೆ. ಈಗ ಮತ್ತೊಬ್ಬ ಹಿರಿಯ ನಟಿಗೂ ಕೊರೊನಾ ಸೋಂಕು ತಗುಲಿದೆ.

ಪ್ರಮುಖ ನಟಿ ಮತ್ತು ತಮಿಳು ಬಿಜೆಪಿ ನಾಯಕಿ ಖುಷ್ಬೂ ಸಂದರ್ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. “ಒಟ್ಟಿನಲ್ಲಿ ಕರೋನಾ ಬಂದಿದೆ. ನಾನು ಕೋವಿಡ್ ಕೊನೆಯ ಎರಡು ಅಲೆಗಳಿಂದ ಪಾರಾಗಿದ್ದರೂ ಈ ಬಾರಿ ನನಗೂ ಕರೊನಾ ಪಾಸಿಟಿವ್ ಆಗಿದೆ. ನಿನ್ನೆ ಸಂಜೆಯವರೆಗೆ ನನಗೆ ಯಾವುದೇ ರೋಗಲಕ್ಷಣಗಳಿರಲಿಲ್ಲ ಮತ್ತು ನಂತರ ಮೂಗು ಸೋರಲು ಪ್ರಾರಂಭಿಸಿತು. ಪರೀಕ್ಷೆಯನ್ನು ಮಾಡಿಸಿದ ನಂತರ ನನಗೆ ಕೋವಿಡ್ ಇದೆ ಎಂಬುದು ತಿಳಿದುಬಂದಿದೆ. ಪ್ರಸ್ತುತ ಹೋಂ ಐಸೋಲೇಶನ್‌ನಲ್ಲಿದ್ದೇನೆ, ಒಂಟಿಯಾಗಿರುವುದು ತುಂಬಾ ಕಷ್ಟ. ಆದರೆ ತಪ್ಪಿದ್ದಲ್ಲ. ಹಾಗಾಗಿ ಮುಂದಿನ 5 ದಿನಗಳ ಕಾಲ ನನಗೆ ಮನರಂಜನೆ ನೀಡಿ.” ಎಂದು ಖುಷ್ಬೂ ಅವರು ತಮಾಷೆಯ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.

Share