Connect with us


      




ದೇಶ

ಅಮ್ನೆಸ್ಟಿ ಇಂಡಿಯಾ ಮಾಜಿ ಮುಖ್ಯಸ್ಥರಿಗೆ ಹಿನ್ನಡೆ; CBI ಕ್ಷಮೆ ಕೇಳಬೇಕಾಗಿಲ್ಲ ಎಂದ ಕೋರ್ಟ್

Lakshmi Vijaya

Published

on

ನವದೆಹಲಿ: ಏಪ್ರಿಲ್ 08 (ಯು.ಎನ್.ಐ) ಅನುಮತಿಯಿಲ್ಲದೆ ದೇಶವನ್ನು ತೊರೆಯಬಾರದು ಎಂದು ಆಮ್ನೆಸ್ಟಿ ಇಂಡಿಯಾದ ಮಾಜಿ ಮುಖ್ಯಸ್ಥ ಆಕಾರ್ ಪಟೇಲ್‌ಗೆ ದೆಹಲಿ ಕೋರ್ಟ್ ಸೂಚಿಸಿದೆ. ಯುಎಸ್‌ ಪ್ರವಾಸವನ್ನು ತಡೆದ ಸಿಬಿಐ ಲಿಖಿತ ಕ್ಷಮೆಯಾಚನೆ ಕೇಳಬೇಕೆಂದು ಸಿಬಿಐಗೆ ಸೂಚಿಸಿದ ನಿನ್ನೆಯ ಆದೇಶವನ್ನು ನ್ಯಾಯಾಲಯ ತಡೆಹಿಡಿದಿದೆ.

ಬುಧವಾರ ಅಮೆರಿಕಕ್ಕೆ ಹಾರುವುದನ್ನು ತಡೆದ ನಂತರ ನ್ಯಾಯಾಲಯದ ಮೊರೆ ಹೋಗಿದ್ದ ಆಕಾರ್ ಪಟೇಲ್ ಅವರಿಗೆ ರಿಲೀಫ್ ನೀಡಿದ್ದ ವಿಶೇಷ ನ್ಯಾಯಾಲಯದ ನಿನ್ನೆಯ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯ ಮೇಲೆ ದೆಹಲಿ ಸೆಷನ್ಸ್ ನ್ಯಾಯಾಲಯವು ಈ ಕ್ರಮ ಕೈಗೊಂಡಿದೆ.

ಮುಂದಿನ ವಿಚಾರಣೆಯನ್ನ ಮಂಗಳವಾರ ಮತ್ತೆ ಕೈಗೆತ್ತಿಕೊಳ್ಳಲಾಗುವುದು.

ದೆಹಲಿ ಸೆಷನ್ಸ್ ಕೋರ್ಟ್ ಆದೇಶದಂತೆ ಆಕರ್ ಪಟೇಲ್  ಅವರು ಸದ್ಯಕ್ಕೆ ವಿದೇಶಕ್ಕೆ ಹೋಗಲು ಸಾಧ್ಯವಿಲ್ಲ ಮತ್ತು ಸಿಬಿಐ ಯಾವುದೇ ಕ್ಷಮೆಯನ್ನು ಕೇಳಬೇಕಾಗಿಲ್ಲ.

ಆಕರ್  ಪಟೇಲ್ ಅವರು ನಿನ್ನೆ ರಾತ್ರಿ ಯುಎಸ್ ಗೆ ಹಾರುವುದನ್ನು ಸಿಬಿಐ ತಡೆದಿತ್ತು. ಸೆಷನ್ಸ್ ಕೋರ್ಟ್ ಆದೇಶದ ಬಳಿಕವೂ ತಮ್ಮನ್ನು ವಿದೇಶಕ್ಕೆ ಹೋಗದಂತೆ ತಡೆಯಲಾಗಿದೆ ಎಂದು  ಸಿಬಿಐ ಹೊರಡಿಸಿದ್ದ ಲುಕ್ ಔಟ್ ನೋಟಿಸ್ ವಿರುದ್ಧ ಆಕರ್ ಪಟೇಲ್ ಆರೋಪಿಸಿದ್ದರು. ಈ ವಾರದಲ್ಲಿ ಆಕರ್ ಪಟೇಲ್ ವಿದೇಶಕ್ಕೆ ಹೋಗದಂತೆ ಸಿಬಿಐ  2 ಬಾರಿ ತಡೆದಿದೆ ಎಂದು ಆಕರ್ ಪಟೇಲ್ ಆರೋಪಿಸಿದ್ದಾರೆ.

ಅಮ್ನೆಸ್ಟಿ ಇಂಡಿಯಾ ಸಂಸ್ಥೆ ಮೇಲೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ನಿಯಮಗಳ ಉಲ್ಲಂಘನೆ ಮಾಡಿದ ಆರೋಪವಿದೆ. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಈ ಸಂಬಂಧ ಆಗ ಅಮ್ನೆಸ್ಟಿ ಇಂಡಿಯಾದ ಮುಖ್ಯಸ್ಥರಾಗಿದ್ದ ಆಕರ್ ಪಟೇಲ್ ವಿರುದ್ಧ ಸಿಬಿಐ ಲುಕೌಟ್ ಸುತ್ತೋಲೆ ಹೊರಡಿಸಿತ್ತು. ವಿದೇಶಕ್ಕೆ ಹೋಗದಂತೆ ನಿರ್ಬಂಧಿಸಲು ಲುಕೌಟ್ ಸುತ್ತೋಲೆ ನೀಡಲಾಗುತ್ತದೆ

 

Share